ಅಮೆರಿಕದ ಎಂಜಿನಿಯರ್ ಜತೆ ವಿವಾಹ ಸಿದ್ಧತೆ ನಡೆಸಿದ್ದರು ಕಿರುತೆರೆ ನಟಿ ವೈಶಾಲಿ

ಇಂದೋರ್: ಮಧ್ಯಪ್ರದೇಶದ ಇಂದೋರ್‌ನ ತಮ್ಮ ನಿವಾಸದಲ್ಲಿ ಭಾನುವಾರ ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ ವೈಶಾಲಿ ಟಕ್ಕರ್ ಅವರು ಡಿಸೆಂಬರ್‌ನಲ್ಲಿ ಅಮೆರಿಕದ ಸಾಫ್ಟ್‌ವೇರ್ ಇಂಜಿನಿಯರ್‌ವೊಬ್ಬರನ್ನು ವಿವಾಹವಾಗಲು ಸಿದ್ಧತೆ ನಡೆಸಿದ್ದರು ಎಂಬ ಸಂಗತಿ ಗೊತ್ತಾಗಿದೆ.
ಇದನ್ನೂ ಓದಿ: ನೇಣಿಗೆ ಶರಣಾದ ಖ್ಯಾತ ಕಿರುತೆರೆ ನಟಿ ವೈಶಾಲಿ ಠಕ್ಕರ್: ಡೆತ್ನೋಟ್ ಪತ್ತೆ
ದೀಪಾವಳಿಯ ನಂತರ ಮದುವೆಯ ಶಾಪಿಂಗ್ ಮತ್ತು ಪಾರ್ಟಿಯನ್ನು ಆಯೋಜಿಸಲು ವೈಶಾಲಿ ಚಿಂತನೆ ಹೊಂದಿದ್ದರು ಎನ್ನಲಾಗಿದೆ.
ಆದರೆ, ತಮ್ಮ ನೆರೆಹೊರೆಯವರ ಕಿರುಕುಳಕ್ಕೆ ಒಳಗಾಗಿ ಭಾನುವಾರ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವೈಶಾಲಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಟಿವಿ ನಟ ವಿಕಾಸ್ ಸೇಥಿ ಮತ್ತು ಅವರ ಪತ್ನಿ ಜಾನ್ವಿ ರಾಣಾ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ವೈಶಾಲಿ ಸಾಯುವುದಕ್ಕೂ ಎರಡು ದಿನಗಳ ಮೊದಲು ಆವರೊಂದಿಗೆ ಮಾತನಾಡಿದ್ದಾಗಿ ವಿಕಾಸ್ ದಂಪತಿ ಹೇಳಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಸಾಫ್ಟ್‌ವೇರ್ ಎಂಜಿನಿಯರ್ ಮಿತೇಶ್ ಅವರೊಂದಿಗೆ ಸಪ್ತಪದಿ ತುಳಿಯಲು ವೈಶಾಲಿ ಸಿದ್ಧತೆಯಲ್ಲಿ ತೊಡಗಿದ್ದರು ಎಂದು ಅವರು ತಿಳಿಸಿದ್ದಾರೆ.
‘ದುಡ್ಡಿನ ವಿಚಾರವೊಂದಕ್ಕಾಗಿ ವೈಶಾಲಿ ಅವರಿಗೆ ಇತ್ತೀಚೆಗೆ ಕರೆ ಮಾಡಿದ್ದೆ. ಶಾಪಿಂಗ್‌ಗಾಗಿ ಮುಂಬೈಗೆ ಬರುವ ಯೋಜನೆ ಇದೆ. ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ವೈಶಾಲಿ ನನಗೆ ತಿಳಿಸಿದ್ದಳು’ ಎಂದು ಜಾನ್ವಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಮಿತೇಶ್ ಬಗ್ಗೆ ಐದು ತಿಂಗಳ ಹಿಂದೆ ವೈಶಾಲಿ ನಮಗೆ ಹೇಳಿದ್ದಳು. ನಾನು ಅವರೊಂದಿಗೆ ಮಾತನಾಡಿದ್ದೇನೆ. ಅವರು ಒಳ್ಳೆಯ ಸ್ವಭಾವದವರಾಗಿದ್ದರು’ ಎಂದು ಜಾನ್ವಿ ಹೇಳಿದ್ದಾರೆ.
ವೈಶಾಲಿ ಸಾವನ್ನು ಆರಂಭದಲ್ಲಿ ನಾವು ನಂಬಲೇ ಇಲ್ಲ. ಈ ಬಗ್ಗೆ ವಿಚಾರಿಸಲು ಅವರ ತಂದೆಗೆ ಕರೆ ಮಾಡಿದ್ದೆವು. ಅದಾಗಲೇ ಅವರು ಅಂತಿಮ ವಿಧಿವಿಧಾನದಲ್ಲಿ ತೊಡಗಿದ್ದರು. ಅದನ್ನು ಕೇಳಿ ನಾವು ಆಘಾತಕ್ಕೀಡಾದೆವು ಎಂದು ವಿಕಾಸ್ ದಂಪತಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.