ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಹಾನಾಯಕ' ಧಾರಾವಾಹಿ ಪ್ರಸಾರ ಮಾಡದಿರುವುದಕ್ಕೆ ವೀಕ್ಷಕರ ಆಕ್ಷೇಪ

Last Updated 20 ಸೆಪ್ಟೆಂಬರ್ 2020, 15:19 IST
ಅಕ್ಷರ ಗಾತ್ರ

ಬೆಂಗಳೂರು: ಡಾ. ಬಿ.ಆರ್.‌ ಅಂಬೇಡ್ಕರ್ ಅವರ ಜೀವನಗಾಥೆ ಸಾರುವ 'ಮಹಾನಾಯಕ' ಧಾರಾವಾಹಿಯು‌ ಭಾನುವಾರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗದಿರುವುದಕ್ಕೆ ಹಲವು ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6.30ಗಂಟೆಗೆ ಈ ಸೀರಿಯಲ್ ಪ್ರಸಾರವಾಗುತ್ತಿತ್ತು. ಶನಿವಾರ ಸೀರಿಯಲ್ ಪ್ರಸಾರವಾಗಿತ್ತು. ಆದರೆ, ಇಂದು ಧಾರಾವಾಹಿ ಪ್ರಸಾರವಾಗಿಲ್ಲ. ಹಾಗಾಗಿ, ಇದರ ಪ್ರಸಾರ ಸ್ಥಗಿತಗೊಂಡಿದೆಯೇ ಎಂಬ ಅನುಮಾನ ವೀಕ್ಷಕರಿಗೆ ಕಾಡುತ್ತಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

'ಭಾನುವಾರದಂದು 'ಪಾಪ್ ಕಾರ್ನ್‌ ಮಂಕಿ ಟೈಗರ್' ಸಿನಿಮಾಕ್ಕೆ ಈ ಸೀರಿಯಲ್ ಅವಧಿಯನ್ನು ಮೀಸಲಿಡಲಾಗಿತ್ತು. ಹಾಗಾಗಿ, 'ಮಹಾನಾಯಕ' ಧಾರಾವಾಹಿ ‌ಪ್ರಸಾರವಾಗಿಲ್ಲ. ಎಂದಿನಂತೆ‌ ಮುಂದಿನ ವಾರ‌ ನಿಗದಿತ ಸಮಯಕ್ಕೆ‌ ಪ್ರಸಾರವಾಗಲಿದೆ' ಎಂದು‌‌‌ ಜೀ ಕನ್ನಡ ವಾಹಿನಿ ತಿಳಿಸಿದೆ.

ಈ ಧಾರಾವಾಹಿಯ ಸ್ಥಗಿತಕ್ಕೆ ಆಗ್ರಹಿಸಿ ಕೆಲವು ವಾರಗಳ ಹಿಂದೆ ಬೆದರಿಕೆ‌ ಕರೆಗಳು ಕೂಡ‌‌ ಬಂದಿದ್ದ ಹಿನ್ನೆಲೆಯಲ್ಲಿ ಅಶೋಕನ ನಗರ ‌ಪೊಲೀಸ್ ಠಾಣೆಗೆ‌ ವಾಹಿನಿಯು ಮಾಹಿತಿ‌ ನೀಡಿತ್ತು. ಆದರೆ, ಯಾವುದೇ ದೂರು ದಾಖಲಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT