ಬುಧವಾರ, ಜೂನ್ 3, 2020
27 °C

ವೀಕೆಂಡ್‌ ವಿತ್ ರಮೇಶ್‌ | ಯಶ್, ಪುನೀತ್ ರಾಜ್‌ಕುಮಾರ್ ಸಂಚಿಕೆ ಮತ್ತೊಮ್ಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಪ್ರಿಯ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್‌’ನಲ್ಲಿ ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಭಾಗವಹಿಸಿದ್ದನ್ನು ಅವರ ಅಭಿಮಾನಿಗಳು ಮರೆಯಲಿಕ್ಕಿಲ್ಲ.

ಈಗ ಅವರಿಗೆ ಒಂದು ಖುಷಿಯ ಸುದ್ದಿ ಇದೆ. ಈ ಇಬ್ಬರು ಸ್ಟಾರ್‌ಗಳು ಭಾಗವಹಿಸಿದ್ದ ಕಂತುಗಳು ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ಮರುಪ್ರಸಾರ ಆಗಲಿವೆ.

‘ಹಿಂದೆ ಪ್ರಾವಿಜನ್ ಸ್ಟೋರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ನವೀನ್ ಕುಮಾರ್ ಅವರು ಯಶ್ ಆಗಿದ್ದು ಹೇಗೆ ಅನ್ನುವುದನ್ನು ತಿಳಿಸುವ ಸಂಚಿಕೆ ಭಾನುವಾರ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ. ಪುನೀತ್ ರಾಜ್‍ಕುಮಾರ್ ಅವರು ಪಾಲ್ಗೊಂಡಿದ್ದ ಕಂತು ಶನಿವಾರ ಮಧ್ಯಾಹ್ನ 1 ಗಂಟೆಗೆ ಪ್ರಸಾರ ಆಗಲಿದೆ’ ಎಂದು ಜೀ ಕನ್ನಡ ವಾಹಿನಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು