‘Z ಪವರ್’ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳು ತಮ್ಮ ವಿಭಿನ್ನ ಮತ್ತು ಅಮೋಘವಾದ ಕಥೆಗಳ ಮೂಲಕ ಯುವಜನತೆಯನ್ನೂ ತನ್ನತ್ತ ಸೆಳೆಯಲಿದೆ. ನಮ್ಮ ಕಥೆಗಳು ಸಂಕ್ಷಿಪ್ತ ಮತ್ತು ವಾಸ್ತವ ಆಲೋಚನೆಯನ್ನು ಪ್ರೇರೇಪಿಸುವಂತೆ ಇರಲಿವೆ. ‘Z ಪವರ್’ ಮೂಲಕ ಕರುನಾಡ ಜನರಿಗೆ ಹಿಂದೆದೂ ಕಾಣದ ರೀತಿಯಲ್ಲಿ ಮನರಂಜನೆ ನೀಡುವ ಮೂಲಕ ಜೀ ಸಂಸ್ಥೆಯು ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ.
–ರಾಘವೇಂದ್ರ ಹುಣಸೂರ್ ಚೀಫ್ ಕಂಟೆಂಟ್ ಆಫೀಸರ್ ZEEL
ಇದು ಕರ್ನಾಟಕದಲ್ಲಿನ ನಮ್ಮ ಪಯಣಕ್ಕೆ ಒಂದು ಮಹತ್ವದ ಮೈಲುಗಲ್ಲು. ಪ್ರೇಕ್ಷಕರ ಅಭಿರುಚಿಯನ್ನು ನಾವು ಅರ್ಥಮಾಡಿಕೊಂಡಿದ್ದು ಈ ವಾಹಿನಿಯ ಮೂಲಕ ಎಲ್ಲ ವಯಸ್ಕರಿಗೂ ತಲುಪುವಂತಹ ಕಥೆಗಳನ್ನು ನೀಡಲಿದ್ದೇವೆ.
–ಸಿಜು ಪ್ರಭಾಕರನ್ ಸೌತ್ ಆ್ಯಂಡ್ ವೆಸ್ಟ್ ಚೀಫ್ ಕ್ಲಸ್ಟರ್ ಹೆಡ್ ZEEL
‘Z ಪವರ್’ ಹೈಬ್ರೀಡ್ ಚಾನೆಲ್ ಆಗಿದ್ದು ಇಲ್ಲಿ ಎಲ್ಲಾ ವರ್ಗದ ಜನರನ್ನು ತನ್ನತ್ತ ಸೆಳೆಯುವ ಕಾಂಟೆಂಟ್ ಇರಲಿದೆ. ಈ ವಾಹಿನಿಯಲ್ಲಿ ಬರಲಿರುವ 4 ಧಾರಾವಾಹಿಗಳು ಮಹಿಳಾ ಪ್ರಧಾನವಾಗಿದ್ದರೂ ಅಲ್ಲಿ ಪುರುಷರು ಹಾಗೂ ಯುವಜನತೆಯ ಭಾವನೆಗಳಿಗೂ ಬೆಲೆ ಕೊಡಲಾಗಿದೆ. ಈ ವಾಹಿನಿಯಲ್ಲಿ ಕರುನಾಡಿನ ಸಂಸ್ಕೃತಿ ಶ್ರೀಮಂತ ಪರಂಪರೆಗೆ ಒತ್ತು ನೀಡಿದ್ದೇವೆ.