ಕೋಲ್ಕತ್ತ: ತಾಯಿ ಆನೆಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿದ ತನ್ನ ಕರುಳ ಬಳ್ಳಿಮರಿಯಾನೆಯನ್ನು ಸೊಂಡಿಲಿನಲ್ಲಿ ಎತ್ತಿಕೊಂಡು ಸಾಗಿರುವ ಮನ ಕಲಕುವಘಟನೆ ವರದಿಯಾಗಿದೆ.

ತಾಯಿ ಆನೆ ಸತ್ತ ಮರಿಯ ಕಳೇಬರವನ್ನುಸೊಂಡಿಲಿನಲ್ಲಿಹೊತ್ತು ಸುಮಾರು 7 ಕೀ.ಮೀಟರ್‌ವರೆಗೂ ಹೊತ್ತು ಸಾಗಿರುವ ಘಟನೆಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಪ್ರಾಣಿಗಳಿಗೂ ರಕ್ತ ಸಂಬಂಧ, ಪ್ರೀತಿ, ಮಮತೆ, ಭಾವನೆಗಳು ಇರುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಇಲ್ಲಿನ ಆರಣ್ಯ ವ್ಯಾಪ್ತಿಯಲ್ಲಿರುವಜಲಪೈಗುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಛುನಾಭಟಿ ಟೀ ತೋಟದಲ್ಲಿನ ಬನಾರತ್ ಬ್ಲಾಕ್‌ನಲ್ಲಿ ಆನೆ ಮರಿ ಮೃತಪಟ್ಟಿದೆ. ಅದನ್ನು ತಾಯಿ ಆನೆ ಸೊಂಡಿಲಿನಲ್ಲಿ ಎತ್ತಿಕೊಂಡು ಆನೆಗಳ ಹಿಂಡಿನೊಂದಿಗೆ ಸಾಗಿದೆ. 3 ಚಹಾ ತೋಟಗಳನ್ನು ದಾಟಿಕೊಂಡು ಸುಮಾರು 7 ಕೀ. ಮೀಟರ್‌ಗಳವರೆಗೂ ಸಾಗಿ ಪೊದೆಯೊಂದರಲ್ಲಿ ಮರಿಯನ್ನು ಹಾಕಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ವ್ಯಾಪ್ತಿಯಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿರುವುದಕ್ಕೆ ಸ್ಥಳೀಯರು ಭಯಭೀತರಾಗಿದ್ದಾರೆ. ಆನೆಗಳ ಹಿಂಡಿನಲ್ಲಿ ಸುಮಾರು 35ಕ್ಕೂ ಆನೆಗಳು ಇದ್ದವು ಎಂದು ಸ್ಥಳೀಯರು ಹೇಳಿದ್ದಾರೆ.

ಸದ್ಯ ಅರಣ್ಯ ಸಿಬ್ಬಂದಿ ಈ ಪ್ರದೇಶದಲ್ಲಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.