ಗೊರಿಲ್ಲಾಗಳದೂ ಮನುಷ್ಯರಂತೆಯೇ ಸಂಕೀರ್ಣ ಸಮಾಜ: ಅಧ್ಯಯನ ವರದಿ

ಶುಕ್ರವಾರ, ಜೂಲೈ 19, 2019
24 °C

ಗೊರಿಲ್ಲಾಗಳದೂ ಮನುಷ್ಯರಂತೆಯೇ ಸಂಕೀರ್ಣ ಸಮಾಜ: ಅಧ್ಯಯನ ವರದಿ

Published:
Updated:

ಲಂಡನ್‌: ಗೊರಿಲ್ಲಾಗಳು ಈ ಮೊದಲು ನಾವು ಅಂದುಕೊಂಡಿದ್ದಕ್ಕಿಂತಲೂ ಸಂಕೀರ್ಣ ಸಮಾಜವನ್ನು ರಚಿಸಿಕೊಂಡಿವೆ ಎಂದು ಅಧ್ಯಯನವೊಂದು ಹೇಳಿದೆ. ಜೀವನಪರ್ಯಂತದ ಬಂಧಗಳಿಂದ ಹಿಡಿದು ದೂರದ ಸಂಬಂಧಗಳು, ಹಳೆಯ ಸ್ನೇಹಗಳು ಹೀಗೆ ಮನುಷ್ಯ ಸಮಾಜಕ್ಕೆ ಸಮಾನಾಂತರವಾಗಿಯೇ ಇರುತ್ತದೆ ಎಂಬ ವಿವರಗಳನ್ನು ಅಧ್ಯಯನವೊಂದು ಬಹಿರಂಗಪಡಿಸಿದ್ದು ಈ ಮೂಲಕ ಮಾನವನ ಸಾಮಾಜಿಕ ವಿಕಾಸದ ಬೇರಿನತ್ತ ಬೊಟ್ಟು ಮಾಡಿದೆ.

ಪ್ರೊಸೀಡಿಂಗ್ಸ್‌ ಆಫ್ ದಿ ರಾಯಲ್‌ ಸೊಸೈಟಿ ಬಿ ಎಂಬ ಜರ್ನಲ್‌ನಲ್ಲಿ ಅಧ್ಯಯನದ ಮಾಹಿತಿಯು ಪ್ರಕಟವಾಗಿದೆ. ರಿಪಬ್ಲಿಕ್‌ ಆಫ್ ಕಾಂಗೊದ ಎರಡು ಸಂಶೋಧನಾ ಜಾಲ‌‌‌ತಾಣಗಳಲ್ಲಿ ಆರು ವರ್ಷಗಳ ಕಾಲ ಸಂಗ್ರಹಿಸಿಟ್ಟ ನೂರಾರು ಗೊರಿಲ್ಲಾಗಳ ಸಾಮಾಜಿಕ ನಡೆಯ ಕುರಿತ ದತ್ತಾಂಶವನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ವರ್ಷಗಟ್ಟಲೆ ದಟ್ಟ ಕಾಡುಗಳಲ್ಲೆಬದುಕುವ ಗೊರಿಲ್ಲಾಗಳು ಮನುಷ್ಯರ ಒಡನಾಟದಲ್ಲಿ ಸಹಜವಾಗಿ ವರ್ತಿಸಲು ಬಹಳ ಸಮಯ ತೆಗೆದುಕೊಳ್ಳುವ ಕಾರಣ ಅವುಗಳ ಸಾಮಾಜಿಕ ಬದುಕು ಅಧ್ಯಯನ ಮಾಡುವುದು ಕ್ಲಿಷ್ಟಕರ ಎಂದು ಯು.ಕೆ.ಕೇಂಬ್ರಿಜ್‌ ವಿ.ವಿಯ ಜೀವವಿಜ್ಞಾನ ಮಾನವಶಾಸ್ತ್ರಜ್ಞ ರಾಬಿನ್‌ ಮಾರಿಸನ್‌ ಅಭಿಪ್ರಾಯಪಡುತ್ತಾರೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !