ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡಮಾನ್‌ ಬಳಿ ಕಡಿಮೆ ಒತ್ತಡ ಪ್ರದೇಶ: 18ರಂದು ಆಂಧ್ರ ಪ್ರವೇಶ, ಭಾರಿ ಮಳೆ ಸಾಧ್ಯತೆ

Last Updated 14 ನವೆಂಬರ್ 2021, 10:58 IST
ಅಕ್ಷರ ಗಾತ್ರ

ಬೆಂಗಳೂರು: ಥಾಯ್ಲೆಂಡ್‌ ಮತ್ತು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಶನಿವಾರ ಬೆಳಿಗ್ಗೆ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಅದು ಪ್ರಬಲವಾಗಿ, ನವೆಂಬರ್‌ 18ರಂದು ಆಂಧ್ರ ಪ್ರದೇಶವನ್ನು ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶನಿವಾರ ಮುಂಜಾನೆ ಸೃಷ್ಟಿಯಾಗಿರುವ ಕಡಿಮೆ ಒತ್ತಡ ಪ್ರದೇಶವು ಅಲ್ಪ ಪ್ರಮಾಣದಲ್ಲಿ ಪಶ್ಚಿಮ–ವಾಯುವ್ಯ ದಿಕ್ಕಿನತ್ತ ಚಲಿಸಿ ಭಾನುವಾರದ ಹೊತ್ತಿಗೆ ಮಧ್ಯ ಅಂಡಮಾನ್‌ ಸಮುದ್ರದಲ್ಲಿ ಸ್ಥಿರವಾಗಿದೆ.

ನವೆಂಬರ್ 17ರ ವೇಳೆಗೆ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಮೇಲೆ ವಾಯುಭಾರ ಕುಸಿತವಾಗಿ ರೂಪಾಂತರಗೊಳ್ಳಲಿರುವ ಕಡಿಮೆ ಒತ್ತಡ ಪ್ರದೇಶವು, ನವೆಂಬರ್ 18ರಂದು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಡಿಮೆ ಒತ್ತಡ ಪ್ರದೇಶದಿಂದಾಗಿ ಸೋಮವಾರದ ವರೆಗೆ ಅಂಡಮಾನ್‌–ನಿಕೋಬಾರ್ ದ್ವೀಪಗಳಲ್ಲಿ ಭಾರಿ ಮಳೆಯಾಗಲಿದೆ. ನ. 18ರಂದು ಆಂಧ್ರ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಕದ ದಕ್ಷಿಣ ಒಳನಾಡಿನಲ್ಲಿ ನ.18ರ ವರೆಗೆ ಸಾಧಾರಣ ಮಳೆಯಾಗಬಹುದಾದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT