ಸೋಮವಾರ, ಏಪ್ರಿಲ್ 12, 2021
23 °C

ಮಳೆಯಲಿ... ಹಂಪಿಯಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಂಪಿಯ ರಾಜಬೀದಿಯಲ್ಲಿ ಶತಮಾನಗಳ ಹಿಂದೆ ಮುತ್ತು, ರತ್ನ, ಹವಳಗಳನ್ನು ಬಳ್ಳದಲ್ಲಿ ಅಳೆದು ಮಾರಲಾಗುತ್ತಿದ್ದ ಸಂಗತಿ ಅಲ್ಲಿನ
ಹಾದಿ–ಬೀದಿಯಲ್ಲಿ ಸುತ್ತಾಡುವಾಗಲೆಲ್ಲ ಇಂದಿನವರಿಗೆ ಬೆರಗು ಮೂಡಿಸುಮೂಡಿಸುವಂಥಹದ್ದು. ಆ ವೈಭಕ್ಕೆ ಮೂಕಸಾಕ್ಷಿಯಾಗಿ ನಿಂತ ಇಲ್ಲಿನ ಸ್ಮಾರಕಗಳಲ್ಲಿ ಮುತ್ತು, ರತ್ನಗಳಿಗೂ ಮಿಗಿಲಾದ ಏನೋ ಬೆಡಗಿದೆ.

ಮಳೆ ಸುರಿದು ನಿಂತಾಗ ಈ ಸ್ಮಾರಕಗಳು ಏನು ಮಾಡುತ್ತವೆ ಗೊತ್ತಾ?

ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಮೊನ್ನೆ ಇದೇ ಕುತೂಹಲದಿಂದ ಕ್ಯಾಮೆರಾ ಹಿಡಿದು ಹಿಂಪಿಯ ಬೀದಿಯಲ್ಲಿ ಸುತ್ತಿದರು. ಮಸೂರದ ಮುಂದೆ ನಿಂತ ಸುಂದರಿಯಂತೆ ಒಂದೊಂದು ಸ್ಮಾರಕವೂ ಅಂಗಳದಲ್ಲಿ ನಿಂತ ನೀರನ್ನೇ ಕನ್ನಡಿ ಮಾಡಿಕೊಂಡು ತನ್ನ ಸೊಬಗನ್ನೆ ಸವಿಯುತ್ತಿತ್ತು. ಹೌದು, ಶಬ್ದಗಳಿಗೆ ನಿಲುಕದ ಆ ದೃಶ್ಯಕಾವ್ಯವನ್ನು ಕಂಡ ಕ್ಯಾಮೆರಾ ಮಾತ್ರ ಎಡೆಬಿಡದೆ ಕಣ್ಣು ಮಿಟುಕಿಸಿತು...

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು