ಸೋಮವಾರ, ಆಗಸ್ಟ್ 3, 2020
23 °C

2500 ಸಸಿಗಳ ನೆಟ್ಟ ರೋಟರಿ ಕ್ಲಬ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು ಮಿಡ್‌ಟೌನ್‌ ರೋಟರಿ ಕ್ಲಬ್‌ ಸದಸ್ಯರು, ಶನಿವಾರ ಚಿಕ್ಕಬಳ್ಳಾಪುರದ ನಂದಿಗ್ರಾಮದ ನಂದಿ ಕೆರೆಯ ಸುತ್ತ 2,500 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲ್ಲೂಕಿನ ಸುಲ್ತಾನ್‌ಪೇಟ್‌ ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಕೂಲ್‌ ಬ್ಯಾಗ್‌ಗಳನ್ನು ಕೂಡ ವಿತರಿಸಿದರು.

ಪರಿಸರ ವಿಜ್ಞಾನ, ಜೀವವೈವಿಧ್ಯ ರಕ್ಷಣೆಗೆ ಸಂಬಂಧಿಸಿದಂತೆ ಯುನೈಟೆಡ್‌ ಬ್ರೆವರೀಸ್‌ ಲಿಮಿಟೆಡ್‌, ವೆಲ್ಸ್‌ ಫಾರ್ಗೊ ಮತ್ತಿತರ ಹಲವು ಕಾರ್ಪೊರೇಟ್‌ ಸಂಸ್ಥೆಗಳು ರೂಪಿಸಿರುವ ಯೋಜನೆಗಳಿಗೆ ಬೆಂಗಳೂರು ಮಿಡ್‌ಟೌನ್‌ ರೋಟರಿ ಕ್ಲಬ್‌ ಕೈಜೋಡಿಸಿದೆ.

ಕೆರೆಗಳ ಪುನರುಜ್ಜೀವನ, ಕಲ್ಯಾಣಿಗಳ ಜೀರ್ಣೋದ್ಧಾರ, ಸರ್ಕಾರಿ ಶಾಲೆಗಳ ನವೀಕರಣ, ಗುಂಡುತೋಪು, ಮಳೆ ನೀರು ಸಂಗ್ರಹ ಮತ್ತಿತರ ಸುಧಾರಣಾ ಕಾರ್ಯಗಳಿಗೆ ಸಂಬಂಧಿಸಿದ ಒಟ್ಟಾರೆ ಯೋಜನೆಯ ನಾಯಕತ್ವವನ್ನು ‘ಯುನೈಟೆಡ್‌ ವೇ’ ವಹಿಸಿಕೊಂಡಿದೆ. ಇದು ಜಾಗತಿಕ ಮಟ್ಟದ ಸಂಸ್ಥೆ ‘ಯುನೈಟೆಡ್‌ ವೇ ವರ್ಲ್ಡ್‌ವೈಡ್‌’ನ ಬೆಂಗಳೂರು ಘಟಕ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು