ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದ ಆದಿಲಾಬಾದ್‌ನಲ್ಲಿ 10 ಲಕ್ಷ ಸಸಿಗಳನ್ನು ನೆಟ್ಟು ವಿಶ್ವ ದಾಖಲೆ!

Last Updated 6 ಜುಲೈ 2021, 11:44 IST
ಅಕ್ಷರ ಗಾತ್ರ

ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿ 'ಗ್ರೀನ್ ಇಂಡಿಯಾ ಚಾಲೆಂಜ್' (ಜಿಐಸಿ) ಅಡಿಯಲ್ಲಿ ಭಾನುವಾರ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ 'ಒಂದು ಗಂಟೆಯಲ್ಲಿ ಒಂದು ಮಿಲಿಯನ್ ಸಸಿಗಳನ್ನು ನೆಡುವ' ಮೂಲಕ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗಿದೆ ಎಂದು ಜಿಐಸಿ ಸಂಘಟಕರು ತಿಳಿಸಿದ್ದಾರೆ.

ಮಾಜಿ ಸಚಿವ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಆದಿಲಾಬಾದ್ ಶಾಸಕ ಜೋಗು ರಾಮಣ್ಣ ಅವರ 58ನೇ ವರ್ಷದ ಜನ್ಮದಿನದಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ತೆಲಂಗಾಣದ ಅರಣ್ಯ, ಪರಿಸರ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಲೋಲಾ ಇಂದ್ರ ಕರಣ್ ರೆಡ್ಡಿ ಮತ್ತು ಟಿಆರ್‌ಎಸ್‌ ರಾಜ್ಯಸಭಾ ಸಂಸದ ಜೋಗಿನಿಪಲ್ಲಿ ಸಂತೋಷ್ ಕುಮಾರ್, ಜಿಐಸಿಯ ಸಂಸ್ಥಾಪಕ, ಸಾರ್ವಜನಿಕರು, ಟಿಆರ್‌ಎಸ್ ಪಕ್ಷದ ಸದಸ್ಯರು, ಶಾಸಕರು, ರಾಜಕೀಯ ನಾಯಕರು ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಯಕ್ರಮದ ವೇಳೆ, ಆದಿಲಾಬಾದ್ ಗ್ರಾಮೀಣ ಪ್ರದೇಶದ ದುರ್ಗಾನಗರದಲ್ಲಿ 200 ಎಕರೆ ಪ್ರದೇಶದಲ್ಲಿ ಹರಡಿರುವ ಕ್ಷೀಣಿಸಿರುವ ಅರಣ್ಯ ಪ್ರದೇಶದಲ್ಲಿ ಮಿಯಾವಕಿ ಮಾದರಿ (ಹೆಸರಾಂತ ಮಿಯಾವಕಿ ಅರಣ್ಯೀಕರಣ ವಿಧಾನವನ್ನು ಬಳಸಿಕೊಂಡು) ಮೂಲಕ ಐದು ಲಕ್ಷ ಸಸಿಗಳನ್ನು ನೆಡಲಾಯಿತು ಎಂದು ಅದು ಹೇಳಿದೆ.

ಅದೇ ರೀತಿ ಬೇಲಾ ಮಂಡಲದಲ್ಲಿ ಎರಡು ಲಕ್ಷ ಗಿಡಗಳನ್ನು ನೆಡಲಾಗಿದ್ದು, ನಗರ ಪ್ರದೇಶದ 45,000 ಕ್ಕೂ ಹೆಚ್ಚು ಮನೆಗಳಲ್ಲಿ 1,80,000 ಸಸಿಗಳನ್ನು ನೆಡಲಾಗಿದೆ. ಸ್ವಯಂಸೇವಕರು ಆರ್ & ಬಿ (ರಸ್ತೆಗಳು ಮತ್ತು ಕಟ್ಟಡಗಳು) ರಸ್ತೆಗಳ ಎರಡೂ ಬದಿಯಲ್ಲಿ 1,20,000 ಸಸಿಗಳನ್ನು ನೆಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇಡೀ ಪ್ರದೇಶವನ್ನು ಹತ್ತು ವಲಯಗಳಾಗಿ ವಿಂಗಡಿಸುವ ಮೂಲಕ 30,000ಕ್ಕೂ ಹೆಚ್ಚು ಟಿಆರ್‌ಎಸ್ ಸದಸ್ಯರು ಮತ್ತು ಸ್ಥಳೀಯರು ಭಾಗವಹಿಸಿದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. 2019 ರಲ್ಲಿ ಟರ್ಕಿಯಲ್ಲಿ 3 ಲಕ್ಷ, 3 ಸಾವಿರ ಸಸಿಗಳನ್ನು ನೆಟ್ಟು ಗಿನ್ನಿಸ್ ಬುಕ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿರುವ ದಾಖಲೆಯನ್ನು ಮುರಿಯಲು ಸಜ್ಜಾಗಿರುವುದಾಗಿ ಜಿಐಸಿ ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT