ಸೋಮವಾರ, ಆಗಸ್ಟ್ 8, 2022
22 °C

ವಿಮೋರ್‌ ಕೈಮಗ್ಗ ಉಡುಪು ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

1974ರಿಂದ ಕೈಮಗ್ಗ ಮತ್ತು ನೇಯ್ಗೆಯ ಸಂಶೋಧನೆ, ಸಂರಕ್ಷಣೆ ಮತ್ತು ವಿನ್ಯಾಸದಲ್ಲಿ ತೊಡಗಿರುವ ವಿಮೋರ್‌ ಹ್ಯಾಂಡ್‌ಲೂಮ್ ಫೌಂಡೇಷನ್‌‌ ತನ್ನ 45ನೇ ವಾರ್ಷಿಕೋತ್ಸವದ ಅಂಗವಾಗಿ ಕೈಮಗ್ಗ ಉಡುಪುಗಳ ಪ್ರದರ್ಶನ ಆಯೋಜಿಸಲಾಗಿದೆ.

ದೊಮ್ಮಲೂರಿನ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನವೆಂಬರ್‌ 8 ರಿಂದ 12 ರವರೆಗೆ ‘ಹ್ಯಾಂಡ್‌ಲೂಮ್‌ ವಾಯೇಜ್‌’ ಶೀರ್ಷಿಕೆ ಅಡಿ 5 ದಿನ ಪ್ರದರ್ಶನ ನಡೆಯಲಿದೆ. ಕೈಮಗ್ಗದ ಉಡುಪುಗಳ ಪ್ರದರ್ಶನದ ಜತೆ ವೈವಿಧ್ಯಮ ಕಾರ್ಯಕ್ರಮ ನಡೆಯಲಿವೆ.

ವಿಮೋರ್ ಸಂಸ್ಥೆ ಇತ್ತೀಚೆಗೆ ಕೈಮಗ್ಗ ಉದ್ಯಮಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಟೆಕ್ಸ್‌ಟೈಲ್ಸ್‌ ಮ್ಯೂಸಿಯಂ ಪ್ರಾರಂಭಿಸಿದೆ. ಇದು ಮಗ್ಗಗಳಿಗೆ ಬಳಸುವ ನೇಯ್ಗೆ, ದಾರ, ಕಚ್ಚಾ ಬಟ್ಟೆ, ವಿನ್ಯಾಸಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಕಣಜವಾಗಿದೆ.   

ಕೈಮಗ್ಗ ಉದ್ಯಮ ನಡೆದು ಬಂದ ಹಾದಿ, ಇದಕ್ಕೆ ಸಮುದಾಯಗಳ ಕೊಡುಗೆ ಬಗ್ಗೆಯೂ ಜಾಗೃತಿ ಮೂಡಿಸುವ ವಿಚಾರ ಸಂಕಿರಣ ಆಯೋಜಿಸಿದೆ. ಕೈಮಗ್ಗ ಮತ್ತು ನೇಯ್ಗೆ ತಜ್ಞರಾದ ಡಾ. ಜಯರಾಜ್ ಮತ್ತು ಸಿ. ಶೇಖರ್ ಅವರು ನೇಕಾರರೊಂದಿಗೆ ಸಂವಾದ ನಡೆಸಲಿದ್ದಾರೆ.

ಭಾರತದಲ್ಲಿ ಕೈಮಗ್ಗಗಳನ್ನು ಉತ್ತೇಜಿಸುವ ಆಂದೋಲನ ರೂಪಿಸಲು ನೇಕಾರರು, ವಿನ್ಯಾಸಕರು, ಉದ್ಯಮಿಗಳು ಮತ್ತು ತಜ್ಞರು ಚರ್ಚೆ ನಡೆಸಲಿದ್ದಾರೆ ಎಂದು ವಿಮೋರ್ ಕೈಮಗ್ಗ ಪ್ರತಿಷ್ಠಾನದ ಸಹ ಸಂಸ್ಥಾಪಕಿ ಪವಿತ್ರಾ ಮುದ್ದಯ್ಯ ಹೇಳಿದ್ದಾರೆ.

ವೈವಿಧ್ಯಮಯ ಕಾರ್ಯಕ್ರಮ

ಐದು ದಿನಗಳ ಕಾರ್ಯಕ್ರಮದಲ್ಲಿ ಕೈಮಗ್ಗ, ಜವಳಿ ಮತ್ತು ನೇಯ್ಗೆಯ ಐತಿಹಾಸಿಕ ವಿಕಾಸ ಕುರಿತು ಕಾರ್ಯಾಗಾರ, ಸಂವಾದ, ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಜೊತೆಗೆ ಮಕ್ಕಳಿಂದ ಕೈಮಗ್ಗ ಕುರಿತು ಕಥೆ ಹೇಳುವ ಕಾರ್ಯಕ್ರಮ ಇದೆ. ‘ಫ್ಯಾಶನ್‌ ಗುರು’ ಪ್ರಸಾದ್ ಬಿಡ್ಡಪ್ಪ ಅವರಿಂದ ಫ್ಯಾಶನ್ ಷೋ ನಡೆಯಲಿದೆ. 

ಕೈಮಗ್ಗ ಸಮುದಾಯಗಳ ಪುನರುಜ್ಜೀವನ, ನವೀಕರಣ, ನಾವೀನ್ಯತೆ ಮತ್ತು ಸಬಲೀಕರಣದ ಕುರಿತು ಸಮಗ್ರ ನೋಟ ಒದಗಿಸುತ್ತದೆ. ಉದ್ಯಮಕ್ಕೆ ಕೊಡುಗೆ ನೀಡಿದವರ ಬಗ್ಗೆಯೂ ಬೆಳಕು ಚೆಲ್ಲಲಾಗುವುದು.

‘ಹ್ಯಾಂಡ್‌ಲೂಮ್‌ ವಾಯೇಜ್‌: ದೊಮ್ಮಲೂರಿನ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ,  
ನವೆಂಬರ್‌ 8 ರಿಂದ 12 ರವರೆಗ

ದೊಡ್ಡ ಕೈಗಾರಿಕೆ ಮತ್ತು ಆಧುನಿಕ ಪವರ್‌ ಲೂಮ್‌ಗಳ ಜತೆ ಸ್ಪರ್ಧಿಸಲಾಗದೆ ದೇಶದ ಸಾಂಪ್ರದಾಯಿಕ ಕೈಮಗ್ಗ ಉದ್ಯಮ ಮತ್ತು ಕುಶಲಕರ್ಮಿಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಕ್ಷೀಣಿಸುತ್ತಿದೆ. ಸಾಂಪ್ರದಾಯಿಕ ನೇಕಾರರಿಗೆ ಕನಿಷ್ಠ ಮಾರ್ಗದರ್ಶನ ಮತ್ತು ಕುಶಲಕರ್ಮಿಗಳನ್ನು ಸಶಕ್ತಗೊಳಿಸುವ ಮೂಲಕ ಕೈಮಗ್ಗ ಬಲಪಡಿಸುವ ಪ್ರಯತ್ನ ಕಡಿಮೆಯಾಗುತ್ತಿವೆ. ವಿಮೋರ್‌ ತನ್ನ 45 ವರ್ಷಗಳಲ್ಲಿ ಕುಶಲಕರ್ಮಿಗಳ ಜೀವನೋಪಾಯ ಸಬಲೀಕರಣಗೊಳಿಸಲು ನೆರವಾಗಿದೆ. ಹ್ಯಾಂಡ್‌ಲೂಮ್‌ ಯಂತ್ರ ಬಳಸದೇ ನೇಕಾರರಿಂದಲೇ ನೇಯುವ ಕೆಲಸ ಮಾಡುತ್ತಾ ಬಂದಿದೆ

– ಪವಿತ್ರಾ ಮುದ್ದಯ್ಯ, ವಿಮೋರ್ ಕೈಮಗ್ಗ ಪ್ರತಿಷ್ಠಾನದ ಸಹ ಸಂಸ್ಥಾಪಕಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು