ವಿಶ್ವದಲ್ಲಿ ಭಾರತವು ಎರಡನೇ ಅತ್ಯಂತ ದೊಡ್ಡ ಸೇನೆ ಹೊಂದಿರುವ ದೇಶ. ಈ ಸೇನೆ, ಸೇನಾ ಸಲಕರಣೆ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ನಿರ್ವಹಣೆ ಮಾಡಲು ದೊಡ್ಡ ಬಜೆಟ್ ಇರಬೇಕು. 2019ರಲ್ಲಿ ರಕ್ಷಣಾ ವಲಯಕ್ಕೆ ಹೆಚ್ಚು ವೆಚ್ಚಮಾಡಿರುವ ಮೊದಲ ಐದು ರಾಷ್ಟ್ರಗಳಲ್ಲಿ ಭಾರತವೂ ಇದೆ. ಈ ವೆಚ್ಚದಲ್ಲಿ ಬಹುಪಾಲು ಸೇನಾ ಸಲಕರಣೆಗಳು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಆಮದಿಗೆ ವೆಚ್ಚವಾಗಿದೆ. ಅಂದರೆ ನಮ್ಮ ಸೇನೆಯ ನಿರ್ವಹಣೆ ಮತ್ತು ಅದನ್ನು ಯುದ್ಧಸನ್ನದ್ಧವಾಗಿ ಇರಿಸಲು ನಾವು ವಿದೇಶಗಳನ್ನು ಅವಲಂಬಿಸಿದ್ದೇವೆ. ಈ ಅವಲಂಬನೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. 101 ಸೇನಾ ಸಲಕರಣೆಗಳ ಆಮದು ನಿಷೇಧವು ಈ ಕ್ರಮದ ಒಂದು ಭಾಗ.

ಭಾರತವು ಈಗ ಪಾಕಿಸ್ತಾನ, ಚೀನಾ ಮತ್ತು ನೇಪಾಳದ ಜತೆಗೆ ಗಡಿ ಸಮಸ್ಯೆ ಎದುರಿಸುತ್ತಿದೆ. ಚೀನಾ ಜತೆಗಿನ ಗಡಿ ಸಮಸ್ಯೆ ಬಿಗಡಾಯಿಸಿದೆ. ಹೀಗಾಗಿ ಸೇನೆಯನ್ನು ಯುದ್ಧಸನ್ನದ್ಧವಾಗಿ ಇರಿಸುವುದು ಈ ಹಿಂದಿಗಿಂತ ಇಂದು ಹೆಚ್ಚು ಅಗತ್ಯ. ಅಲ್ಲದೆ, ದೀರ್ಘಾವಧಿ ಯುದ್ಧಕ್ಕೆ ಅಗತ್ಯವಿರುವಷ್ಟು ಮದ್ದು ಗುಂಡುಗಳನ್ನು ಸಂಗ್ರಹಿಸಿಕೊಳ್ಳಬೇಕಿದೆ. ಈ ಸಲಕರಣೆಗಳನ್ನು ಆಮದು ಮಾಡಿಕೊಳ್ಳಲು ದೀರ್ಘ ಸಮಯ ಹಿಡಿಯುತ್ತದೆ. ದೇಶೀಯವಾಗಿಯೇ ತಯಾರಿಕೆ ನಡೆದರೆ, ಅಗತ್ಯವಿರುವಷ್ಟು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಅತ್ಯಂತ ಕಡಿಮೆ ಸಮಯದಲ್ಲಿ ಪೂರೈಕೆಯಾಗಲಿವೆ.2019ರಲ್ಲಿ ಇಡೀ ವಿಶ್ವದಲ್ಲಿ ಹೆಚ್ಚು ಮೊತ್ತದ ಶಸ್ತ್ರಾಸ್ತ್ರ ಆಮದು ಮಾಡಿಕೊಂಡ ದೇಶ ಭಾರತ. ಈ ಆಮದು ಪ್ರಮಾಣವನ್ನು ಕಡಿಮೆ ಮಾಡಿದರೆ, ಅದರಲ್ಲಿ ಉಳಿತಾಯ ವಾಗುವ ಹಣವನ್ನು ಸೇನೆಯ ಆಧುನೀಕರಣಕ್ಕೆ ಬಳಸ ಬಹುದು. ಉಳಿಕೆ ಹಣದಲ್ಲಿ ಹೆಚ್ಚುವರಿ ಮದ್ದುಗುಂಡುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ 101 ಸೇನಾ ಸಲಕರಣೆಗಳ ಆಮದು ನಿಷೇಧವು ನೆರವಾಗಲಿದೆ.

ಜಾಗತಿಕ ವಾಣಿಜ್ಯ ಸಂಬಂಧವು ಈಚಿನ ದಿನಗಳಲ್ಲಿ ಸಂಕೀರ್ಣಗೊಂಡಿದೆ. ಹಲವು ರಾಷ್ಟ್ರಗಳ ಮೇಲೆ ಅಮೆರಿಕವು ಹೇರಿರುವ ನಿರ್ಬಂಧವು, ಶಸ್ತ್ರಾಸ್ತ್ರ ಖರೀದಿಯಲ್ಲಿ ಭಾರತಕ್ಕೆ ತೊಡಕಾಗಿದೆ. ರಷ್ಯಾದಿಂದ ‘ವಾಯುದಾಳಿ ನಿರೋಧಕ’ ವ್ಯವಸ್ಥೆ ಖರೀದಿಯಲ್ಲಿ ಅಮೆರಿಕದ ಆರ್ಥಿಕ ನಿರ್ಬಂಧದ ಭೀತಿಯನ್ನು ಭಾರತವು ಎದುರಿಸುತ್ತಿದೆ. ಸೇನಾ ಸಲಕರಣೆಗಳ ಖರೀದಿಯಲ್ಲಿ ಸ್ವಾವಲಂಬನೆ ಸಾಧಿಸಿದರೆ, ಭಾರತಕ್ಕೆ ಈ ನಿರ್ಬಂಧದ ಭೀತಿ ಇರುವುದಿಲ್ಲ.

ರಕ್ಷಣಾ ವಲಯದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ.101 ಸೇನಾ ಸಲಕರಣೆಗಳ ಆಮದು ನಿಷೇಧವು, ದೇಶೀಯ ಆರ್ಥಿಕ ಚಟುವಟಿಕೆ ಚೇತರಿಕೆಗೂ ನೆರವಾಗಲಿದೆ. ಇವುಗಳನ್ನು ತಯಾರಿಸಲು ಸರ್ಕಾರದಿಂದ ಮತ್ತು ಖಾಸಗಿ ವಲಯದಿಂದಲೂ ಬಂಡವಾಳ ಹೂಡಿಕೆಯಾಗಲಿದೆ. ಪ್ರತ್ಯಕ್ಷವಾಗಿಯೇ ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಪರೋಕ್ಷವಾಗಿಯೂ ಉದ್ಯೋಗ ಸೃಷ್ಟಿಯಾಗಲಿದೆ. ಕಡಿಮೆ ವೆಚ್ಚದಲ್ಲಿ ಸೇನಾ ಸಲಕರಣೆಗಳ ಖರೀದಿಯಲ್ಲಿ ಸೇನೆಗೆ ನೆರವಾಗುವುದರ ಜತೆಗೆ ಆರ್ಥಿಕತೆಗೂ ಚೇತರಿಕೆ ನೀಡಲಿದೆ ಎಂದು ಸರ್ಕಾರ ಹೇಳುತ್ತಿದೆ.

ಸರ್ಕಾರದ ಈ ಕ್ರಮದ ಬಗ್ಗೆ ಟೀಕೆಯೂ ವ್ಯಕ್ತವಾಗಿದೆ. ಆಮದು ನಿಷೇಧದ ಪಟ್ಟಿಯಲ್ಲಿ ಇರುವ ಬಹುತೇಕ ಶಸ್ತ್ರಾಸ್ತ್ರಗಳು ಈಗಾಗಲೇ ದೇಶೀಯವಾಗಿ ತಯಾರಾಗುತ್ತಿವೆ. ಹಾಗಾಗಿ, ಈ ಆಮದು ನಿಷೇಧದಿಂದ ಹೆಚ್ಚಿನ ಪ್ರಯೋಜನ ಇಲ್ಲ ಎಂಬುದು ಸರ್ಕಾರದ ಕ್ರಮವನ್ನು ವಿರೋಧಿಸುವವರ ವಾದ. ದೇಶೀಯವಾಗಿಯೇ ತಯಾರಾಗುವ ಉಪಗ್ರಹಗಳನ್ನು ಕೂಡ ಆಮದು ನಿಷೇಧ ಪಟ್ಟಿಗೆ ಸೇರಿಸಿರುವುದು ಈ ವಾದಕ್ಕೆ ಪುಷ್ಟಿ ನೀಡುತ್ತದೆ.

ಭಾರತದ ರಕ್ಷಣಾ ಉದ್ಯಮಗಳ ದಾಪುಗಾಲು
ರಕ್ಷಣಾ ಸಾಮಗ್ರಿ ಅಭಿವೃದ್ಧಿ ಹಾಗೂ ಉತ್ಪಾದನೆದಲ್ಲಿ ದೇಶೀಯ ಕಂಪನಿಗಳು ಶ್ರೀಮಂತ ಇತಿಹಾಸ ಹೊಂದಿವೆ. ಗಡಿಯಲ್ಲಿರುವ ಯೋಧರಿಗೆ ರಕ್ಷಣಾ ಸಾಮಗ್ರಿ, ಸೇನಾ ವಾಹನಗಳನ್ನು ಪೂರೈಸಿವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಜೊತೆ ಖಾಸಗಿ ಕಂಪನಿಗಳೂ ವಿನ್ಯಾಸ, ಉತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು

ಡಿಆರ್ಡಿಒ:ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) 1958ರಲ್ಲಿ ಕಾರ್ಯಾರಂಭ ಮಾಡಿತು. ಆರಂಭದಲ್ಲಿ 10 ಲ್ಯಾಬ್ಗಳಿದ್ದವು. ಇವುಗಳ ಸಂಖ್ಯೆ ಈಗ 50 ದಾಟಿದೆ. ಸಂಸ್ಥೆ ಅಭಿವೃದ್ಧಿಪಡಿಸಿದ ಡ್ರೋನ್ ನಿರೋಧಕ ವ್ಯವಸ್ಥೆ ಪ್ರಸಿದ್ಧವಾದುದು. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಅವರಿಗೆ ವೈಮಾನಿಕ ರಕ್ಷಣೆ ನೀಡಿದ್ದು ಇದೇ ಉಪಕರಣ. 500ಕ್ಕೂ ಹೆಚ್ಚು ವಿವಿಧ ರಕ್ಷಣಾ ಉಪಕರಣಗಳನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ಭಾರತದ ಅತ್ಯುನ್ನತ ರಕ್ಷಣಾ ಸಲಕರಣೆ ಉತ್ಪಾದಕ ಕಂಪನಿ ಎನಿಸಿದೆ. ಸಂಸ್ಥೆಯು ರಕ್ಷಣಾ ಸಚಿವಾಲಯದ ಅಡಿ ಕೆಲಸ ಮಾಡುತ್ತದೆ.

ಎಚ್ಎಎಲ್: 1940ರ ಡಿಸೆಂಬರ್ನಲ್ಲಿ ಅಂದಿನ ಮೈಸೂರು ಸರ್ಕಾರದ ಜತೆ ಉದ್ಯಮಿ ವಾಲ್ಚಂದ್ ಹರಿಚಂದ್ ಅವರು ಹಿಂದೂಸ್ತಾನ್ ಏರ್ಕ್ರಾಫ್ಟ್ ಶುರು ಮಾಡಿದ್ದರು. ವಿಮಾನಗಳನ್ನು ತಯಾರಿಸುವುದು ಮುಖ್ಯ ಉದ್ದೇಶ. 1942ರಲ್ಲಿ ಕೇಂದ್ರ ಸರ್ಕಾರವು ಸಂಸ್ಥೆಯನ್ನು ವಶಕ್ಕೆ ತೆಗೆದುಕೊಂಡ ಬಳಿಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಎಂದಾಯಿತು. ಚೇತಕ್ ಮೊದಲಾದ ಹಗುರ ಯುದ್ಧವಿಮಾನಗಳು, ಹೆಲಿಕಾಪ್ಟರ್ಗಳು ತಯಾರಿಯಲ್ಲಿ ಎಚ್ಎಎಲ್ ಹೆಸರು ಮಾಡಿದೆ. 2027ರೊಳಗೆ 10 ಟನ್ ತೂಕದ ದಾಳಿ ಹೆಲಿಕಾಪ್ಟರ್ಗಳ ಉತ್ಪಾದನೆ ಮಾಡುವುದಾಗಿ ಸಂಸ್ಥೆ ಘೋಷಿಸಿದೆ. ಇದು ಅಮೆರಿಕದ ಅಪಾಚೆ ಹೆಲಿಕಾಪ್ಟರ್ಗೆ ಸಮನಾದುದು.

ಬಿಇಎಲ್:ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ರಕ್ಷಣಾ ಉತ್ಪಾದನೆಯಲ್ಲಿ ತನ್ನದೇ ಗುರುತು ಮೂಡಿಸಿದೆ. ಅಮೆರಿಕದ ಸರ್ಕಾರಕ್ಕೆ ಶಸ್ತ್ರಾಸ್ತ್ರ ಪತ್ತೆ ರೇಡಾರ್ಗಳನ್ನು ಉತ್ಪಾದಿಸಿಕೊಡುವ ಒಪ್ಪಂದಕ್ಕೆ ಡಿಆರ್ಡಿಒ ಹಾಗೂ ಎಚ್ಎಎಲ್ ಇತ್ತೀಚೆಗೆ ಸಹಿ ಹಾಕಿವೆ. 1954ರಲ್ಲಿ ಶುರುವಾದ ಸಾರ್ವಜನಿಕ ವಲಯದ ಈ ಉದ್ಯಮ ದೈತ್ಯವಾಗಿ ಬೆಳೆದಿದ್ದು, ಪುಣೆ, ಗಾಜಿಯಾಬಾದ್, ಚೆನ್ನೈ ಸೇರಿದಂತೆ 8 ಕಡೆಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. 2018–19ರಲ್ಲಿ ಕಂಪನಿಯ ವಹಿವಾಟು ₹11,700 ಕೋಟಿ ಇತ್ತು. 10 ಸಾವಿರ ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ.

ಒಎಫ್ಬಿ:ಸರ್ಕಾರಿ ಸ್ವಾಮ್ಯದ ಹಳೆಯ ಹಾಗೂ ಅತಿದೊಡ್ಡ ರಕ್ಷಣಾ ಉಪಕರಣ ಉತ್ಪಾದನೆ ಸಂಸ್ಥೆ ಆರ್ಡಿನನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್ಬಿ). ಬ್ರಿಟಿಷರ ಅವಧಿಯಲ್ಲಿ ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರ ತಯಾರಿಸಲು ಶುರುವಾದ ಇದು ಸುಮಾರು 200 ವರ್ಷಗಳನ್ನು ಪೂರೈಸಿದೆ. ಇದೀಗ 41 ಕಾರ್ಖಾನೆಗಳು ದೇಶದಾದ್ಯಂತ ವಿಸ್ತರಿಸಿವೆ. ಸಂಸ್ಥೆಯನ್ನು ಖಾಸಗೀಕರಣ ಮಾಡುವ ವದಂತಿ ಕಳೆದ ವರ್ಷ ಹಬ್ಬಿತ್ತು. ಇದನ್ನು ರಕ್ಷಣಾ ಸಚಿವಾಲಯ ತಳ್ಳಿಹಾಕಿತ್ತು.

ಭಾರತ್ ಡೈನಮಿಕ್ಸ್:ಹೈದರಾಬಾದ್ ಮೂಲದ ಕ್ಷಿಪಣಿ ವ್ಯವಸ್ಥೆಗಳು ಮತ್ತು ಯುದ್ಧಸಾಮಗ್ರಿ ತಯಾರಕ ಭಾರತ್ ಡೈನಾಮಿಕ್ಸ್ ಲಿಮಿಟೆಡ್(ಬಿಡಿಎಲ್), ಕೇಂದ್ರ ಸರ್ಕಾರದ ಮತ್ತೊಂದು ರಕ್ಷಣಾ ಸಾಮಗ್ರಿ ತಯಾರಿಕಾ ಸಂಸ್ಥೆಯಾಗಿದೆ. 1970ರಲ್ಲಿ ಶುರುವಾದ ಸಂಸ್ಥೆ ಹೈದರಾಬಾದ್, ತೆಲಂಗಾಣ ಮತ್ತು ವಿಶಾಖಪಟ್ಟಣದಲ್ಲಿ ಮೂರು ಘಟಕಗಳನ್ನು ಹೊಂದಿದೆ. ಭೂಮಿಯಿಂದ ಆಗಸಕ್ಕೆ ಜಿಗಿಯುವ ‘ಆಕಾಶ್ ಶಸ್ತ್ರಾಸ್ತ್ರ ವ್ಯವಸ್ಥೆ’ಯನ್ನು ಕಂಪನಿ ಅಭಿವೃದ್ಧಿಪಡಿಸಿದೆ. ಇವುಗಳನ್ನು ಭಾರತೀಯ ಸೇನೆಗೆ ಪೂರೈಸಲು ₹14,810 ಕೋಟಿ ಮೌಲ್ಯದ ಗುತ್ತಿಗೆ ಪಡೆದಿದೆ.

ಖಾಸಗಿ ಕಂಪನಿಗಳು
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್:ಟಾಟಾ ಸಮೂಹಕ್ಕೆ ಸೇರಿದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ ಕಂಪನಿಯು ಹೈದರಾಬಾದ್ನಲ್ಲಿ 2007ರಲ್ಲಿ ಸ್ಥಾಪನೆಯಾಯಿತು. 3,000 ಜನರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಬ್ರಿಟಿಷ್ ಕಂಪನಿ ಕೊಬ್ಹಾಮ್ಗೆ ಆಗಸದಲ್ಲಿ ಇಂಧನ ತುಂಬುವ ಉಪಕರಣ ಉತ್ಪಾದಿಸಿ ಪೂರೈಸುವ ಗುತ್ತಿಗೆ ಪಡೆದಿದೆ.

ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್:ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಕಂಪನಿಯು 1947ರಿಂದ ರಕ್ಷಣಾ ಉಪಕರಣ ಪೂರೈಕೆಯಲ್ಲಿ ತೊಡಗಿಸಿಕೊಂಡಿದೆ. ಎರಡನೇ ಜಾಗತಿಕ ಯುದ್ಧದಲ್ಲಿ ಬಳೆಕೆಯಾಗಿದ್ದ ವಿಲ್ಲೀಸ್ ಜೀಪ್ಗಳ ಆಮದು, ಉಪಕರಣಗಳ ಜೋಡಣೆ ಪರವಾನಗಿ ಪಡೆದಿತ್ತು. 2012ರಲ್ಲಿ ಸ್ವಂತ ವಿನ್ಯಾಸದ ಶಸ್ತ್ರಸಜ್ಜಿತ ವಾಹನಗಳ ಉತ್ಪಾದನೆ ಆರಂಭಿಸಿ, ಸರ್ಕಾರಕ್ಕೆ ಅವುಗಳನ್ನು ಪೂರೈಸಿತು.

ಕಲ್ಯಾಣಿ ರಾಫೆಲ್ ಅಡ್ವಾನ್ಸ್ಡ್ ಸಿಸ್ಟನ್ಸ್:ಪುಣೆ ಮೂಲದ ಉದ್ಯಮ ಸಂಸ್ಥೆ ಕಲ್ಯಾಣಿ ಗ್ರೂಪ್ ಹಾಗೂ ಇಸ್ರೇಲ್ನ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಜಂಟಿಯಾಗಿ ‘ಕಲ್ಯಾಣಿ ರಾಫೆಲ್ ಅಡ್ವಾನ್ಸ್ಡ್ ಸಿಸ್ಟಮ್ಸ್’ ಎಂಬ ಕಂಪನಿ ಸ್ಥಾಪಿಸಿವೆ. ಹೈದರಾಬಾದ್ನಲ್ಲಿ ಒಂದು ಉತ್ಪಾದನಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ₹750 ಕೋಟಿ ಮೊತ್ತದ ಸಾವಿರ ಬರಾಕ್–8ಎಂಆರ್ಎಸ್ಎಎಂ ಕ್ಷಿಪಣಿ ಉತ್ಪಾದಿಸುವ ಮೊದಲ ಗುತ್ತಿಗೆಯನ್ನು ಕಂಪನಿ ಪಡೆದಿದೆ. ಭಾರತದ ವಾಯುಪಡೆಗೆ ಇವು ಪೂರೈಕೆಯಾಗಲಿವೆ.

ಎಲ್ ಅಂಡ್ ಟಿ:ಲಾರ್ಸನ್ ಅಂಡ್ ಟುಬ್ರೊ ಕಂಪನಿಯು ಕಳೆದ ಮೂರು ದಶಕಗಳಿಂದ ತನ್ನ ಗುಜರಾತ್ ಘಟಕದಲ್ಲಿ ರಕ್ಷಣಾ ಸಲಕರಣೆಗಳನ್ನು ಉತ್ಪಾದಿಸುತ್ತಿದೆ. ಕ್ಷಿಪಣಿ, ಶಸ್ತ್ರಾಸ್ತ್ರ ಲಾಂಚರ್ ಸೇರಿದಂತೆ ಯುದ್ಧ ಸಾಮಗ್ರಿಗಳ ವಿನ್ಯಾಸ, ಅಭಿವೃದ್ಧಿ ಹಾಗೂ ಉತ್ಪಾದನೆ ಮಾಡುತ್ತಿದೆ. ಬೆಂಗಳೂರು ಸೇರಿದಂತೆ 8 ಕಡೆಗಳಲ್ಲಿ ಆರ್&ಡಿ ಕೇಂದ್ರಗಳಿವೆ. ಡಿಆರ್ಡಿಒ ಜತೆ ಸೇರಿ 100ಕ್ಕೂ ಹೆಚ್ಚು ಸಾಮಗ್ರಿಗಳನ್ನು ಕಂಪನಿ ಅಭಿವೃದ್ಧಿಪಡಿಸಿದೆ.

ಅಶೋಕ್ ಲೇಲ್ಯಾಂಡ್:ಅಶೋಕ್ ಲೇಲ್ಯಾಂಡ್, ಹಿಂದೂಜಾ ಗ್ರೂಪ್ನ ರಕ್ಷಣಾ ಕಂಪನಿ.ಇದರ ಅತ್ಯಂತ ಪ್ರಸಿದ್ಧವಾದ ಕೊಡುಗೆಯೆಂದರೆ ಸೇನೆಯ ವಾಹನವಾದ ಸ್ಟಾಲಿಯನ್. ಇದು ಕಂಪನಿಗೆ ಹೆಸರು ತಂದುಕೊಟ್ಟಿದೆ. ಸುಮಾರು 70 ಸಾವಿರ ವಾಹನಗಳನ್ನು ತಯಾರಿಸುವ ಮೂಲಕ ಖಾಸಗಿ ವಲಯದ ರಕ್ಷಣಾ ಉತ್ಪಾದನೆಯಲ್ಲಿ ಪ್ರಸಿದ್ಧವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.