ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಈ ಬಗ್ಗೆ ಜನರ ನಡುವೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಪಹಲ್ಗಾಮ್ ಹತ್ಯಾಕಾಂಡಕ್ಕೆ ಕಾರಣವಾದ ದೇಶದೊಂದಿಗೆ ಭಾರತವು ಕ್ರಿಕೆಟ್ ಆಡಬಾರದು ಎನ್ನುವುದು ಕೆಲವರ ವಾದ. ಈ ಸಂಬಂಧ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಹತ್ತಿದ್ದಾರೆ. ಜಗತ್ತನ್ನು ಒಗ್ಗೂಡಿಸುವ ಶಕ್ತಿ ಇರುವುದು ಕ್ರೀಡೆಗೆ. ಹೀಗಾಗಿ ಪಂದ್ಯ ನಡೆಯಬೇಕು, ಕ್ರಿಕೆಟ್ ಮೂಲಕ ಶಾಂತಿ, ಸೌಹಾರ್ದ ಹರಡಬೇಕು ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ಗೆ ‘ಚಿನ್ನದ ಮೊಟ್ಟೆ ಇಡುವ ಕೋಳಿ’ಯೇ ಸರಿ.

ಏಕೆಂದರೆ, ಪಂದ್ಯ ನಡೆಯುವ ಕ್ರೀಡಾಂಗಣಕ್ಕೆ ಪ್ರೇಕ್ಷಕರು ಮುಗಿಬೀಳುತ್ತಾರೆ. ಎಷ್ಟೇ ಬೆಲೆಯಾದರೂ ಟಿಕೆಟ್ಗಳು ಒಂದೇ ದಿನದಲ್ಲಿ ಮಾರಾಟವಾಗುತ್ತವೆ. ಕಾಳಸಂತೆಯಲ್ಲಿಯೂ ಟಿಕೆಟ್ಗಳಿಗೆ ಭಾರಿ ಬೇಡಿಕೆ ಇರುತ್ತದೆ. ಟಿ.ವಿ ಹಾಗೂ ಮೊಬೈಲ್ನಲ್ಲಿ ನೋಡುವವರ ಸಂಖ್ಯೆ ಬಹುಕೋಟಿ ದಾಟುತ್ತದೆ. ಭಾರತ, ಪಾಕಿಸ್ತಾನದಲ್ಲಿ ಅಷ್ಟೇ ಅಲ್ಲ. ಜಗತ್ತಿನ ಹಲವು ದೇಶಗಳ ಎಲ್ಲೆಗಳ ಮೀರಿ ಈ ಪಂದ್ಯ ಕುತೂಹಲದ ಕೇಂದ್ರಬಿಂದುವಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಂತೂ ತರಹೇವಾರಿ ಮೀಮ್ಗಳು, ವಿಶ್ಲೇಷಣೆಗಳ ಮಹಾಪೂರವೇ ಹರಿಯುತ್ತದೆ. ಅದಕ್ಕಾಗಿಯೇ ಜಾಹೀರಾತು ಕೊಡುವವರ ಭರಾಟೆಯೂ ಜೋರು. ಅದರಿಂದಾಗಿ ಬರುವ ಆದಾಯವು ಅಧಿಕೃತ ಪ್ರಸಾರಕರು ಮತ್ತು ಕ್ರಿಕೆಟ್ ಆಯೋಜಕ ಸಂಸ್ಥೆಗಳ ಖಜಾನೆ ತುಂಬುತ್ತದೆ.

ಈ ಬಾರಿ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಆದರೆ, ಸನ್ನಿವೇಶ ಕೊಂಚ ಬದಲಾದಂತಿದೆ. ದುಬೈನಲ್ಲಿ ಭಾನುವಾರ ನಡೆಯಲಿರುವ ಪಂದ್ಯಗಳ ಟಿಕೆಟ್ಗಳು ‘ದುಬಾರಿ’ ಎಂಬ ಕಾರಣಕ್ಕೆ ಪೂರ್ಣಪ್ರಮಾಣದಲ್ಲಿ ಮಾರಾಟವಾಗಿಲ್ಲ ಎಂಬ ವರದಿಗಳಿವೆ. ಇದೇ ಮೊದಲ ಬಾರಿಗೆ ಪಾಕ್ ಎದುರಿನ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕು ಎಂಬ ಒತ್ತಾಯವನ್ನು ಕ್ರಿಕೆಟ್ ಅಭಿಮಾನಿಗಳ ಒಂದು ವರ್ಗ ಮಾಡುತ್ತಿದೆ. ಅದಕ್ಕೆ ಕೆಲವು ರಾಜಕೀಯ ಪಕ್ಷಗಳೂ ದನಿಗೂಡಿಸಿವೆ. ಒಟ್ಟಿನಲ್ಲಿ ಈ ಸಲದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ–ಪಾಕ್ ಪಂದ್ಯದ ಸುತ್ತ ಭಾವನೆಗಳ ತಾಕಲಾಟ, ರಾಜಕೀಯದ ಆಟ, ಲಾಭ–ನಷ್ಟಗಳ ಲೆಕ್ಕಾಚಾರಗಳು ನಡೆಯುತ್ತಿರುವುದು ಸುಳ್ಳಲ್ಲ.

ಇದಕ್ಕೆ ಕಾರಣ, ಹೋದ ಏಪ್ರಿಲ್ನಲ್ಲಿ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿ. ಪಾಕ್ ಪ್ರಚೋದಿತ ಎಂದು ಹೇಳಲಾದ ಭಯೋತ್ಪಾದಕರು ಅಮಾಯಕ ಪ್ರವಾಸಿಗರನ್ನು ಗುಂಡಿಟ್ಟು ಕೊಂದಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಸಿಂಧೂರ’ ಕಾರ್ಯಾಚರಣೆ ನಡೆಸಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ವಿವಿಧ ಕಡೆ ಇದ್ದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ನಂತರ ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತಿನಲ್ಲಿಟ್ಟಿತು. ದೇಶದಲ್ಲಿದ್ದ ಪಾಕಿಸ್ತಾನ ಮೂಲದವರನ್ನು ಮರಳಿ ಅವರ ದೇಶಗಳಿಗೇ ಕಳಿಸಲಾಯಿತು. ಹಾಗಿದ್ದ ಮೇಲೆ ಉಭಯ ದೇಶಗಳ ನಡುವೆ ಕ್ರಿಕೆಟ್ ನಡೆಯಬೇಕೇ? ಇದು ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಂತಲ್ಲವೇ? ರಾಷ್ಟ್ರೀಯತೆ ಪ್ರತಿಪಾದಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಉಭಯ ದೇಶಗಳ ಕ್ರಿಕೆಟ್ ಪಂದ್ಯಗಳಿಗೆ ಏಕೆ ಆನುಮತಿ ನೀಡಿದೆ? ಲೆಜೆಂಡ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಪಾಕ್ ಎದುರಿನ ಪಂದ್ಯಗಳನ್ನು ಬಹಿಷ್ಕರಿಸಿ ಹೊರನಡೆದಿತ್ತು; ಅದು ಇಲ್ಲಿ ಯಾಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಗಳ ಸುತ್ತ ವಾದಗಳು ನಡೆಯುತ್ತಿವೆ.

‘ಭಾರತ ಮತ್ತು ಪಾಕ್ ನಡುವೆ ರಕ್ತ ಹಾಗೂ ನೀರು ಜೊತೆಯಾಗಿ ಹರಿಯಲು ಸಾಧ್ಯವಿಲ್ಲವೆಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಹೇಳಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಪಾಕ್ ಪ್ರಚೋದನೆ ಇದೆ ಎಂದು ಸಾಬೀತು ಮಾಡಲು ಕೇಂದ್ರ ಸರ್ಕಾರವು ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ, ಬಿಸಿಸಿಐ ಧೋರಣೆ ದೇಶವಿರೋಧಿಯಾಗಿರುವುದು ಯಾಕೆ? ಏಷ್ಯಾ ಕಪ್ ಟೂರ್ನಿಯ ನಿಯಮಗಳಿಗೆ ತಾವು ಬದ್ಧರಾಗಿರುವುದಾಗಿ ಬಿಸಿಸಿಐ ಹೇಳುತ್ತಿರುವುದೇ ಹಾಸ್ಯಾಸ್ಪದವಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನಲ್ಲಿ (ಐಸಿಸಿ) ಬಿಸಿಸಿಐಗೆ ಇರುವ ಪ್ರಾಬಲ್ಯ ಎಲ್ಲರಿಗೂ ಗೊತ್ತಿದೆ’ ಎಂದು ಶಿವಸೇನಾ ಧುರೀಣ ಆದಿತ್ಯ ಠಾಕ್ರೆ ವ್ಯಂಗ್ಯವಾಡಿದ್ದಾರೆ.

ಊರ್ವಶಿ ಜೈನ್ ಅವರ ನೇತೃತ್ವದಲ್ಲಿ ನಾಲ್ವರು ಕಾನೂನು ವಿದ್ಯಾರ್ಥಿಗಳು ‘ಭಾರತ ತಂಡವು ಪಾಕ್ ವಿರುದ್ಧ ಪಂದ್ಯವಾಡದಂತೆ ತಡೆ ನೀಡಬೇಕು’ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದರು.

‘ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಬೇಕು’ ಎಂದು ಅರ್ಜಿದಾರರು ಮಾಡಿದ ಮನವಿಯನ್ನು ಗುರುವಾರ ನ್ಯಾಯಪೀಠ ತಳ್ಳಿಹಾಕಿದೆ. ‘ಯಾಕಿಷ್ಟು ಅವಸರ? ಭಾನುವಾರವೇ ಪಂದ್ಯ ನಡೆಯಲಿದ್ದು, ನಾವು ಈಗ ಏನು ಮಾಡಬಹುದು? ಪಂದ್ಯ ನಡೆಯಲಿ ಬಿಡಿ’ ಎಂದು ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿದ್ದಾರೆ.

ಇನ್ನೊಂದೆಡೆ, ಕ್ರಿಕೆಟ್ಗೆ ರಾಜಕೀಯ ಅಥವಾ ಧರ್ಮದ ಬಣ್ಣ ಏಕೆ? ಕ್ರೀಡೆಯು ದೇಶಗಳ ನಡುವೆ, ಮನುಷ್ಯರ ನಡುವೆ ಸೌಹಾರ್ದದ ಸಂಪರ್ಕ ಸೇತುವಾಗಬೇಕಲ್ಲವೇ? ಕ್ರಿಕೆಟ್ ಅನ್ನು ಆಟವಾಗಿಯಷ್ಟೇ ನೋಡಬೇಕು. ಅದು ಯುದ್ಧವೂ ಅಲ್ಲ, ಆಟಗಾರರು ಸೇನಾನಿಗಳೂ ಅಲ್ಲ ಎಂಬ ಪ್ರತಿವಾದಗಳೂ ಕೇಳಿಬರುತ್ತಿವೆ.

ಆದೇನೇ ಆದರೂ ಇನ್ನೆರಡು ದಿನಗಳ ನಂತರ ದುಬೈನಲ್ಲಿ ಪಂದ್ಯ ನಡೆಯುವುದು ಖಚಿತವಾಗಿದೆ. ಭಾರತ ಮತ್ತು ಪಾಕ್ ಕ್ರಿಕೆಟ್ ಪೈಪೋಟಿಯ ಸುಮಾರು ಏಳು ದಶಕಗಳ ಇತಿಹಾಸಕ್ಕೆ ಮತ್ತೊಂದು ಪುಟ ಸೇರಲಿದೆ. ಹಾಕಿ ಕ್ರೀಡೆಯ ಜನಪ್ರಿಯತೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಕ್ರಿಕೆಟ್ಗೆ ಅಷ್ಟೇನೂ ಖ್ಯಾತಿ ಲಭಿಸಿರಲಿಲ್ಲ. ಆದರೆ ಹಾಕಿ ಕ್ರೀಡೆಯಲ್ಲಿಯೂ ಉಭಯ ದೇಶಗಳ ನಡುವಣ ಪಂದ್ಯವೆಂದರೆ ಕಾವೇರುತ್ತಿದ್ದ ಕಾಲವಿತ್ತು. ಆಗ ಅದಕ್ಕೆ ದೇಶ ವಿಭಜನೆ, ಯುದ್ಧಗಳು ಕಾರಣವಾಗಿದ್ದವು. ಭಾರತದ ಕ್ರಿಕೆಟ್ ಈಗ ಸಮೃದ್ಧಿಯ ತುತ್ತತುದಿಗೆ ಮುಟ್ಟಿದೆ. ಆದರೆ, ಆಗ ಬಲಾಢ್ಯವಾಗಿದ್ದ ಪಾಕಿಸ್ತಾನದ ಕ್ರಿಕೆಟ್ ಈಗ ಪಾತಾಳಕ್ಕಿಳಿದಿದೆ. ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿ ಆಡಳಿತ ನಡೆಸಿದರೂ ಪಾಕಿಸ್ತಾನದ ಪರಿಸ್ಥಿತಿ ಬದಲಾಗಿಲ್ಲ.

ಮಾಯವಾದ ಜಿದ್ದಾಜಿದ್ದಿ:

ಮೂರ್ನಾಲ್ಕು ವರ್ಷಗಳಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾದ ಪಂದ್ಯಗಳನ್ನು ವಿಶ್ಲೇಷಿಸಿದರೆ, ಆ ಜಿದ್ದಾಜಿದ್ದಿ ಮಾಯವಾಗಿರುವುದನ್ನು ಅಲ್ಲಗಳೆಯಲಾಗದು. ಅದರಿಂದಾಗಿ ಕ್ರಿಕೆಟ್ನಲ್ಲಿ ಅತಿ ದೊಡ್ಡ ‘ವೈರತ್ವ’ ಎಂದು ಉಭಯ ದೇಶಗಳ ಪಂದ್ಯಗಳನ್ನು ಸಾಮಾಜಿಕ ಜಾಲತಾಣಗಳು, ಜಾಹೀರಾತುಗಳು ಎಷ್ಟೇ ವೈಭವಿಕರಿಸಿದರೂ ಸತ್ಯ ಬೇರೆಯೇ ಇದೆ. ಭಾರತದ ಕ್ರಿಕೆಟ್ ಇವತ್ತು ಸರ್ವಶಕ್ತವಾಗಿದೆ. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ತಂಡಗಳನ್ನು ಏಕಕಾಲಕ್ಕೆ ನಿಯೋಜಿಸಬಲ್ಲ ಸಾಮರ್ಥ್ಯ ಇರುವುದು ಭಾರತಕ್ಕೆ ಮಾತ್ರ ಎಂದು ವಿದೇಶಗಳ ದಿಗ್ಗಜರೇ ಹಾಡಿ ಹೊಗಳುತ್ತಿದ್ದಾರೆ. ಇದು ಅತಿಶಯೋಕ್ತಿಯೇನಲ್ಲ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಘಟಾನುಘಟಿಗಳು ಏಕಾಏಕಿ ನಿವೃತ್ತಿ ಘೋಷಿಸಿದ ಕೆಲವೇ ದಿನಗಳಲ್ಲಿ ಯುವ ನಾಯಕ ಶುಭಮನ್ ಗಿಲ್ ಅವರ ಪಡೆಯು ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಸಮಬಲ ಮಾಡಿದ್ದು ಸಣ್ಣ ಸಾಧನೆಯೇನಲ್ಲ.

ಆದರೆ, ಪಾಕ್ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಅದು ತನ್ನ ಆಂತರಿಕ ರಾಜಕೀಯ, ಭ್ರಷ್ಟಾಚಾರ, ಒಳಜಗಳಗಳಿಂದ ದಿನನಿತ್ಯವೂ ಜಗತ್ತಿನ ಮುಂದೆ ನಗೆಪಾಟಲಿಗೆ ಈಡಾಗುತ್ತಿದೆ. ಆ ದೇಶದ ಮಾಜಿ ಕ್ರಿಕೆಟಿಗರೇ ಈ ವಿಷಯಗಳನ್ನು ಮಾಧ್ಯಮಗಳಲ್ಲಿ ಬಹಿರಂಗವಾಗಿ ಚರ್ಚಿಸುತ್ತಿದ್ದಾರೆ. ಬುಧವಾರ ಯುಎಇ ಎದುರು ಭಾರತದ ಶುಭಮನ್ ಗಿಲ್ ಹೊಡೆದ ಸಿಕ್ಸರ್ ಮತ್ತು ಕುಲದೀಪ್ ಯಾದವ್ ಬೌಲಿಂಗ್ ಸಾಧನೆಯನ್ನು ಕಾಮೆಂಟೇಟರ್ ವಾಸಿಂ ಅಕ್ರಂ ಅವರು ಪರಿಪರಿಯಾಗಿ ಹೊಗಳಿದ್ದು ಕೂಡ ತಮ್ಮ ದೇಶದ ಆಟಗಾರರು ಹಾಗೂ ಆಡಳಿತಕ್ಕೆ ಬಿಸಿ ಮುಟ್ಟಿಸಲು ಎಂಬುದೇನೂ ಗುಟ್ಟಲ್ಲ.

ರಾಜಕೀಯ, ಬಿಸಿಸಿಐ ಅಥವಾ ಐಸಿಸಿಯ ಹಣ ಗಳಿಕೆ ಉದ್ದೇಶಗಳೇನೇ ಇರಲಿ; ಕ್ರೀಡಾಸ್ಫೂರ್ತಿ ಗೆಲ್ಲಬೇಕು. ಪಾಕಿಸ್ತಾನವು ಹಲವಾರು ಬಾರಿ ಭಾರತವನ್ನು ಗಾಸಿಗೊಳಿಸುವ ಪ್ರಯತ್ನ ಮಾಡಿದೆ. ಆದರೂ ಭಾರತವು ಸ್ನೇಹದ ಹಸ್ತ ಚಾಚಿದೆ. ಈಗ ಈ ಪಂದ್ಯವೂ ಅಂತಹದೇ ಪ್ರಯತ್ನದ ಮುಂದುವರಿದ ಭಾಗವೆಂದು ಪಾಕ್ ಅರ್ಥ ಮಾಡಿಕೊಳ್ಳಬೇಕು. ಕ್ರಿಕೆಟ್ ಮೂಲಕ ಶಾಂತಿ, ಸೌಹಾರ್ದದ ಹಾದಿಯನ್ನು ಸಿಂಗರಿಸುವತ್ತ ಪಾಕ್ ಕೂಡ ಕೈಜೋಡಿಸಬೇಕು. ‘ಜಗತ್ತನ್ನು ಒಗ್ಗೂಡಿಸುವ ಶಕ್ತಿಯನ್ನು ಕ್ರೀಡೆಯು ಹೊಂದಿದೆ. ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಸಾಮರ್ಥ್ಯ ಕ್ರೀಡೆಗಿರುವಷ್ಟು ಬೇರೆ ಇನ್ನಾವುದಕ್ಕೂ ಇಲ್ಲ’ ಎಂದು ನೆಲ್ಸನ್ ಮಂಡೇಲಾ ಅವರು ದಶಕಗಳ ಹಿಂದೆ ಹೇಳಿದ್ದ ಮಾತು ಇಂದಿಗೂ ಪ್ರಸ್ತುತವಿದೆ.

ಕ್ರೀಡಾ ಸಚಿವಾಲಯ ಹೇಳುವುದೇನು?

ಕೇಂದ್ರ ಕ್ರೀಡಾ ಸಚಿವಾಲಯವು ತನ್ನ ನಡೆಯನ್ನು ಸ್ಪಷ್ಟಪಡಿಸಿದೆ. ‘ಕಳೆದೊಂದು ದಶಕದಿಂದ ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸುವುದನ್ನು ನಿಷೇಧಿಸಲಾಗಿದೆ. ಆ ನಿಲುವಿಗೆ ನಾವು ಈಗಲೂ ಬದ್ಧ. ನಮ್ಮ ತಂಡ ಅವರ ದೇಶದಲ್ಲಿ ಅಥವಾ ಅವರ ತಂಡ ನಮ್ಮ ನೆಲದಲ್ಲಿ ದ್ವಿಪಕ್ಷೀಯ ಸರಣಿ ಆಡಲು ಸಾಧ್ಯವಿಲ್ಲ. ತಟಸ್ಥ ಸ್ಥಳದಲ್ಲಿಯೂ ಉಭಯ ತಂಡಗಳ ಸರಣಿ ಅಥವಾ ಪಂದ್ಯಗಳನ್ನು ಆಯೋಜಿಸುವುದಿಲ್ಲ. ಆದರೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸುವ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಕ್ರಿಕೆಟ್ ಕೂಡ ಭವಿಷ್ಯದಲ್ಲಿ ಒಲಿಂಪಿಕ್ ಕೂಟದಲ್ಲಿ ಸೇರ್ಪಡೆಯಾಗಲಿದೆ. ಆದ್ದರಿಂದ ನಾವು ಒಲಿಂಪಿಕ್ ಆಂದೋಲನದ ನಿಯಮಾವಳಿಗೆ ಬದ್ಧರಾಗಿರಬೇಕು. ಆದ್ದರಿಂದ ಬಹುದೇಶಗಳ ಟೂರ್ನಿಗಳಲ್ಲಿ ನಮ್ಮ ತಂಡವನ್ನು ನಿರ್ಬಂಧಿಸಲಾಗದು’ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಹೇಳಿದೆ.

ಮೂರು ಬಾರಿ ಮುಖಾಮುಖಿ ಸಾಧ್ಯತೆ

ಭಾರತ ಮತ್ತು ಪಾಕ್ ತಂಡಗಳು ಈ ಏಷ್ಯಾ ಕಪ್ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ವೇಳಾಪಟ್ಟಿಯನ್ನು ರಚಿಸುವಾಗಲೇ ಈ ರೀತಿಯ ಹಣಾಹಣಿಗಳು ಸಾಧ್ಯವಾಗುವಂತೆ ಮಾಡುವ ಕಲೆಯು ಆಯೋಜಕರಿಗೆ ಸಿದ್ಧಿಸಿದೆ.

ಈ ಟೂರ್ನಿಯಲ್ಲಿ ಎಂಟು ತಂಡಗಳಿವೆ. ಅವುಗಳಲ್ಲಿ ಭಾರತ ಮತ್ತು ಪಾಕ್ ತಂಡಗಳು ಹೆಚ್ಚು ಬಲಶಾಲಿಗಳಾಗಿವೆ. ಅಫ್ಗಾನಿಸ್ತಾನ, ಒಮಾನ್, ಯುಎಇ, ಶ್ರೀಲಂಕಾ, ಹಾಂಗ್ಕಾಂಗ್ ಮತ್ತು ಬಾಂಗ್ಲಾದೇಶ ತಂಡಗಳು ನಂತರದ ಸ್ಥಾನದಲ್ಲಿವೆ.

ಈ ತಂಡಗಳನ್ನು ಎರಡು ಗುಂಪುಗಳಲ್ಲಿ (ಎ ಮತ್ತು ಬಿ) ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದ ತಂಡಗಳು ಸೂಪರ್ ಫೋರ್ಗೆ ಅರ್ಹತೆ ಪಡೆಯುತ್ತವೆ. ಈ ವಿಭಾಗದಲ್ಲಿ ಪ್ರತಿ ತಂಡವೂ ಮೂರು ಪಂದ್ಯಗಳನ್ನು ಆಡುತ್ತದೆ. ಎ ಗುಂಪಿನಲ್ಲಿರುವ ಭಾರತ ಮತ್ತು ಪಾಕ್ ಒಂದು ಪಂದ್ಯದಲ್ಲಿ (ಸೆ. 14) ಆಡಲಿವೆ. ಈ ಗುಂಪಿನಲ್ಲಿರುವ ಯುಎಇ ಮತ್ತು ಒಮಾನ್ ತಂಡಗಳು ದುರ್ಬಲ ತಂಡಗಳಾಗಿವೆ. ಆದ್ದರಿಂದ ಮೊದಲೆರಡೂ ಸ್ಥಾನಗಳಲ್ಲಿ ಭಾರತ ಮತ್ತು ಪಾಕ್ ಬರುವುದು ಬಹುತೇಕ ಖಚಿತ. ಆದ್ದರಿಂದ ಸೂಪರ್ ಫೋರ್ ಹಂತದಲ್ಲಿಯೂ ಹಣಾಹಣಿ ನಡೆಸುತ್ತವೆ. ಒಂದೊಮ್ಮೆ ಎರಡೂ ತಂಡಗಳು ಫೈನಲ್ ತಲುಪಿದರೆ ಮತ್ತೊಂದು ಸೆಣಸಾಟವನ್ನು ನಿರೀಕ್ಷಿಸಬಹುದು. ಇತ್ತೀಚೆಗೆ ಉತ್ತಮವಾಗಿ ಆಡುತ್ತಿರುವ ಅಫ್ಗಾನಿಸ್ತಾನ ಮತ್ತು ಸ್ವಲ್ಪಮಟ್ಟಿಗೆ ಶ್ರೀಲಂಕಾ ತಂಡಗಳು ವ್ಯತ್ಯಾಸ ಮಾಡಿದರೆ ಫೈನಲ್ ಲೆಕ್ಕಾಚಾರ ಬದಲಾಗಬಹುದು. ಆದರೆ, ಭಾರತ–ಪಾಕ್ ನಡುವೆ ಎರಡು ಪಂದ್ಯಗಳಂತೂ ಖಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.