ಸುಂಕ ಹೆಚ್ಚಳದಿಂದಾಗಿ ರಾಜ್ಯದಿಂದ ಅಮೆರಿಕಕ್ಕೆ ಆಗುವ ರಫ್ತಿನ ಮೇಲೆ ಹೆಚ್ಚು ಪರಿಣಾಮ ಬೀರದು ಎನ್ನುವುದು ನಮ್ಮ ಅಂದಾಜು. ಈಗ ಶೇ 25ರಷ್ಟು ಸುಂಕ ವಿಧಿಸಲಾಗಿದ್ದರೂ, ಎರಡೂ ರಾಷ್ಟ್ರಗಳ ನಡುವೆ ವ್ಯಾಪಾರ ಒಪ್ಪಂದ ಮಾತುಕತೆ ನಡೆಯುತ್ತಿದೆ. ಸುಂಕ ಕಡಿಮೆ ಆದರೂ ಆಗಬಹುದು. ಸದ್ಯದ ಮಟ್ಟಿಗೆ ನಮ್ಮ ರಫ್ತಿನಲ್ಲಿ ಶೇ 10ರಷ್ಟು ಕಡಿಮೆಯಾಗಬಹುದು. ಭಾರತ ಹಲವು ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ ಬ್ರಿಟನ್ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸುಂಕ ವಿನಾಯಿತಿಗಳನ್ನು ಘೋಷಿಸಲಾಗಿದೆ. ಒಂದು ವೇಳೆ ಅಮೆರಿಕದ ಸುಂಕದಿಂದಾಗಿ ಅಲ್ಲಿಗೆ ಮಾಡಲಾಗುವ ರಫ್ತಿನ ಮೇಲೆ ಪರಿಣಾಮ ಬಿದ್ದರೂ, ಬ್ರಿಟನ್ ಸೇರಿದಂತೆ ನಾವು ಒಪ್ಪಂದ ಮಾಡಿಕೊಂಡ ಇತರ ರಾಷ್ಟ್ರಗಳೊಂದಿಗಿನ ರಫ್ತು ವ್ಯವಹಾರ ಹೆಚ್ಚಲಿದೆ