ಚಿತ್ರನಟಿ ರನ್ಯಾ ಚಿನ್ನ ಕಳ್ಳ ಸಾಗಣೆ ಆರೋಪದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿದ್ದಾರೆ. ಚಿನ್ನ ಕಳ್ಳಸಾಗಣೆಯು ಭಾರತದಲ್ಲಿ ದೊಡ್ಡ ದಂಧೆಯೇ ಆಗಿದ್ದು, ಪ್ರತಿ ವರ್ಷ ಸಾವಿರಾರು ಕೆ.ಜಿ. ಚಿನ್ನ ಅಕ್ರಮ ಮಾರ್ಗಗಳಲ್ಲಿ ದೇಶದೊಳಗೆ ಬರುತ್ತಿದೆ. ಹಳದಿ ಲೋಹವು ಯುಎಇ, ಚೀನಾ, ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ ಮುಂತಾದ ರಾಷ್ಟ್ರಗಳಿಂದ ಅಕ್ರಮವಾಗಿ ಒಳಬರುತ್ತಿದೆ. ಜಾಗತಿಕವಾಗಿ ಚಿನ್ನ ಕಳ್ಳಸಾಗಣೆ ನಡೆಯುವ ರಾಷ್ಟ್ರಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ.