ಸದಸ್ಯರು:
ಜಿಲ್ಲೆಯ ಎಲ್ಲ ಶಾಸಕರು, ರಾಜ್ಯದ ಒಬ್ಬ ಪ್ರತಿನಿಧಿ, ನಗರ ಪಾಲಿಕೆಗಳ ಎಲ್ಲ ಮೇಯರ್‌ಗಳು ಅಥವಾ ಅಧ್ಯಕ್ಷರು (ಇವರಲ್ಲಿ ಒಬ್ಬ ಮಹಿಳೆ ಇರಬೇಕು), ಐದು ಗ್ರಾಮ ಪಂಚಾಯಿತಿಗಳ ಮುಖ್ಯಸ್ಥರು (ಇವರಲ್ಲಿ ಇಬ್ಬರು ಮಹಿಳೆಯರು ಆಗಿರಬೇಕು), ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಎ) ಯೋಜನಾ ನಿರ್ದೇಶಕ,ಬ್ಲಾಕ್ ಪಂಚಾಯಿತಿಗಳ ಅಧ್ಯಕ್ಷರು, ಪ್ರತಿಷ್ಠಿತ ಎನ್‌ಜಿಒ ಒಂದರ ಪ್ರತಿನಿಧಿ, ಎಸ್‌ಸಿ, ಎಸ್‌ಟಿ ಸಮುದಾಯದಿಂದ ತಲಾ ಒಬ್ಬರು, ಒಬ್ಬ ಮಹಿಳೆ, ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್, ಅಂಚೆ ಇಲಾಖೆಯ ಹಿರಿಯ ಸೂಪರಿಂಟೆಂಡೆಂಟ್ ಮತ್ತು ದಿಶಾ ವ್ಯಾಪ್ತಿಗೆ ಬರುವ ಸರ್ಕಾರದ ಎಲ್ಲ ಯೋಜನೆಗಳ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಸಮಿತಿಯ ಸದಸ್ಯರಾಗಿರುತ್ತಾರೆ.