ಜಸ್‌ಪ್ರೀತ್ ಬೂಮ್ರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಯೋಗಿಸಿದ 4483 ಎಸೆತಗಳಿಗೆ ಯಾವ ಬ್ಯಾಟರ್ ಕೂಡ ಸಿಕ್ಸರ್ ಬಾರಿಸಿರಲಿಲ್ಲ. ಇತ್ತೀಚೆಗೆ ಆಸ್ಟ್ರೇಲಿಯಾದ ಹೊಸ ಹುಡುಗ ಸ್ಯಾಮ್ ಕಾನ್‌ಸ್ಟಸ್ ಅವರು ಸಿಕ್ಸರ್ ಹೊಡೆದು ಈ ದಾಖಲೆ ಮುರಿದರು. ಸತತ ಮೂರು ವರ್ಷಗಳಲ್ಲಿ ಬೂಮ್ರಾ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ಬ್ಯಾಟರ್ ಸಿಕ್ಸರ್ ಹೊಡೆದಿರಲಿಲ್ಲ. ಇದು ಅವರ ಬೌಲಿಂಗ್ ಸಾಮರ್ಥ್ಯಕ್ಕೆ ಒಂದು ಉದಾಹರಣೆಯಷ್ಟೇ...
ಇವತ್ತು ಎಲ್ಲರೂ ನನ್ನನ್ನು ಹೊಗಳುತ್ತಿದ್ದಾರೆ. ನಾನೂ ಚೆನ್ನಾಗಿ ಆಡುತ್ತಿದ್ದೇನೆ. ಮುಂದೊಂದು ದಿನ ಸಾಮರ್ಥ್ಯ ಕಡಿಮೆಯಾದಾಗ ಇದೇ ಜನ ಟೀಕಿಸುತ್ತಾರೆ. ಆದ್ದರಿಂದ ಹೊಗಳಿಕೆ, ತೆಗಳಿಕೆ ಎರಡನ್ನೂ ಮನಸ್ಸಿಗೆ ಹಚ್ಚಿಕೊಳ್ಳಬಾರದು. ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ಆಡಲು ಪ್ರಯತ್ನಿಸಬೇಕು. ಎಲ್ಲವನ್ನೂ ಮುಕ್ತಮನಸ್ಸಿನಿಂದ ಸ್ವೀಕರಿಸಬೇಕು.
–ಜಸ್‌ಪ್ರೀತ್ ಬೂಮ್ರಾ
ವಿರಾಟ್ ಕೊಹ್ಲಿಯೊಳಗಿನ ಕಿಂಗ್ ಈಗ ಅಂತ್ಯವಾಗಿದ್ದಾನೆ. ಹೊಸ ಕಿಂಗ್ ಆಗಿ ಈಗ ಜಸ್‌ಪ್ರೀತ್ ಬೂಮ್ರಾ ಉದಯಿಸಿದ್ದಾರೆ.