ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಸುವುದನ್ನು ನಿಷೇಧಿಸಿ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಆದೇಶ ಹೊರಡಿಸಿದೆ. ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಹಾಳೆಗಳ ಬಳಕೆ ವ್ಯಾಪಕವಾಗಿರುವುದರಿಂದ ಇದು ಅಗತ್ಯವಾದ ಕ್ರಮವಾಗಿತ್ತು. ಆದರೆ, ಪ್ಲಾಸ್ಟಿಕ್ ಬಳಕೆ ಇಡ್ಲಿ ಬೇಯಿಸಲು ಮಾತ್ರ ಸೀಮಿತವಾಗಿಲ್ಲ. ಆಹಾರ ತಯಾರಿಕೆ, ಅದರ ಸಾಗಣೆ ಮುಂತಾದ ಕಾರಣಗಳಿಗಾಗಿ ಪ್ಲಾಸ್ಟಿಕ್ ಅನ್ನು ಎಲ್ಲೆಡೆ ಎಗ್ಗಿಲ್ಲದೇ ಬಳಸಲಾಗುತ್ತಿದ್ದು, ಇದು ಸಹಜ ಪದ್ಧತಿ ಎನ್ನುವಂತಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ಇದು ಗಂಭೀರ ದುಷ್ಪರಿಣಾಮ ಬೀರುತ್ತಿದೆ.

ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಸುವುದನ್ನು ರಾಜ್ಯದಲ್ಲಿ ನಿಷೇಧಿಸಿರುವುದರ ಬೆನ್ನಹಿಂದೆಯೇ ಆಹಾರ ತಯಾರಿ ಮತ್ತು ಬಳಕೆಯ ವಿವಿಧ ಹಂತಗಳಲ್ಲಿ ಪ್ಲಾಸ್ಟಿಕ್ ಬಳಸುವ ವಿಚಾರವು ಮುನ್ನೆಲೆಗೆ ಬಂದಿದೆ. ಹೋಟೆಲ್, ರೆಸ್ಟೋರೆಂಟ್, ಫಾಸ್ಟ್ಫುಡ್ ಮಳಿಗೆಗಳು, ಫುಡ್ ಟ್ರಕ್, ಬಾರ್ ಮುಂತಾದ ಸ್ಥಳಗಳಲ್ಲಿ ಪ್ಲಾಸ್ಟಿಕ್ ಅನ್ನು ಅವ್ಯಾಹತವಾಗಿ ಬಳಸಲಾಗುತ್ತಿದೆ. ಪಾಲಿಥೀನ್ ಮತ್ತು ಪ್ಲಾಸ್ಟಿಕ್ ಚೀಲಗಳಿಲ್ಲದೇ ಆಹಾರದ ಉದ್ಯಮವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ.

ಬಿಸಿಯಾದ ಅನ್ನ, ಸುಡುವ ಸಾಂಬಾರ್, ಹಬೆಯಾಡುವ ಕಾಫಿ–ಟೀ, ಹಾಲು ಮುಂತಾದವನ್ನು ಹೋಟೆಲ್ಗಳು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಪಾರ್ಸೆಲ್ ಮಾಡುವುದು ಈಗ ಅತ್ಯಂತ ಸಾಮಾನ್ಯ ವಿದ್ಯಮಾನ. ಹಾಗೆಯೇ, ಹೋಟೆಲ್ನಲ್ಲಿ ತಿನ್ನುವಾಗಲೂ ತಟ್ಟೆಯಲ್ಲಿ ಪ್ಲಾಸ್ಟಿಕ್ ಹಾಳೆ ಹರಡಿ ಅದರ ಮೇಲೆ ಬಿಸಿಯಾದ ಇಡ್ಲಿ, ಸಾಂಬಾರ್ ಮುಂತಾದ ಪದಾರ್ಥಗಳನ್ನು ಹಾಕಿ ಗ್ರಾಹಕರಿಗೆ ಕೊಡಲಾಗುತ್ತಿದೆ. ಕಾಫಿ–ಟೀ ಅನ್ನು ಪ್ಲಾಸ್ಟಿಕ್ನಿಂದ ಮಾಡಿದ ಲೋಟಗಳಲ್ಲಿ ನೀಡಲಾಗುತ್ತಿದೆ.

ಬಿಸಿಯಾದ ಆಹಾರದ ಪಾರ್ಸೆಲ್ಗಾಗಿ ಪ್ಲಾಸ್ಟಿಕ್ ಬಳಸುವುದೇ ಅಪಾಯಕಾರಿ. ಅದರಲ್ಲೂ ಬಹುತೇಕ ಹೋಟೆಲ್, ಅಂಗಡಿ, ರೆಸ್ಟೊರೆಂಟ್ಗಳಲ್ಲಿ ಏಕಬಳಕೆಯ ಅಥವಾ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಚೀಲಗಳನ್ನು ಬಳಸಲಾಗುತ್ತಿದ್ದು, ಪ್ಲಾಸ್ಟಿಕ್ಗಳಲ್ಲಿರುವ ವಿಷಕಾರಿ ಅಂಶಗಳು ಜನರ ಹೊಟ್ಟೆ ಸೇರುತ್ತಿವೆ.

ಶಾಖಕ್ಕೆ ಒಡ್ಡಿದಾಗ ಪ್ಲಾಸ್ಟಿಕ್ನಲ್ಲಿರುವ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಹೊರಬರುತ್ತವೆ. ಬಿಸಿ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿದಾಗ ಎರಡರ ನಡುವೆ ಅತಿ ಹೆಚ್ಚಿನ ರಾಸಾಯನಿಕ ವಿನಿಮಯ ನಡೆಯುತ್ತದೆ. ಅದರಿಂದ ಆಹಾರ ಪದಾರ್ಥದ ಸ್ವರೂಪವೇ ಬದಲಾಗುವ ಸಾಧ್ಯತೆ ಇದೆ. ಆಹಾರ ಪದಾರ್ಥಗಳೊಂದಿಗೆ ಅಪಾಯಕಾರಿ ರಾಸಾಯನಿಕಗಳು ಸೇರಿ, ಅನೇಕ ತರಹದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಹೀಗೆ ಬಿಸಿಯಾದ ಅನ್ನ, ಸಾಂಬಾರ್, ಕಾಫಿ–ಟೀ, ಮುಂತಾದ ಪದಾರ್ಥಗಳನ್ನು ನಿರಂತರವಾಗಿ ಪ್ಲಾಸ್ಟಿಕ್ ಚೀಲಗಳಲ್ಲಿ ಪಾರ್ಸೆಲ್ ಮಾಡಿಸಿಕೊಂಡು ಬಳಸುತ್ತಿದ್ದ ಛತ್ತೀಸಗಢ, ಆಂಧ್ರಪ್ರದೇಶ, ಒಡಿಶಾದ ಸಾವಿರಾರು ಮಂದಿ ಕಿಡ್ನಿ, ಗಂಟಲು ಸಮಸ್ಯೆ, ಕ್ಯಾನ್ಸರ್, ಬಂಜೆತನ ಮುಂತಾದ ಕಾಯಿಲೆಗಳಿಗೆ ಒಳಗಾಗಿ ಮುಂಬೈನ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ವರದಿಯಾಗಿತ್ತು.

ಹೋಳಿಗೆ ತಯಾರಿಸುವಾಗಲೂ ಏಕ ಬಳಕೆ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತಿದೆ. ಹಾಲನ್ನು ಬಿಸಿ ಮಾಡುವಾಗ, ಅದರ ಪ್ಯಾಕೆಟ್ ಒಡೆದು, ಹಾಲನ್ನು ಪಾತ್ರೆಗೆ ಹಾಕಿ ಕುದಿಸುವುದು ರೂಢಿ. ಆದರೆ, ಇತ್ತೀಚೆಗೆ ಕೆಲವು ಕಡೆಗಳಲ್ಲಿ, ಹಾಲಿನ ಪ್ಯಾಕೆಟ್ ಅನ್ನೇ ನೇರವಾಗಿ ಕುದಿಯುವ ನೀರಿಗೆ ಹಾಕಿ, ಆ ಪ್ಲಾಸ್ಟಿಕ್ ಪ್ಯಾಕೆಟ್ನಲ್ಲೇ ಹಾಲು ಕುದಿಯುವಂತೆ ಮಾಡಲಾಗುತ್ತಿದೆ.

ಕರಿದ ತಿಂಡಿಗಳನ್ನು ತಯಾರಿಸಲು ಬಾಣಲಿಗೆ ಎಣ್ಣೆಹಾಕುವಾಗ, ಕೆಲವು ಆಹಾರ ತಯಾರಕರು ಅಡುಗೆ ಎಣ್ಣೆಯ ಪ್ಲಾಸ್ಟಿಕ್ ಪೊಟ್ಟಣವನ್ನು ಕತ್ತರಿಸದೆ, ಪ್ಯಾಕೆಟ್ ಅನ್ನು ನೇರವಾಗಿ ಕಾದಿರುವ ಬಾಣಲೆಗೆ ಒತ್ತಿ ಹಿಡಿದು, ಪ್ಲಾಸ್ಟಿಕ್ನ ತಳಭಾಗ ಕರಗಿ ಪ್ಯಾಕೆಟ್ ಒಡೆಯುವಂತೆ ಮಾಡುವುದು ಕೂಡ ಅಲ್ಲಲ್ಲಿ ಕಾಣಸಿಗುತ್ತಿದೆ. ಇವೆಲ್ಲವೂ ಕೂಡ ಆಹಾರದೊಂದಿಗೆ ಪ್ಲಾಸ್ಟಿಕ್ನಲ್ಲಿರುವ ಹಾನಿಕಾರಕ ರಾಸಾಯನಿಕ ಬೆರೆತು ಹೋಗುವಂತೆ ಮಾಡುತ್ತಿದೆ.

ಇವು ಕೆಲವು ಉದಾಹರಣೆಗಳಷ್ಟೇ, ಆಹಾರ ತಯಾರಿಕಾ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಹಲವು ರೀತಿಯಲ್ಲಿ ಬಳಕೆಯಾಗುತ್ತಿದೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಜನರು ವಿಷಕಾರಿ ಆಹಾರವನ್ನು ತಿಂದು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.

ಆರೋಗ್ಯಕ್ಕೆ ಹೇಗೆ ಹಾನಿ?

ಪ್ಲಾಸ್ಟಿಕ್ ಬಿಸಿಯಾದಾಗ ಅದರಿಂದ ಬಿಡುಗಡೆಯಾಗುವ ರಾಸಾಯನಿಕಗಳು ಆಹಾರವನ್ನು ಸೇರಿ ಅದನ್ನು ವಿಷಪೂರಿತವನ್ನಾಗಿ ಮಾಡುತ್ತವೆ. ಅಂತಹ ಆಹಾರ ಸೇವನೆ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಧ್ಯಯನಗಳಲ್ಲೂ ಇದು ಸಾಬೀತಾಗಿದೆ.

ಪ್ಲಾಸ್ಟಿಕ್ ತಯಾರಿಕೆಯಲ್ಲಿ ಹಲವು ರಾಸಾಯನಿಕ ವಸ್ತುಗಳು ಬಳಕೆಯಾಗುತ್ತವೆಯಾದರೂ ಎರಡು ವಸ್ತುಗಳ ಬಗ್ಗೆ ವಿಜ್ಞಾನಿಗಳು ಪ್ರಮುಖವಾಗಿ ಬೆಳಕು ಚೆಲ್ಲಿದ್ದಾರೆ. ಒಂದು ಥಾಲೇಟ್ (phthalate) ಮತ್ತು ಇನ್ನೊಂದು
ಬಿಸ್ಫೆನಾಲ್ ಎ (ಬಿಪಿಎ). ಪ್ಲಾಸ್ಟಿಕ್ ಅನ್ನು ಮೆದುಗೊಳಿಸಲು ಥಾಲೆಟ್ ಬಳಸಲಾಗುತ್ತದೆ. ಗಟ್ಟಿಯಾದ ಪ್ಲಾಸ್ಟಿಕ್ ತಯಾರಿಸಲು ಬಿಪಿಎಯನ್ನು ಬಳಸಲಾಗುತ್ತದೆ. ಈ ಎರಡು ರಾಸಾಯನಿಕ ವಸ್ತುಗಳು ಮನುಷ್ಯನ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ. ಇವುಗಳು ದೇಹದ ಹಾರ್ಮೋನ್ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇದರಿಂದಾಗಿ ಹಾರ್ಮೋನ್ಗಳ ಅಸಮತೋಲನ ಉಂಟಾಗಿ, ಸಹಜ ಬೆಳವಣಿಗೆ, ಫಲವಂತಿಕೆ ಮತ್ತು ಸಂತಾನೋತ್ಪತ್ತಿಯ ಮೇಲೂ ಪರಿಣಾಮವಾಗುತ್ತದೆ.

ಪ್ಲಾಸ್ಟಿಕ್ನಲ್ಲಿರುವ ರಾಸಾಯನಿಕಗಳು ಜೀರ್ಣಾಂಗ ವ್ಯವಸ್ಥೆಗೂ ಹಾನಿ ಮಾಡುತ್ತವೆ. ನರವ್ಯೂಹ ವ್ಯವಸ್ಥೆಗೂ ಧಕ್ಕೆ ತರುತ್ತವೆ. ಅಲ್ಲದೇ, ಇವು ವಿವಿಧ ರೀತಿಯ ಕ್ಯಾನ್ಸರ್ಗೂ ಕಾರಣವಾಗಬಹುದು ಎಂದು ಎಚ್ಚರಿಸುತ್ತಾರೆ ತಜ್ಞರು.

ಕಾಗದದ ಕಪ್ ಸುರಕ್ಷಿತವಲ್ಲ

ಹೋಟೆಲ್, ಚಹಾ ಅಂಗಡಿಗಳು, ಸಮಾರಂಭಗಳಲ್ಲಿ ಚಹಾ, ಪಾನೀಯಗಳನ್ನು ಕಾಗದದಿಂದ ತಯಾರಿಸಿದ ಲೋಟ/ಕಪ್ಗಳಲ್ಲಿ ನೀಡಲಾಗುತ್ತಿದೆ (ಇವು ಏಕಬಳಕೆಯ ಕಪ್ಗಳು). ಈ ಕಪ್ಗಳು ಪರಿಸರಸ್ನೇಹಿ, ಆರೋಗ್ಯಸ್ನೇಹಿ ಎಂದು ಪ್ರತಿಪಾದಿಸಲಾಗುತ್ತದೆ. ಆದರೆ, ಈ ಪೇಪರ್ ಕಪ್ಗಳು ಕೂಡ ಸುರಕ್ಷಿತವಲ್ಲ ಎಂದು ಹೇಳುತ್ತಾರೆ ಸಂಶೋಧಕರು.

ಬಿಸಿಯನ್ನು ತಾಳಿಕೊಳ್ಳಲು, ಸೋರಿಕೆ ತಡೆಯಲು ಈ ಕಾಗದದ ಲೋಟ/ಕಪ್ಗಳಲ್ಲಿ ತೆಳುವಾದ ಪ್ಲಾಸ್ಟಿಕ್ನ ಪದರ ಹಾಕಲಾಗುತ್ತದೆ. ಬಿಸಿ ಚಹಾ, ಪಾನೀಯವನ್ನು ಕಪ್ಗೆ ಹಾಕಿದಾಗ ಅದರ ಬಿಸಿಗೆ ಪ್ಲಾಸ್ಟಿಕ್ನಲ್ಲಿರುವ ರಾಸಾಯನಿಕಗಳು ಕರಗಿ ಚಹಾ, ಪಾನೀಯದೊಂದಿಗೆ ಬೆರೆಯುತ್ತವೆ. ಇದು ಆರೋಗ್ಯಕ್ಕೆ ಹಾನಿಕರ ಎಂದು ಐಐಟಿ ಖರಗ್ಪುರದ ಅಧ್ಯಯನಕಾರರು 2020ರಲ್ಲಿ ನಡೆಸಿದ್ದ ಅಧ್ಯಯನ ಹೇಳಿದೆ.

ಕಾಗದದಲ್ಲಿ ಆಹಾರ: ಒಳ್ಳೆಯದಲ್ಲ

ಬಜ್ಜಿ, ಬೋಂಡಾ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು, ತಿಂಡಿ–ತಿನಿಸುಗಳನ್ನು ಹಳೆಯ ಪತ್ರಿಕೆ, ನಿಯತಕಾಲಿಕ ಸೇರಿದಂತೆ ಮುದ್ರಿತ ಕಾಗದಗಳಲ್ಲಿ ಹಾಕಿ ಕೊಡುವ, ಕಟ್ಟಿಕೊಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಆರೋಗ್ಯದ ದೃಷ್ಟಿಯಿಂದ ಇದು ಕೂಡ ಅಪಾಯಕಾರಿ ಎಂದು ಹೇಳುತ್ತಾರೆ ತಜ್ಞರು.

ಪತ್ರಿಕೆಗಳಲ್ಲಿ/ಮುದ್ರಿತ ಹಾಳೆಗಳಲ್ಲಿ ಇರುವ ಶಾಯಿಯು ವಿಷಕಾರಿ. ಶಾಯಿ ತಯಾರಿಕೆಗೆ ಸೀಸದಂತಹ ಲೋಹಗಳನ್ನು ಬಳಸಲಾಗುತ್ತಿದ್ದು, ಇದು ಆರೋಗ್ಯಕ್ಕೆ ಅಪಾಯಕಾರಿ. ಬಿಸಿ ಅಥವಾ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಮುದ್ರಿತ ಕಾಗದದಲ್ಲಿ ಕಟ್ಟಿದಾಗ, ಅದರ ಶಾಖಕ್ಕೆ ಶಾಯಿಯಲ್ಲಿರುವ ರಾಸಾಯನಿಕಗಳು ಕರಗಿ ಆಹಾರ ಪದಾರ್ಥದೊಂದಿಗೆ ಬೆರೆಯುತ್ತವೆ. ಇಂತಹ ಆಹಾರ ಸೇವನೆ ಕ್ಯಾನ್ಸರ್ನಂತಹ ಕಾಯಿಲೆ ತರಬಹುದು.

ಆಧಾರ: ಎಫ್ಎಸ್ಎಸ್ಎಐ ನಿಯಮಾವಳಿಗಳು, ಬಿಬಿಸಿ, ಪಿಐಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.