ಗಣನೀಯ ಸಾಧನೆ
30 ವರ್ಷಗಳಲ್ಲಿ ಭಾರತವು ಜಿಡಿಪಿ ಬೆಳವಣಿಗೆಯಲ್ಲಿ ಅದ್ಭುತ ಪ್ರಗತಿ ಸಾಧಿಸಿದೆ ಎಂದು ಹೇಳಲಾಗಿದೆ. 2000ದಲ್ಲಿ ಭಾರತವು ಜಗತ್ತಿನ ಮೊದಲ ಹತ್ತು ಆರ್ಥಿಕತೆಗಳ ಸನಿಹವೂ ಇರಲಿಲ್ಲ . ನಂತರದಲ್ಲಿ ದೇಶದ ಆರ್ಥಿಕತೆ ವೇಗವಾಗಿ ಬೆಳೆಯತೊಡಗಿತು. ಬ್ರೆಜಿಲ್, ಇಟಲಿ ಮತ್ತು ಕೆನಡಾ ದೇಶಗಳನ್ನು ಹಿಂದಿಕ್ಕಿ 2015ರಲ್ಲಿ 7ನೇ ಸ್ಥಾನಕ್ಕೆ ಏರಿತು. ನಂತರ 2022ರಲ್ಲಿ ಫ್ರಾನ್ಸ್ ಮತ್ತು ಬ್ರಿಟನ್ ಅನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ಏರಿತ್ತು. ಐಎಂಎಫ್ ಮುನ್ನೋಟದ ಪ್ರಕಾರ, ಮುಂದಿನ ವರ್ಷ ನಾಲ್ಕನೇ ಸ್ಥಾನಕ್ಕೆ ಏರಲಿರುವ ಭಾರತವು 2028–29ರ ಹೊತ್ತಿಗೆ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಲಿದೆ. ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ.