ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ, ಪ್ರತಿಷ್ಠಿತ ಶಾಲೆ–ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದ ಬೆಂಗಳೂರಿನ ಸಾಕೇತ್ ಶ್ರೀನಿವಾಸಯ್ಯ, ಸ್ನಾತಕೋತ್ತರ ಪದವಿಗಾಗಿ ಅಮೆರಿಕಕ್ಕೆ ಹೋದರು. ಕ್ಯಾಲಿಫೋರ್ನಿಯಾದಲ್ಲಿ ಅವರ ಪದವಿ ಪೂರ್ಣಗೊಳ್ಳುವ ಮುನ್ನವೇ ಅವರ ಜೀವನ ಅಂತ್ಯಗೊಂಡಿದೆ. ಆದರೆ, ಮಗನ ಭವ್ಯ ಭವಿಷ್ಯದ ಬಗ್ಗೆ ಕನಸು ಕಂಡಿದ್ದ ಅವರ ಪೋಷಕರಿಗೆ ಮಗ ದೂರದ ದೇಶದಲ್ಲಿ ಶವವಾಗಿ ಬಿದ್ದಿರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.

ನಾಲ್ಕು ದಿನಗಳ ಹಿಂದೆ ಕೆನಡಾದಲ್ಲಿ ಕರ್ನಾಟಕದ ನೆಲಮಂಗಲದ ಟೆಕಿ ಚಂದನ್ ಕುಮಾರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಯಿತು. ವಿವಿಧ ದೇಶಗಳಿಗೆ ಶಿಕ್ಷಣ, ಉದ್ಯೋಗಕ್ಕಾಗಿ ಮಕ್ಕಳನ್ನು ಕಳುಹಿಸಿದ ನೂರಾರು ಪೋಷಕರು ಮಕ್ಕಳನ್ನು ಕಳೆದುಕೊಂಡು ಸಂಕಟಕ್ಕೆ ಗುರಿಯಾಗುತ್ತಿದ್ದಾರೆ. ಅದರಲ್ಲೂ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾಕ್ಕೆ ಮಕ್ಕಳನ್ನು ಕಳುಹಿಸಿದ ಪೋಷಕರು ಇಂತಹ ನೋವನ್ನು ಹೆಚ್ಚು ಅನುಭವಿಸುತ್ತಿದ್ದಾರೆ.

ಜನಾಂಗೀಯವಾದ, ರಾಜಕಾರಣ, ಬದಲಾದ ಪರಿಸ್ಥಿತಿಗಳು ಇದಕ್ಕೆ ಕಾರಣವಾಗುತ್ತಿವೆ. ಹಿಂಸಾಚಾರದ ಜತೆಗೆ ಹಲವು ರೀತಿಯ ಕಾಯಿಲೆ, ಒತ್ತಡ, ಆತ್ಮಹತ್ಯೆ, ಅಪಘಾತದಿಂದಲೂ ಭಾರತೀಯರ ಗಮನಾರ್ಹ ಪ್ರಮಾಣದಲ್ಲಿ ಸಾಯುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತಿವೆ.

ಅಮೆರಿಕ

ಭಾರತೀಯರು ಅತಿ ಹೆಚ್ಚು ಪ್ರಮಾಣದಲ್ಲಿ ಇರುವ/ಹೋಗುವ ದೇಶಗಳಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ಉದ್ಯೋಗ ಮತ್ತು ಶಿಕ್ಷಣಕ್ಕೆ ಅಮೆರಿಕಕ್ಕೆ ಹೋಗುವ ಪ್ರವೃತ್ತಿ ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ನಂತರ ಭಾರಿ ಹೆಚ್ಚಾಯಿತು. ಹಾಗೆ ಹೋದ ಅನೇಕರು ಗ್ರೀನ್ ಕಾರ್ಡ್ ಪಡೆದು ಆ ದೇಶದ ಪ್ರಜೆಗಳೂ ಆದರು. ಕ್ರಮೇಣ ಆರ್ಥಿಕ ಕುಸಿತ ಇತ್ಯಾದಿ ಕಾರಣಗಳಿಂದ ಅಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಯಿತು. ಭಾರತದ ವಲಸಿಗರೇ ನಿರುದ್ಯೋಗಕ್ಕೆ ಕಾರಣ ಎನ್ನುವ ಸಿಟ್ಟು ಅಲ್ಲಿನ ಕೆಲವರಲ್ಲಿ ಮೂಡಿತು.

ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾದ ನಂತರ ಈ ಭಾವನೆ ಮತ್ತಷ್ಟು ಹೆಚ್ಚಾಯಿತು. ಅಮೆರಿಕದಲ್ಲಿನ ಗ್ರೀನ್ ಕಾರ್ಡ್ ಪಡೆದ ಭಾರತೀಯರೂ ಸೇರಿದಂತೆ ಹಲವು ವರ್ಷಗಳಿಂದ ಅಲ್ಲಿ ನೆಲಸಿರುವವರು, ಉದ್ಯೋಗ ಮಾಡುತ್ತಿರುವವರು, ಶಿಕ್ಷಣಕ್ಕೆಂದು ಹೋದವರ ಮೇಲೆ ಹಿಂಸೆ, ದಾಳಿಗಳು ಹೆಚ್ಚಾದವು. ಜನಾಂಗೀಯವಾದವೂ ಭಾರತೀಯರ ಮೇಲಿನ ದಾಳಿಗೆ ಒಂದು ಪ್ರಮುಖ ಕಾರಣವಾಗಿದೆ. ಕಪ್ಪು ವರ್ಣದವರು ಎನ್ನುವ ಕಾರಣಕ್ಕೆ ಕಚೇರಿ, ಮಾಲ್, ರಸ್ತೆ ಮುಂತಾದೆಡೆ ಭಾರತೀಯ ಸಂಜಾತರನ್ನು ಅವಮಾನ ಮಾಡಿದ, ಗುಂಡು ಹಾರಿಸಿ ಕೊಂದ ಘಟನೆಗಳು ಹಲವಿವೆ.

ಕೆನಡಾ

ಶಿಕ್ಷಣ, ಉದ್ಯೋಗ ಹೀಗೆ ವಿವಿಧ ಕಾರಣಕ್ಕೆ ಕೆನಡಾಕ್ಕೆ ಹೋದ ಭಾರತೀಯರ ಸಾವಿನ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಭಾರಿ ಹೆಚ್ಚಾಗಿವೆ. 2020 ಮತ್ತು 2025ರ ನಡುವೆ ಕೆನಡಾದಲ್ಲಿ ಭಾರತೀಯರ ಸಾವಿನ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೋತ್ತರದ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವರು ಬಿಡುಗಡೆ ಮಾಡಿರುವ ದತ್ತಾಂಶವು (2025ರ ಆ.7) ಹೇಳುತ್ತಿದೆ.

ಕೆನಡಾದಲ್ಲಿ 14 ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯರಿದ್ದು, ಅವರಲ್ಲಿ ಅರ್ಧದಷ್ಟು ಮಂದಿ ಸಿಖ್ಖರಾಗಿದ್ದಾರೆ. ಜನಸಂಖ್ಯೆಯ ಹೆಚ್ಚಳ, ಅದು ದೇಶದ ಮೇಲೆ ಹೇರುತ್ತಿರುವ ಒತ್ತಡದಂಥ ಕಾರಣಗಳಿಂದ ವಿದೇಶಗಳಿಂದ ಬರುವವರ ಮೇಲೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಅಸಮಾಧಾನ ಬೆಳೆಯುತ್ತಿದೆ. ಆದರೆ, ಭಾರತೀಯರನ್ನು ಕೆನಡಾದವರು ವಿಶೇಷವಾಗಿ ಗುರಿ ಮಾಡಲು ಕಾರಣವಾಗಿದ್ದು ಎರಡೂ ದೇಶಗಳ ನಡುವಿನ ರಾಜಕಾರಣ.

ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ಆಶ್ರಯ ಪಡೆದಿದ್ದು, ಸರ್ಕಾರ ಅವರಿಗೆ ಒತ್ತಾಸೆಯಾಗಿ ನಿಂತಿದೆ ಎಂದು ಭಾರತ ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ. ಖಾಲಿಸ್ತಾನಿ ಪ್ರತ್ಯೇಕತಾವಾದಿ ಮುಖಂಡ, ಭಾರತವು ಭಯೋತ್ಪಾದಕ ಎಂದು ಘೋಷಿಸಿದ್ದ ಹರ್ದೀಪ್ ಸಿಂಗ್ ನಿಜ್ಜರ್ 2023ರಲ್ಲಿ ಕೆನಡಾದಲ್ಲಿ ಕೊಲೆಯಾದ. ಆತನ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಪಾತ್ರ ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೆನಡಾ ಹೇಳಿತ್ತು. ಅದರ ನಂತರ ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು.

ಕೆನಡಾದಲ್ಲಿ ಪ್ರಸ್ತುತ 20 ಲಕ್ಷ ಮಂದಿ ಅನಧಿಕೃತವಾಗಿ ವಾಸಿಸುತ್ತಿದ್ದು, ಅದರಲ್ಲಿ ಅರ್ಧದಷ್ಟು ಮಂದಿ ಭಾರತೀಯರು ಎನ್ನಲಾಗುತ್ತಿದೆ. ಅಲ್ಲಿ ಭಾರತೀಯರ ಮೇಲೆ ದಾಳಿ, ಹಿಂಸೆ ನಡೆಯುತ್ತಿವೆ. 2025ರ ಡಿಸೆಂಬರ್ನಲ್ಲಿ ಒಂದೇ ವಾರದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳನ್ನು ಹತ್ಯೆ ಮಾಡಲಾಗಿತ್ತು. ಕಳೆದ ವಾರ ಕೆನಡಾದಲ್ಲಿ ಉದ್ಯೋಗಿಯಾಗಿದ್ದ ನೆಲಮಂಗಲದ ಚಂದನ್ ಕುಮಾರ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು. ಇಂಥ ಘಟನೆಗಳು ಹೆಚ್ಚುತ್ತಲೇ ಸಾಗುತ್ತಿದ್ದು, ಕಳವಳಕ್ಕೆ ಕಾರಣವಾಗಿವೆ.

ಆಸ್ಟ್ರೇಲಿಯಾ

ಭಾರತೀಯರ ಮೇಲಿನ ದಾಳಿಗೆ ಆಸ್ಟ್ರೇಲಿಯಾ ಕುಖ್ಯಾತಿ ಪಡೆದಿದೆ. ಭಾರತದ ವೃತ್ತಿಪರರು, ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಅಲ್ಲಿ ನೆಲಸಿದ್ದಾರೆ. ಅಲ್ಲಿನ ಜನರಲ್ಲಿ ಭಾರತ ವಿರೋಧಿ ಭಾವನೆ ಹೆಚ್ಚಿದ್ದು, ಆಗಾಗ ಭಾರತೀಯರನ್ನು ಗುರಿಯಾಗಿಸಿಕೊಂಡು ಜನಾಂಗೀಯ ನಿಂದನೆ ಮಾಡುವ ಪ್ರಕರಣ ವರದಿಯಾಗುತ್ತಿವೆ.

ನಾಲ್ಕು ದಿನಗಳ ಹಿಂದೆಯಷ್ಟೇ ಮೆಲ್ಬರ್ನ್ನಲ್ಲಿ ಭಾರತೀಯ ಕುಟುಂಬವೊಂದು ವಾಸವಿರುವ ಮನೆಯ ಹೊರಗಡೆ ‘ನಾಝಿ ಡೈ’ ‘ಗೋ ಬ್ಯಾಕ್ ಇಂಡಿಯಾ’ ಎಂದು ಬರೆದಿದ್ದ ಚೀಟಿಗಳನ್ನು ಅಂಟಿಸಿದ್ದು ವರದಿಯಾಗಿದೆ. ಭಾರತದಿಂದ ಹೋದ ವಿದ್ಯಾರ್ಥಿಗಳ ಮೇಲೆಯೂ ಅಲ್ಲಿ ದಾಳಿಗಳು ನಡೆಯುತ್ತಿರುತ್ತವೆ. 2018ರಿಂದ 2025ರ ನಡುವೆ ಹಿಂಸಾತ್ಮಕ ದಾಳಿಯಲ್ಲಿ ಮೂವರು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ.

ಕಳೆದ ವರ್ಷದ ಆಗಸ್ಟ್ 31ರಂದು ಆಸ್ಟ್ರೇಲಿಯಾದಲ್ಲಿ ವಲಸೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆ (ಮಾರ್ಚ್ ಫಾರ್ ಆಸ್ಟ್ರೇಲಿಯಾ) ನಡೆದಿತ್ತು. ಆ ಬಳಿಕ ಭಾರತೀಯರನ್ನು ಗುರಿಯಾಗಿಸಿಕೊಂಡು ಮಾಡಲಾಗುತ್ತಿರುವ ಜನಾಂಗೀಯ ನಿಂದನೆ ಹೆಚ್ಚಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಆ ಪ್ರತಿಭಟನೆಗೆ ಪೂರಕವಾಗಿ ಸಿದ್ಧಪಡಿಸಿದ್ದ ಭಿತ್ತಿಪತ್ರಗಳಲ್ಲಿ ಭಾರತದ ವಲಸಿಗರನ್ನು ಗುರಿಯಾಗಿಸಿಕೊಂಡ ಬರಹಗಳೂ ಇದ್ದವು ಎಂದು ವರದಿಯಾಗಿದೆ.

ಭಾರತೀಯರು ತಮ್ಮ ಉದ್ಯೋಗ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಅಲ್ಲಿಯವರಿಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅಭಿಪ್ರಾಯ ಪಡುವಂತಹ ಪೋಸ್ಟ್ಗಳು ಕಾಣಸಿಗುತ್ತವೆ. ಭಾರತೀಯರ ಸಂವಹನದ ಶೈಲಿ, ಭಾರತೀಯ ಸಂಸ್ಕೃತಿಯ ಬಗ್ಗೆ ಇರುವ ತಪ್ಪು ತಿಳಿವಳಿಕೆ ಕೂಡ ಜನಾಂಗೀಯ ನಿಂದನೆ, ದಾಳಿಗಳಿಗೆ ಕಾರಣವಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಮಾದಕ ದ್ರವ್ಯ ಸೇವಿಸಿದ, ಮದ್ಯ ಸೇವನೆ ಚಟ ಹೊಂದಿರುವ ಯುವಜನರು ವಿನಾ ಕಾರಣ ಭಾರತೀಯರು, ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿರುವ, ದರೋಡೆ ಮಾಡಿರುವ ಉದಾಹರಣೆಗಳೂ ಇವೆ.

ವಿದ್ಯಾರ್ಥಿಗಳ ಮೇಲೆ ದಾಳಿ

ಉನ್ನತ ಶಿಕ್ಷಣ ಹಾಗೂ ಉತ್ತಮ ಉದ್ಯೋಗ ಪಡೆಯುವ ಕನಸನ್ನು ಇಟ್ಟುಕೊಂಡು ಅಮೆರಿಕ, ಕೆನಡಾ, ಆಸ್ಟ್ರೇಲಿಯಾಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳು ದುಷ್ಕರ್ಮಿಗಳ ಹಿಂಸಾತ್ಮಕ ದಾಳಿಗೆ ಗುರಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ ವಿದೇಶಾಂಗ ಸಚಿವಾಲಯ ಲೋಕಸಭೆಗೆ ನೀಡಿರುವ ಮಾಹಿತಿ ಪ್ರಕಾರ, 2018ರಿಂದ 2025ರವರೆಗೆ ಒಂಬತ್ತು ರಾಷ್ಟ್ರಗಳಲ್ಲಿ 36 ಭಾರತೀಯ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ಕೆನಡಾದಲ್ಲೇ 17 ವಿದ್ಯಾರ್ಥಿಗಳು ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿದ್ದಾರೆ. ಅಮೆರಿಕದಲ್ಲಿ ಒಂಬತ್ತು ಮಂದಿ ದಾಳಿಯಲ್ಲಿ ದಾರುಣ ಸಾವು ಕಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮೂವರು ಬಲಿಯಾಗಿದ್ದಾರೆ.

ಆಧಾರ: ಸಂಸತ್ತಿನಲ್ಲಿ ಸರ್ಕಾರದ ಉತ್ತರಗಳು, ರಾಯಿಟರ್ಸ್, ಬಿಬಿಸಿ, ಎಬಿಸಿ, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.