ಆರ್.ಆರ್ ಸಂಖ್ಯೆ ಜೋಡಣೆ ಹೇಗೆ?
ಎಸ್ಕಾಂಗಳು ಪ್ರತಿ ವಿದ್ಯುತ್ ಸಂಪರ್ಕಕ್ಕೂ ಪ್ರತ್ಯೇಕ ಮೀಟರ್ ನೀಡಿರುತ್ತವೆ ಮತ್ತು ಆ ಮೀಟರ್‌ಗಳಿಗೆ ಪ್ರತ್ಯೇಕ ಆರ್.ಆರ್ ಸಂಖ್ಯೆ ಇರುತ್ತದೆ. ಒಬ್ಬ ಮೀಟರ್ ರೀಡರ್‌ನ ವ್ಯಾಪ್ತಿಯಲ್ಲಿ 3,000 ಮೀಟರ್‌ಗಳು ಇರುತ್ತವೆ. ಈ ಮೂರು ಸಾವಿರ ಮೀಟರ್‌ಗಳನ್ನು ತಲಾ 150ರಂತೆ 20 ಬ್ಲಾಕ್‌ಗಳಾಗಿ ವಿಂಗಡಿಸಲಾಗುತ್ತದೆ. ಮೀಟರ್ ರೀಡರ್ ಜತೆಗೆ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಇತರ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಆರ್.ಆರ್ ಸಂಖ್ಯೆಯೊಂದಿಗೆ ಜಿಯೋಟ್ಯಾಗಿಂಗ್ ಮಾಡುತ್ತಾರೆ. ಪ್ರತಿ ಮನೆಗೆ ಯುಎಚ್‌ಐಡಿ ಸೃಜಿಸುವವರೆಗೂ ಸಮೀಕ್ಷಾ ಸಿಬ್ಬಂದಿಗೆ ನೆರವು ನೀಡುವ ಹೊಣೆಗಾರಿಕೆ ಮೀಟರ್ ರೀಡರ್‌ಗಳದ್ದು. ಮನೆಗಳಲ್ಲಿ ಯಾರೂ ವಾಸವಿಲ್ಲದೇ ಇದ್ದರೆ ಅಥವಾ ಮನೆ ಖಾಲಿ ಇದ್ದರೆ, ಅವುಗಳಿಗೂ ಯುಎಚ್‌ಐಡಿ ಸೃಜಿಸಲಾಗುತ್ತದೆ.