ರಾಜ್ಯ ಶಿಕ್ಷಣ ನೀತಿ ಆಯೋಗದ ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಉಪ ಸಮಿತಿ ರಚಿಸಲಿದ್ದಾರೆ. ವರದಿಯನ್ನು ಸಮಿತಿ ಕೂಲಂಕಷವಾಗಿ ಪರಿಶೀಲಿಸಿ, ಶಿಫಾರಸು ಮಾಡಲಿದೆ. ನಂತರ 2026–27ನೇ ಸಾಲಿನಿಂದ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು
-ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ
ಎಸ್‌ಇಪಿ ಆಯೋಗದ ಮಧ್ಯಂತರ ವರದಿ ಶಿಫಾರಸಿನಂತೆ 2024–25ನೇ ಸಾಲಿನಿಂದಲೇ ಉನ್ನತ ಶಿಕ್ಷಣದಲ್ಲಿ ರಾಜ್ಯ ಶಿಕ್ಷಣ ನೀತಿ ಅಳವಡಿಸಿಕೊಂದ್ದೇವೆ. ನಾಲ್ಕು ವರ್ಷಗಳ ಪದವಿ, ಬಹು ಪ್ರವೇಶ ನಿರ್ಗಮನ, ಇತರೆ ವಿಭಾಗಗಳ ವಿಷಯ ಆಯ್ಕೆ ರದ್ದು ಮಾಡಿದ್ದೇವೆ. ಅಂತಿಮ ವರದಿ ಆಧರಿಸಿ, ಅಳವಡಿಸಿಕೊಳ್ಳಬೇಕಿರುವುದು ಕೆಲ ಅಂಶಗಳಷ್ಟೇ ಬಾಕಿ ಇವೆ. ಸಂಪುಟದ ಅನುಮೋದನೆ ಪಡೆದ ನಂತರ ಸಾರ್ವಜನಿಕ ಚರ್ಚೆಗೆ ಬಿಡಲಾಗುವುದು.
-ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ
ಪ್ರೊ.ಸುಖದೇವ್ ಥೋರಟ್ ನೇತೃತ್ವದ ಆಯೋಗ ಆಗಸ್ಟ್ 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದೆ. ಸಚಿವರಾದ ಮಧು ಬಂಗಾರಪ್ಪ ಸುಧಾಕರ್ ಇದ್ದರು