ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ |ರಾಜಕಾರಣ: ಕುಟುಂಬವೇ ‘ವ್ಯಾಕರಣ’

Published 5 ಏಪ್ರಿಲ್ 2024, 23:43 IST
Last Updated 5 ಏಪ್ರಿಲ್ 2024, 23:43 IST
ಅಕ್ಷರ ಗಾತ್ರ

ದೇಶವನ್ನು ಹಲವು ದಶಕ ಮುನ್ನಡೆಸಿದ್ದ ಕಾಂಗ್ರೆಸ್‌ ವಿರುದ್ಧ ಪ್ರತಿಪಕ್ಷಗಳು ‘ಕುಟುಂಬ ರಾಜಕಾರಣ’ದ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸುತ್ತಾ ಬಂದಿವೆ. ವಿರೋಧದ ಧ್ವನಿಗೆ ಹಲವು ಚುನಾವಣೆಗಳಲ್ಲಿ ‘ಮತ’ ಫಸಲೂ ಸಿಕ್ಕಿದ್ದಿದೆ. ‘ಕುಟುಂಬ ರಾಜಕಾರಣ’ ಎನ್ನುವುದು ಎಲ್ಲ ಪಕ್ಷಗಳಿಗೂ ಅಂಟಿಕೊಂಡಿದೆ. ಎಲ್ಲ ರಾಜಕೀಯ ಪಕ್ಷಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಚಿವರು, ಶಾಸಕರು, ಮಾಜಿ ಜನಪ್ರತಿನಿಧಿಗಳ ಕುಟುಂಬದ ಸದಸ್ಯರಿಗೇ ಮಣೆ ಹಾಕಿವೆ. 

ಪ್ರಧಾನಿ ನರೇಂದ್ರ ಮೋದಿಯವರಂತೂ ಕುಟುಂಬ ರಾಜಕಾರಣದ ಕಡು ವಿರೋಧಿ. ವಂಶವಾದ, ಪರಿವಾರ ರಾಜಕಾರಣದ ಬಗ್ಗೆ ಕಿಡಿ ಕಾರುತ್ತಲೇ ಬಂದಿದ್ದಾರೆ. ಕರ್ನಾಟಕದಲ್ಲಿ ಈ ಜಾಢ್ಯ ‘ಕಮಲ’ವನ್ನೂ ಆವರಿಸಿದೆ. ಆದರೆ ಅದರ ಬಗ್ಗೆ ಮೋದಿಯವರು  ಈವರೆಗೆ ಮಾತನಾಡಿದ್ದಿಲ್ಲ. 

ದೇವೇಗೌಡರ ಕುಟುಂಬ ರಾಜಕಾರಣವನ್ನೂ ಮೋದಿ ಮತ್ತು ಬಿಜೆಪಿಯವರು ವಿರೋಧಿಸುತ್ತಲೇ ಬಂದಿದ್ದರು. ಈ ಬಾರಿ, ಅವರ ಜತೆಗೆ ಮೈತ್ರಿ ಕುದುರಿಸಿದ್ದಾರೆ. ಬಿಜೆಪಿ ಜತೆಗಿನ ಮೈತ್ರಿಯ ಫಲವಾಗಿ ದೊರೆತ ಮೂರು ಕ್ಷೇತ್ರಗಳ ಪೈಕಿ ಜೆಡಿಎಸ್‌ ಎರಡರಲ್ಲಿ ಒಂದೇ ಕುಟುಂಬದ ಇಬ್ಬರನ್ನು ಕಣಕ್ಕೆ ಇಳಿಸಿದೆ. ದೇವೇಗೌಡರ ಅಳಿಯ (ಪುತ್ರಿಯ ಪತಿ) ಡಾ.ಸಿ.ಎನ್‌. ಮಂಜುನಾಥ್‌ ಬಿಜೆಪಿ ಟಿಕೆಟ್‌ ಪಡೆದು ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್‌ ಈ ಬಾರಿಯೂ ಬೆಂಗಳೂರು ಗ್ರಾಮಾಂತರದಿಂದ ಕಣಕ್ಕೆ ಇಳಿದಿದ್ದಾರೆ. ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಪರಸ್ಪರ ಸೆಣಸುತ್ತಿದ್ದಾರೆ. ಹಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಪುತ್ರ, ಮಾಜಿ ಮುಖ್ಯಮಂತ್ರಿ ಕಣದಲ್ಲಿ ಇದ್ದಾರೆ. ಕಲಬುರಗಿ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯನನ್ನು ಕಣಕ್ಕೆ ಇಳಿಸಲಾಗಿದೆ. ಸಿದ್ದರಾಮಯ್ಯ ಸಂಪುಟದ ಆರು ಸಚಿವರ ಮಗ–ಮಗಳಿಗೆ, ಒಬ್ಬ ಸಚಿವರ ಪತ್ನಿಗೆ ಟಿಕೆಟ್‌ ನೀಡಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT