ಜಗತ್ತಿನಲ್ಲಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗಿದ್ದು, ಉಳ್ಳವರು ಮತ್ತು ಇಲ್ಲದವರ ನಡುವೆ ಬೃಹತ್ ಕಂದಕ ಸೃಷ್ಟಿಯಾಗಿದೆ; ಶತಕೋಟ್ಯಧಿಪತಿಗಳು ರಾಜಕೀಯ ಪ್ರಭಾವವನ್ನೂ ಬೆಳೆಸಿಕೊಂಡಿದ್ದಾರೆ ಎಂದು ಆಕ್ಸ್ಫಾಮ್ ಸಂಸ್ಥೆಯ ಅಸಮಾನತೆ ಕುರಿತ ವರದಿ ತಿಳಿಸಿದೆ.

ವರದಿ ಪ್ರಕಾರ, 2020ರಿಂದ ಈಚೆಗೆ ಜಗತ್ತಿನ 500 ಕೋಟಿ ಮಂದಿ ಮತ್ತಷ್ಟು ಬಡವರಾಗಿದ್ದಾರೆ. ಇದೇ ಹೊತ್ತಿಗೆ ವಿಶ್ವದ ಐವರು ಅತಿ ದೊಡ್ಡ ಶ್ರೀಮಂತರ ಸಂಪತ್ತು ದುಪ್ಪಟ್ಟಾಗಿದ್ದು, ಅವರ ಸಂಪತ್ತು ಇಂದು
80 ಸಾವಿರ ಕೋಟಿ ಡಾಲರ್ಗಿಂತಲೂ (ಸುಮಾರು ₹68 ಲಕ್ಷ ಕೋಟಿ) ಹೆಚ್ಚಿದೆ. ಜಗತ್ತಿನ ಲಕ್ಷಾಂತರ ಮಂದಿ ಕಡುಬಡತನದಲ್ಲಿ ಬದುಕುತ್ತಿದ್ದು, ಕುಡಿಯುವ ನೀರು, ಆರೋಗ್ಯ ಸೇವೆ, ವಸತಿ, ಮಕ್ಕಳಿಗೆ ಶಿಕ್ಷಣದಂಥ ಮೂಲಭೂತ ಅಗತ್ಯಗಳಿಂದ ವಂಚಿತರಾಗಿದ್ದರೆ, ಕಳೆದ ಮೂರು ವರ್ಷಗಳಲ್ಲಿ ಶತಕೋಟ್ಯಧಿಪತಿಗಳ ಸಂಪತ್ತು 3 ಲಕ್ಷ ಕೋಟಿ ಡಾಲರ್ನಷ್ಟು (ಸುಮಾರು ₹259 ಲಕ್ಷ ಕೋಟಿ) ಹೆಚ್ಚಾಗಿದೆ. ಜಗತ್ತಿನ ಶೇ 75ರಷ್ಟು ಆನ್ಲೈನ್ ಜಾಹೀರಾತುಗಳು ಮೆಟಾ, ಆಲ್ಫಬೆಟ್ ಮತ್ತು ಅಮೆಜಾನ್ ಪಾಲಾಗುತ್ತಿದ್ದು, ಈ ಮೂರೂ ತಂತ್ರಜ್ಞಾನ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿವೆ.

ಎರಡು ದಶಕಗಳಲ್ಲಿ (1995–2015) 60 ಔಷಧ ಕಂಪನಿಗಳು 10 ಕಂಪನಿಗಳಲ್ಲಿ ವಿಲೀನವಾಗಿವೆ. ಭಾರತದಲ್ಲಿಯೂ ಐದು ಕಂಪನಿಗಳು ಉದ್ಯಮ ರಂಗದಲ್ಲಿ ಏಕಸ್ವಾಮ್ಯ ಸಾಧಿಸಿವೆ ಎಂದು ವರದಿ ತಿಳಿಸಿದೆ.

ಖಾಸಗೀಕರಣ: ಜಗತ್ತಿನಾದ್ಯಂತ ಶಿಕ್ಷಣ, ಆರೋಗ್ಯ ಸೇವೆ ಮತ್ತು ನೀರು ಪೂರೈಕೆಯಂಥ ಕ್ಷೇತ್ರಗಳಲ್ಲೂ ಖಾಸಗಿಯವರು ಅಡಿಯಿಟ್ಟಿದ್ದು, ಈ ಸೌಲಭ್ಯಗಳು ಜನಸಾಮಾನ್ಯರಿಗೆ ಲಭ್ಯವಾಗದಂತಾಗಿವೆ. ಜನರ ಮೂಲಭೂತ ಅಗತ್ಯಗಳನ್ನೂ ಖಾಸಗಿ ಕಂಪನಿಗಳು ವ್ಯಾಪಾರದ ಸರಕಾಗಿಸಿಕೊಂಡು, ದೊಡ್ಡ ಪ್ರಮಾಣದಲ್ಲಿ ಲಾಭ ಮಾಡುತ್ತಿವೆ. ವಿಶ್ವ ಬ್ಯಾಂಕ್ನಂಥ ಹಣಕಾಸು ಸಂಸ್ಥೆಗಳೂ ಈ ಪ್ರವೃತ್ತಿಯನ್ನು ಬೆಂಬಲಿಸುತ್ತಿವೆ. ಅಗತ್ಯ ಸೇವೆಗಳನ್ನು ಒದಗಿಸುವ ಕೆಲಸವನ್ನು ಖಾಸಗಿಯವರಿಗೆ ಬಿಟ್ಟುಕೊಡುತ್ತಿರುವುದು, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರುತ್ತಿರುವುದು ಖಾಸಗಿ ಬಂಡವಾಳಗಾರರ ಬೆಳವಣಿಗೆಗೆ ಕಾರಣವಾಗುತ್ತಿದೆ ಎಂದು ವರದಿ ಹೇಳಿದೆ.

ಜಾಗತಿಕ ಆಸ್ಪತ್ರೆ ಸೇವೆಗಳ ವಲಯವು 2030ರ ಹೊತ್ತಿಗೆ 19 ಲಕ್ಷ ಕೋಟಿ ಡಾಲರ್ (ಸುಮಾರು ₹1,640 ಲಕ್ಷ ಕೋಟಿ) ಮೌಲ್ಯದ ಉದ್ದಿಮೆಯಾಗಲಿದೆ. ಹಣ ಖರ್ಚು ಮಾಡಬಲ್ಲವರಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ ಸಿಗುತ್ತಿದೆ. ಹಣವಿಲ್ಲದಿರುವವರಿಗೆ ಇವೆರಡೂ ಎಟುಕದಂತಾಗಿವೆ. ಜಾತಿ, ಲಿಂಗ, ವರ್ಣದ ನೆಲೆಯಲ್ಲೂ ಅಸಮಾನತೆ ಉಂಟಾಗುತ್ತಿದೆ. ಉದಾಹರಣೆಗೆ, ಭಾರತದಲ್ಲಿ ಏರುತ್ತಿರುವ ಆರೋಗ್ಯ ಸೇವೆಗಳ ವೆಚ್ಚವನ್ನು ಭರಿಸಲಾಗದೇ ದಲಿತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳಿಂದಲೂ ದೂರ ಉಳಿದಿದ್ದಾರೆ.

ಸಾರ್ವಜನಿಕರ ಬೃಹತ್ ಮೊತ್ತದ ಹಣಕ್ಕೆ ಅಪಾಯ ಎದುರಾಗಿದೆ. ನೀತಿ ನಿರೂಪಕರು ತಮ್ಮ ಉದ್ಯಮಿ ಸ್ನೇಹಿತರು ಮತ್ತು ಇತರರ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಭ್ರಷ್ಟಾಚಾರ ಹೆಚ್ಚಾಗಿದ್ದು, ಸರ್ಕಾರಗಳ ಆಡಳಿತದಲ್ಲಿ ಉದ್ಯಮಿಗಳ ಪಾತ್ರವೂ ಹೆಚ್ಚಾಗುತ್ತಿದೆ. ಸರ್ಕಾರಗಳಿಗೆ ಸಾರ್ವಜನಿಕ ಹಿತಾಸಕ್ತಿಗಳಿಗಿಂತ ಕಾರ್ಪೊರೇಟ್ ಹಿತಾಸಕ್ತಿಗಳು ಪ್ರಮುಖ ಆದ್ಯತೆಯಾಗಿ ಪರಿಣಮಿಸಿವೆ. ಈ ರೀತಿಯಾಗಿ ಖಾಸಗೀಕರಣವು ಕ್ರೋನಿಯಿಸಂ (ತನ್ನ ಅಧಿಕಾರ ಸ್ಥಾನದ ಮೂಲಕ ಉದ್ಯಮರಂಗದ ಮಿತ್ರರಿಗೆ ನೆರವಾಗುವುದು) ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಉದ್ಯಮಿಗಳು ಸಾರ್ವಜನಿಕ ನೀತಿಗಳನ್ನು ಪ್ರಭಾವಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಸಾರ್ವಜನಿಕರ ಹೆಸರಿನಲ್ಲಿ ಖಾಸಗಿ ಬಂಡವಾಳಗಾರರು ಹೆಚ್ಚು ಹೆಚ್ಚು ಸಂಪತ್ತು ಗಳಿಸುತ್ತಿದ್ದಾರೆ.

ಜಗತ್ತಿನ ದಕ್ಷಿಣದ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಅನೇಕರು ಖಾಸಗಿ ಆಸ್ಪತ್ರೆಗಳಿಂದ ದಿವಾಳಿಯಾಗಿದ್ದಾರೆ ಎಂದು 2023ರ ಆಕ್ಸ್ಫಾಮ್ ಸಂಶೋಧನಾ ವರದಿ ಹೇಳಿತ್ತು. ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತಿತರ ಶ್ರೀಮಂತ ರಾಷ್ಟ್ರಗಳು ಮತ್ತು ವಿಶ್ವಬ್ಯಾಂಕ್ನಿಂದ ನೆರವು ಪಡೆದಿರುವ ಇವುಗಳನ್ನು ಆರೋಗ್ಯ ಸೇವೆಗಳ ಲಭ್ಯತೆಯನ್ನು ಖಾತರಿಪಡಿಸುವ ಸಲುವಾಗಿ ಸ್ಥಾಪಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಭಾರತವೂ ಸೇರಿದಂತೆ ಕೆನ್ಯಾ, ನೈಜೀರಿಯಾ, ಉಗಾಂಡ ಮುಂತಾದ ದೇಶಗಳಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಬಡತನಕ್ಕೆ ದೂಡಿವೆ.

ದುಬಾರಿ ವೆಚ್ಚ ಪಾವತಿಸಲಾಗದ ರೋಗಿಗಳನ್ನು ಬಂಧನದಲ್ಲಿಡುವುದು, ಬೆದರಿಸುವುದು, ತುರ್ತು ಸಂದರ್ಭಗಳಲ್ಲೂ ಚಿಕಿತ್ಸೆ ನಿರಾಕರಿಸುವುದು, ಮಾನವ ಹಕ್ಕುಗಳ ಉಲ್ಲಂಘನೆ, ಅಂಗಾಂಗ ಕಳ್ಳಸಾಗಣೆ, ಅನಗತ್ಯವಾಗಿ ದುಬಾರಿ ಚಿಕಿತ್ಸಾ ವಿಧಾನಗಳ ಮೊರೆಹೋಗುವಂತೆ ಒತ್ತಾಯಿಸುವುದು ಸೇರಿದಂತೆ ಅನೇಕ ರೀತಿಯಲ್ಲಿ ರೋಗಿಗಳನ್ನು ಆಸ್ಪತ್ರೆಗಳು ಶೋಷಿಸುತ್ತಿವೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಸದ್ಯ ಆರೋಗ್ಯ ಸೇವೆಗಳ ಕ್ಷೇತ್ರವು 23,600 ಕೋಟಿ ಡಾಲರ್ ಮೌಲ್ಯದ (ಸುಮಾರು ₹20 ಲಕ್ಷ ಕೋಟಿ) ಉದ್ಯಮವಾಗಿದ್ದು, ತ್ವರಿತವಾಗಿ ಬೆಳೆಯುತ್ತಿದೆ. ವಿಶ್ವಬ್ಯಾಂಕ್ನ ಅಂಗಸಂಸ್ಥೆ ಅಂತರರಾಷ್ಟ್ರೀಯ ಹಣಕಾಸು ನಿಗಮ (ಐಎಫ್ಸಿ) ನೇರವಾಗಿ ದೇಶದ ಪ್ರಮುಖ ಕಾರ್ಪೊರೇಟ್ ಆಸ್ಪತ್ರೆಗಳ ಸಮೂಹದಲ್ಲಿ ಬಂಡವಾಳ ಹೂಡಿಕೆ ಮಾಡಿದೆ. ಆದರೂ, ಐಎಫ್ಸಿಯು 25 ವರ್ಷಗಳಿಂದ ತನ್ನ ಆರೋಗ್ಯ ಯೋಜನೆಗಳನ್ನು ಒಮ್ಮೆಯೂ ಪರಾಮರ್ಶೆ ಮಾಡಿಲ್ಲ. ಸೇವೆಗಳಿಗೆ ಅತಿಹೆಚ್ಚು ದರ ನಿಗದಿಪಡಿಸಿದ್ದು, ರೋಗಿಗಳಿಗೆ ದುಬಾರಿ ಶುಲ್ಕ ವಿಧಿಸಿದ್ದು, ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ನಿರಾಕರಿಸಿದಂಥ ಆರೋಪಗಳು ಆರೋಗ್ಯ ಸೇವೆಗಳ ನಿಯಂತ್ರಣ ಸಂಸ್ಥೆಗಳಲ್ಲಿ ಹಲವು ಬಾರಿ ಸಾಬೀತಾಗಿವೆ. ಇವು ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರದಿಂದ ಉಚಿತ ಭೂಮಿ ಪಡೆದಿವೆ. ಮುಖ್ಯ ವಿಚಾರವೇನೆಂದರೆ, ಐಎಫ್ಸಿ ಧನಸಹಾಯ ಪಡೆದಿರುವ 144 ಆಸ್ಪತ್ರೆಗಳ ಪೈಕಿ ಕೇವಲ ಒಂದು ಆಸ್ಪತ್ರೆ ಗ್ರಾಮೀಣ ಪ್ರದೇಶದಲ್ಲಿದೆ.

ಅಸಮಾನತೆ ಪೋಷಿಸುತ್ತಿರುವ ಕಾರ್ಪೊರೇಟ್ ಶಕ್ತಿಗಳು

ಜಾಗತಿಕವಾಗಿ ಏಕಸ್ವಾಮ್ಯ ಹೊಂದಿರುವ ಕಾರ್ಪೊರೇಟ್ ಶಕ್ತಿಗಳು ಆರ್ಥಿಕ ಅಸಮಾನತೆಗೆ ನೀರುಣಿಸುತ್ತಿವೆ ಎಂದು ವರದಿ ಹೇಳಿದೆ. ಅದರ ಪ್ರಕಾರ, ಕಾರ್ಪೊರೇಟ್ ಕಂಪನಿಗಳು ನಾಲ್ಕು ರೀತಿಯಲ್ಲಿ ಅಸಮಾನತೆಯನ್ನು ಪೋಷಿಸುತ್ತಿವೆ...

1. ಕಾರ್ಮಿಕರಿಗಿಲ್ಲ ಪ್ರತಿಫಲ; ಶ್ರೀಮಂತರಿಗೇ ಎಲ್ಲ

ಕಾರ್ಪೊರೇಟ್ ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳು/ಕಾರ್ಮಿಕರಿಗೆ ನಿಯಮಾನುಸಾರ ವೇತನ ನೀಡುವುದಿಲ್ಲ. ಆದರೆ, ಕಂಪನಿಯ ಲಾಭಾಂಶವನ್ನು ಶ್ರೀಮಂತ ಷೇರುದಾರರಿಗೆ ನೀಡುತ್ತವೆ. ಜಾಗತಿಕವಾಗಿ 79.1 ಕೋಟಿ ಕಾರ್ಮಿಕರ ವೇತನವು ಹಣದುಬ್ಬರಕ್ಕೆ ಅನುಗುಣವಾಗಿ ಇಲ್ಲ. ಮಹಿಳೆಯರಿಗೆ ಅತಿ ಕಡಿಮೆ ವೇತನ ನೀಡಲಾಗುತ್ತಿದೆ ಮತ್ತು ಅವರಿಗೆ ಉದ್ಯೋಗ ಭದ್ರತೆಯೂ ಇಲ್ಲ. ಇದರ ಜೊತೆಗೆ, ಕಾರ್ಮಿಕರ ಪರವಾಗಿರುವ ಕಾರ್ಮಿಕ ಕಾನೂನು, ನೀತಿಗಳನ್ನು ವಿರೋಧಿಸಲು ಕಾರ್ಪೊರೇಟ್ ಕಂಪನಿಗಳು ತಮ್ಮ ಪ್ರಭಾವವನ್ನು ಬಳಸುತ್ತಿವೆ ಎಂದು ವರದಿ ಹೇಳಿದೆ.

2. ತೆರಿಗೆಯಿಂದ ತಪ್ಪಿಸಿಕೊಳ್ಳುವುದು

ಕಾರ್ಪೊರೇಟ್ ಸಂಸ್ಥೆಗಳು ಮತ್ತು ಅದರ ಸಿರಿವಂತ ಮಾಲೀಕರು ಆಯಾ ದೇಶದ ತೆರಿಗೆ ಪದ್ಧತಿಯ ವಿರುದ್ಧ ಅತ್ಯಂತ ಪರಿಣಾಮಕಾರಿಯಾದ ಹೋರಾಟವನ್ನೇ ನಡೆಸುತ್ತಾರೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ (ಒಇಸಿಡಿ) ಸದಸ್ಯ ರಾಷ್ಟ್ರಗಳಲ್ಲಿ ಶಾಸನಬದ್ಧ ಕಾರ್ಪೊರೇಟ್ ತೆರಿಗೆ ದರವು 1980ರಿಂದ ಈಚೆಗೆ ಅರ್ಧಕ್ಕಿಂತಲೂ ಹೆಚ್ಚು ಕಡಿತವಾಗಿದೆ. ಕಾರ್ಪೊರೇಟ್ ಕಂಪನಿಗಳ ಮೇಲೆ ವಿಧಿಸಲಾಗುತ್ತಿರುವ ತೆರಿಗೆಯನ್ನು ಕಡಿಮೆ ಮಾಡುವುದರಿಂದಲೂ ಆರ್ಥಿಕ ಅಸಮಾನತೆ ಉಂಟಾಗುತ್ತದೆ. ಕಂಪನಿಗಳು ಮತ್ತು ಶ್ರೀಮಂತರು ಕಡಿಮೆ ತೆರಿಗೆ ಪಾವತಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಆದಾಯ ಸಂಗ್ರಹವಾಗುವುದಿಲ್ಲ ಎಂದು ವರದಿ ಹೇಳಿದೆ.

3. ಸರ್ಕಾರಿ ಸೇವೆ ಖಾಸಗೀಕರಣಗೊಳಿಸುವುದು

ಜಗತ್ತಿನಾದ್ಯಂತ ಬಹುತೇಕ ರಾಷ್ಟ್ರಗಳಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಪೂರೈಕೆ ಸೇರಿದಂತೆ ನಾಗರಿಕರಿಗೆ ಮೂಲಭೂತವಾಗಿ ಬೇಕಾದ ಹಲವು ಪ್ರಮುಖ ಸೇವೆಗಳನ್ನು ಸರ್ಕಾರಗಳೇ ಒದಗಿಸುತ್ತಿವೆ. ಕಾರ್ಪೊರೇಟ್ ಕಂಪನಿಗಳು ತಮ್ಮ ಪ್ರಭಾವ ಬಳಸಿ, ಈ ಸೇವೆಗಳನ್ನು ಖಾಸಗೀಕರಣಗೊಳಿಸಲು ನಿರಂತರವಾಗಿ ಯತ್ನಿಸುತ್ತಿವೆ. ಕೆಲವು ಕಂಪನಿಗಳು ಈಗಾಗಲೇ ಕೆಲವು ಸಾರ್ವಜನಿಕ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವ ಮೂಲಕ ಭಾರಿ ಪ್ರಮಾಣದಲ್ಲಿ ಲಾಭಗಳಿಸುತ್ತಿವೆ. ಜನರಿಗೆ ಅತ್ಯಂತ ಗುಣಮಟ್ಟದ ಸೇವೆ ಒದಗಿಸಿ ಅಸಮಾನತೆಯನ್ನು ಕಡಿಮೆ ಮಾಡುವ ಸರ್ಕಾರದ ಪ್ರಯತ್ನಕ್ಕೆ ಇದು ಹಿನ್ನಡೆ ಉಂಟು ಮಾಡುತ್ತದೆ. ಸೇವೆಗಳು ಅಥವಾ ಸರ್ಕಾರಿ ಸಂಸ್ಥೆಗಳ ಖಾಸಗೀಕರಣವು ಸಾರ್ವಜನಿಕ ಸೇವೆಗಳಲ್ಲೂ ಅಸಮಾನತೆಯನ್ನು ಸೃಷ್ಟಿಸುತ್ತವೆ. ಶ್ರೀಮಂತರು ಮತ್ತು ಬಡವರ ನಡುವಿನ
ಕಂದಕವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಯಾರಿಗೆ ಹಣ ಪಾವತಿಸಲು ಸಾಧ್ಯವಿದೆಯೋ ಅವರಿಗೆ ಮಾತ್ರ ಅತ್ಯುತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಪಡೆಯುವುದಕ್ಕೆ ಸಾಧ್ಯವಿರುತ್ತದೆ ಎಂದು ವರದಿ ವಿವರಿಸಿದೆ.

4. ಜಾಗತಿಕ ಹವಾಮಾನ ಬದಲಾವಣೆಗೆ ಕಾರಣ

ಕಾರ್ಪೊರೇಟ್ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆಗೂ ಕಾರಣವಾಗುತ್ತಿವೆ. ಇದು ಕೂಡ ಲಿಂಗ, ವರ್ಗ, ವರ್ಣದ ಅಸಮಾನತೆಗೆ ಕಾರಣವಾಗುತ್ತಿವೆ. ಜಗತ್ತಿನ ಹಲವು ಶತಕೋಟ್ಯಧಿಪತಿಗಳು ಹಸಿರು ಮನೆ ಅನಿಲಗಳನ್ನು ಹೊರಸೂಸುವ ಉದ್ದಿಮೆಗಳನ್ನು ಹೊಂದಿದ್ದಾರೆ. ಈ ಉದ್ಯಮಗಳಿಂದ ದೊಡ್ಡ ಪ್ರಮಾಣದಲ್ಲಿ ಲಾಭಗಳಿಸುವ ಅವರು, ಅದರಿಂದಾಗುವ ಹವಾಮಾನ ಬದಲಾವಣೆಯನ್ನು ನಿರಾಕರಿಸುತ್ತಾರೆ. ಅಲ್ಲದೇ, ಈ ಕೈಗಾರಿಕೆಗಳನ್ನು ವಿರೋಧಿಸುವರನ್ನು ಬಗ್ಗುಬಡಿಯುತ್ತಾರೆ ಎಂದು ವರದಿ ತಿಳಿಸಿದೆ.

ಆರ್ಥಿಕ ಸಮಾನತೆ ತರಲು ಏನು ಮಾಡಬೇಕು?

ಆರ್ಥಿಕ ಅಸಮಾನತೆಗೆ ಕಡಿವಾಣ ಹಾಕುವುದಕ್ಕಾಗಿ ಕಾರ್ಪೊರೇಟ್ ಪ್ರಭಾವವನ್ನು ತಗ್ಗಿಸಬೇಕು. ಇದಕ್ಕಾಗಿ ಸರ್ಕಾರಗಳು ಹೆಚ್ಚು ಬಲಿಷ್ಠವಾಗಬೇಕು ಎಂಬುದೂ ಸೇರಿದಂತೆ ಹಲವು ಸಲಹೆಗಳನ್ನು ಆಕ್ಸ್ಫಾಮ್ ನೀಡಿದೆ.

* ಜನರ ಒಳಿತಿಗಾಗಿ ದೇಶದ ಅರ್ಥವ್ಯವಸ್ಥೆಗೆ ಹೊಸ ರೂಪ ನೀಡಲು ಸರ್ಕಾರಗಳು ಕ್ರಮ ವಹಿಸಬೇಕು

* ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ ಸೇರಿದಂತೆ ಸಾರ್ವಜನಿಕ ಸೇವೆಗಳಿಗೆ ಹೆಚ್ಚು ಒತ್ತು ನೀಡಬೇಕು. ಸಾರ್ವಜನಿಕ ಸಾರಿಗೆ, ಇಂಧನ, ವಸತಿ ಸೇರಿದಂತೆ ಇತರ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೆಚ್ಚು ಬಂಡವಾಳ ಹೂಡಬೇಕು

* ಖಾಸಗಿ ಕಂಪನಿಗಳು ಜನರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವುದಕ್ಕಾಗಿ ನಿಯಂತ್ರಣ ನಿಯಮಗಳನ್ನು ಜಾರಿಗೊಳಿಸಬೇಕು

* ಕಾರ್ಪೊರೇಟ್ ಸಂಸ್ಥೆಗಳು ಕಾರ್ಮಿಕರಿಗೆ ಸರಿಯಾಗಿ ವೇತನ ನೀಡುವಂತೆ, ಲಿಂಗ ತಾರತಮ್ಯ ಹೋಗಲಾಡಿಸುವಂತೆ ನೋಡಿಕೊಳ್ಳಬೇಕು. ಕಾರ್ಮಿಕ ಸಂಘಟನೆಗಳಿಗೆ ಪ್ರೋತ್ಸಾಹ ನೀಡಬೇಕು

* ಶ್ರೀಮಂತರ ಮತ್ತು ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಬೇಕು

ಆಧಾರ: ಆಕ್ಸ್ಫಾಮ್ನ ‘ಇನ್ಇಕ್ವಾಲಿಟಿ ಐಎನ್ಸಿ’ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.