ನಿರಾಸೆಯ ಒಡಲಾಳದಿಂದ ಉಕ್ಕಿಬರುವ ಭಾವಗಳೇ ಬಂಡವಾಳ! ಇಂಥದೊಂದು ಸಾಧ್ಯತೆಯ ಬಗ್ಗೆ ಯೋಚನೆ ಮಾಡಿದಾಗ ಅಚ್ಚರಿ. ಕಣ್ಣೀರನ್ನೂ ಓಟ್ ಬ್ಯಾಂಕ್ ಮಾಡಿಕೊಳ್ಳುತ್ತಾರೆ ಎಂದು ರಾಜಕೀಯ ಪಕ್ಷಗಳ ಕಡೆಗೆ ಬೆರಳು ತೋರಿಸಲಾಗುತಿತ್ತು. ಆದರೆ ಸೋಲು, ನಿರಾಸೆ, ಅನಾರೋಗ್ಯ ಎನ್ನುವುದು ಕ್ರಿಕೆಟ್ ಬಿಸಿಯಲ್ಲಿ ಬೇಳೆ ಬೇಯಿಸಿಕೊಳ್ಳುವವರಿಗೂ ಬಂಡವಾಳ ಆಗುತ್ತಿದೆ. ಒಳ್ಳೆಯದು-ಕೆಟ್ಟದ್ದು ಎನ್ನುವ ಚೌಕಟ್ಟು ಕಟ್ಟಿಕೊಳ್ಳದೆಯೇ ಕ್ರಿಕೆಟ್ ಹಾಗೂ ಕ್ರಿಕೆಟಿಗರನ್ನು ಪ್ರಚಾರದ ಕಟ್ಟೆಯ ಮೇಲೆ ನಿಲ್ಲಿಸಿದ್ದು ವಿಶೇಷ.

ಕ್ರಿಕೆಟ್ ಹಾಗೂ ಕ್ರಿಕೆಟಿಗರೆಂದರೆ ಪ್ರಚಾರಕ್ಕೆ ಸುಲಭ ಮಾರ್ಗ. ಈ ಮಾತನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಪ್ರದರ್ಶನ ಮಟ್ಟದ ಉನ್ನತಿಯಲ್ಲಿ ಇರುವ ಆಟಗಾರರು ಮಾತ್ರ ಪ್ರಚಾರಕ್ಕೆ ಅರ್ಹರು ಎನ್ನುವ ಅಭಿಪ್ರಾಯ ಮಾತ್ರ ಮರೆಯಾಗಿ ಹೋಗುತ್ತಿದೆ. ಇಂಥದೊಂದು ಬೆಳವಣಿಗೆ ಕಾಣಿಸಿಕೊಂಡಿದ್ದು ಯುವರಾಜ್ ಸಿಂಗ್ ಬ್ಯಾಟ್ ಅಬ್ಬರಿಸದಿದ್ದಾಗ. ನಂತರದ ಬೆಳವಣಿಗೆಯಲ್ಲಿ `ಯುವಿ~ಗೆ ಅನಾರೋಗ್ಯ ಕಾಡಿದ್ದು ಇನ್ನೊಂದು ಹಂತ. ಆಗಲೇ ನಿರಾಸೆಯನ್ನು ಕೂಡ ಜಾಹೀರಾತಿನ ಹೂರಣವಾಗಿಸುವ ಹೊಸದೊಂದು ಪ್ರಚಾರ ತಂತ್ರದ ಹುಟ್ಟು. ಬಹುಶಃ ಭಾರತದ ಜಾಹೀರಾತು ಕ್ಷೇತ್ರವೇ ಇಂಥದೊಂದು ತಂತ್ರವನ್ನು ಅಲ್ಲಿಯವರೆಗೆ ಕಂಡಿರಲಿಲ್ಲ. ಈ ಹೊಸ ಸಾಧ್ಯತೆಗೆ ಕಾರಣ ಹಾಗೂ ಪ್ರೇರಣೆ ದೇಶದಲ್ಲಿ ಕ್ರಿಕೆಟ್ ಹೊಂದಿರುವ ಜನಪ್ರಿಯತೆ.

ವಿಶ್ವಕಪ್ನಲ್ಲಿ `ಸರಣಿ ಶ್ರೇಷ್ಠ~ನಾದ ಯುವರಾಜ್ ಪ್ರದರ್ಶನ ಮಟ್ಟ ತಗ್ಗಿದಾಗ ಅವರೊಂದಿಗೆ ಜಾಹೀರಾತು ಒಪ್ಪಂದ ಮಾಡಿಕೊಂಡವರು ಸುಮ್ಮನಿರಲಿಲ್ಲ. ನಿರಾಸೆಯನ್ನೂ ಬಂಡವಾಳ ಮಾಡಿಕೊಂಡರು. ಬ್ಯಾಟ್ ಮಾತನಾಡುವಾಗ ಎಲ್ಲವೂ ಸರಿಯಾಗಿ ಇರುತ್ತದೆ. ತಣ್ಣಗಾದಾಗ ಕಷ್ಟಗಳು ಸಾಲುಗಟ್ಟಿ ಬರುತ್ತವೆಂದು ಸಹಾನುಭೂತಿ ಹುಟ್ಟುವಂಥ ಮಾತುಗಳನ್ನು ಈ ಬ್ಯಾಟ್ಸ್ಮನ್ ಬಾಯಿಗೆ ಹಾಕಿದ್ದು ನಷ್ಟವೇನಿಸಲಿಲ್ಲ. ಅದೆಷ್ಟು ಕಾಲೇಜ್ ಬೆಡಗಿಯರು ಈ ಜಾಹೀರಾತು ನೋಡಿ `ಅಯ್ಯೋ ಪಾಪ~ ಎಂದರು. ಅಂತೂ ಆ ಮೂವತ್ತು ಸೆಕೆಂಡುಗಳ ದೃಶ್ಯ ತುಣುಕು ಜನರ ಮನದಾಳಕ್ಕೆ ಇಳಿಯಿತು.

ಕ್ಯಾನ್ಸರ್ ಚಿಕಿತ್ಸೆಗಾಗಿ ಇದೇ ಆಟಗಾರ ವಿದೇಶಕ್ಕೆ ಹೋದ ನಂತರವಂತೂ ಮಾಧ್ಯಮಗಳಲ್ಲಿ ಸದಾ `ಟ್ವಿಟರ್~ ಸಂದೇಶಗಳ ಸುದ್ದಿ. ಅದೇ ಕಾಲದಲ್ಲಿ ಯುವರಾಜ ಮೃದು ಧ್ವನಿಯಲ್ಲಿ ಕಷ್ಟ ತೋಡಿಕೊಳ್ಳುವ ಜಾಹೀರಾತು ಪ್ರಸಾರವಾಗಿದ್ದು ಅದೆಷ್ಟೊಂದು ಬಾರಿ! ಅದನ್ನು ನೋಡಿ ಯುವತಿಯರು ಮಾತ್ರವಲ್ಲ ಗೃಹಿಣಿಯ ನಡುವೆಯೂ ಅನುಕಂಪದ ಅಲೆ. ಕ್ರಿಕೆಟ್ನಲ್ಲಿ ರನ್ ಇರುತ್ತವೋ-ಗೋಲು ಇರುತ್ತವೋ ಎಂದು ಕೇಳುವಂಥ ಮುಗ್ಧ ಮಹಿಳೆಯರಿಗೂ ಅದೇನೋ `ಯುವಿ~ ಬಗ್ಗೆ ಪ್ರೀತಿ. ಯುವರಾಜನ ಇಂಥ ಜನಪ್ರಿಯತೆ ಅರಿತೇ ಜಾಹೀರಾತು ಸೃಷ್ಟಿ ಆಗಿತ್ತೆಂದು ವಿವರಿಸಿ ಹೇಳುವ ಅಗತ್ಯವಂತೂ ಇಲ್ಲ.

ಅದೇ ಜಾಡು ಹಿಡಿದು ಇನ್ನೊಂದು ಜಾಹೀರಾತು ನೋಡುಗರ ಮನದಲ್ಲಿ ಸಹಾನುಭೂತಿ ಹುಟ್ಟಿಸುತ್ತಿದೆ. ಆಸ್ಟ್ರೇಲಿಯಾದಲ್ಲಿನ ಸರಣಿ ಸೋಲಿನ ನಂತರ ಭಾರತ ತಂಡದ ಬೆಂಬಲಿಗರಿಗೆ ಭಾರಿ ನಿರಾಸೆ ಆಯಿತು. ಮುಗ್ಧ ಅಭಿಮಾನಿಗಳ ಮನದಲ್ಲಿ ಕೋಪದ ಕಿಡಿಯೂ ಇತ್ತು. ಇಂಥ ಪರಿಸ್ಥಿತಿಯಲ್ಲಿ ಕ್ರಿಕೆಟ್ ಆಟಗಾರರನ್ನು ಪ್ರಚಾರದ ಮಾರ್ಗ ಮಾಡಿಕೊಳ್ಳುವುದು ಖಂಡಿತವಾಗಿ ಕಷ್ಟ ಎನಿಸಿದ್ದು ಸ್ಪಷ್ಟ. ವಿಚಿತ್ರವೆಂದರೆ ಸೋಲಿನಿಂದ ಆದ ನೋವನ್ನು ಮಾಯವಾಗಿಸುವ ಮುಲಾಮಿನಂಥ ದೃಶ್ಯಗಳನ್ನು ಆಗ ಹೆಣೆದು ಹರಿಬಿಡಲಾಯಿತು. ಅಚ್ಚರಿಯೆಂದರೆ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪಡೆಯ ಮೇಲಿನ ಕೋಪ ಕಡಿಮೆಯಾಗಿ ಪ್ರೀತಿ ಇಮ್ಮಡಿ.

ದೋನಿ ಕಷ್ಟಗಳ ನಡುವೆ ಬೆಳೆದು ಬಂದ ಆಟಗಾರ ಎನ್ನುವುದು ಎಲ್ಲರಿಗೂ ಗೊತ್ತಿದ್ದ ವಿಷಯ. ಅಂಥ ಕಷ್ಟಗಳ ನಡುವೆಯೂ ಎತ್ತರಕ್ಕೆ ಬೆಳೆಯುವ ತುಡಿತವಿದ್ದರಿಂದ ಭಾರತ ತಂಡದ ನಾಯಕನಾಗಿ ಬೆಳೆದ. ಅದೇ ಇತಿಹಾಸವನ್ನು ಮಾತುಗಳಲ್ಲಿಯೇ ಕೆದಕಿ ಸೋಲಿನಿಂದಾದ ಬೇಸರ ಮರೆಸುವ ತಂತ್ರ ವಿಶೇಷ.

ಕಂಪೆನಿಗಳು ದೀರ್ಘ ಕಾಲದ ಜಾಹೀರಾತು ಒಪ್ಪಂದವನ್ನು ಕ್ರಿಕೆಟಿಗರ ಜೊತೆಗೆ ಮಾಡಿಕೊಳ್ಳುತ್ತವೆ. ಆದರೆ ಆ ಆಟಗಾರನ ಪ್ರದರ್ಶನ ಮಟ್ಟ ಕುಸಿದಾಗ ಏನು ಮಾಡುವುದೆನ್ನುವ ಪ್ರಶ್ನೆ ಕಾಡುತ್ತದೆ. ಅದಕ್ಕೆ ಈಗ ಸ್ಪಷ್ಟ ಪರಿಹಾರ ಸಿಕ್ಕಿದೆ. ಆದ್ದರಿಂದ ಕ್ರಿಕೆಟಿಗರ ನಿರಾಸೆಯೂ `ಎನ್ಕ್ಯಾಷ್~!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.