ಬುಧವಾರ, ಮೇ 18, 2022
23 °C

ಸಂಖ್ಯೆ ಸುದ್ದಿ: ಇ–ರಿಟೇಲ್‌ ಏರುಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಇ–ರಿಟೇಲ್ ವಹಿವಾಟು ಏರಿಕೆಯಾಗುತ್ತಿದೆ. ಐದು ವರ್ಷಗಳಲ್ಲಿ ಇ–ರಿಟೇಲ್ ಮಾರುಕಟ್ಟೆಯ ವಹಿವಾಟಿನ ಗಾತ್ರ ಏರಿಕೆಯಾಗುತ್ತಲೇ ಇದೆ. ಆದರೆ 2020–21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡಿದೆ. ಅದೇ ಆರ್ಥಿಕ ವರ್ಷದಲ್ಲಿ ರಿಟೇಲ್‌ (ಚಿಲ್ಲರೆ) ಮಾರುಕಟ್ಟೆಯ ವಹಿವಾಟು ಸ್ವಲ್ಪ ಕುಸಿದಿದೆ. ಮುಂದಿನ ವರ್ಷಗಳಲ್ಲಿ ಈ ಎರಡೂ ರೀತಿಯ ಮಾರುಕಟ್ಟೆಗಳು ಏರಿಕೆ ಕಾಣಲಿವೆ. ಆದರೆ ಇ–ರಿಟೇಲ್ ಮಾರುಕಟ್ಟೆಯ ಏರಿಕೆ ಪ್ರಮಾಣ ಹೆಚ್ಚು ಇರಲಿದೆ ಎಂದು ಬೈನ್ ಅಂಡ್ ಕಂಪನಿ ತನ್ನ ಸಂಶೋಧನಾ ವರದಿಯಲ್ಲಿ ವಿವರಿಸಿದೆ.

ಆರ್ಥಿಕ ವರ್ಷ;ರಿಟೇಲ್ ಮಾರುಕಟ್ಟೆ;ಇ–ರಿಟೇಲ್ ಮಾರುಕಟ್ಟೆ

2016–17;₹51.22 ಲಕ್ಷ ಕೋಟಿ;––

2017–18;₹57.90 ಲಕ್ಷ ಕೋಟಿ;––

2018–19;₹60.51 ಲಕ್ಷ ಕೋಟಿ;₹1.70 ಲಕ್ಷ ಕೋಟಿ

2019–20;₹63.11 ಲಕ್ಷ ಕೋಟಿ;₹2.22 ಲಕ್ಷ ಕೋಟಿ

2020–21;₹60.15 ಲಕ್ಷ ಕೋಟಿ;₹2.28 ಲಕ್ಷ ಕೋಟಿ

***

* ರಿಟೇಲ್ ಮಾರುಕಟ್ಟೆಯ ವಹಿವಾಟು ನಾಲ್ಕು ವರ್ಷ ಸತತವಾಗಿ ಏರಿಕೆಯಾಗಿದೆ. ಆದರೆ 2020–21ನೇ ಸಾಲಿನಲ್ಲಿ ಶೇ 5ರಷ್ಟು ಇಳಿಕೆ ಕಂಡಿದೆ. ಕೋವಿಡ್‌ ಲಾಕ್‌ಡೌನ್‌ನ ಕಾರಣ ಚಿಲ್ಲರೆ ಮಾರುಕಟ್ಟೆಯ ವಹಿವಾಟು ಕುಸಿದಿದೆ

* ಮೂರು ವರ್ಷಗಳಲ್ಲಿ ಇ–ರಿಟೇಲ್ ಮಾರುಕಟ್ಟೆಯ ವಹಿವಾಟು ಏರಿಕೆಯಾಗುತ್ತಲೇ ಇದೆ. ಆದರೆ 2020–21ನೇ ಸಾಲಿನಲ್ಲಿ ಶೇ 21ರಷ್ಟು ಏರಿಕೆಯಾಗಿದೆ. ಕೋವಿಡ್‌ ಲಾಕ್‌ಡೌನ್‌ನ ಅವಧಿಯಲ್ಲಿ ಜನರು ಇ–ರಿಟೇಲ್‌ ಮಾರುಕಟ್ಟೆಯ ಮೊರೆ ಹೋಗಿದ್ದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ

* 2025–26ನೇ ಸಾಲಿನ ವೇಳೆಗೆ ರಿಟೇಲ್ ಮಾರುಕಟ್ಟೆಯ ವಹಿವಾಟು ಶೇ 8–9ರಷ್ಟು ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಅದೇ ಅವಧಿಯಲ್ಲಿ ಇ–ರಿಟೇಲ್ ಮಾರುಕಟ್ಟೆಯ ವಹಿವಾಟು ಶೇ 25–30ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಇ–ರಿಟೇಲ್ ಮಾರುಕಟ್ಟೆ ಬೆಳವಣಿಗೆ ಭಾರತದಲ್ಲೇ ಹೆಚ್ಚು

ವಿಶ್ವದ ಹಲವು ದೇಶಗಳಲ್ಲಿ, 2020–21ರಲ್ಲಿ ಇ–ರಿಟೇಲ್‌ ಮಾರುಕಟ್ಟೆ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆ ದಾಖಲಿಸುತ್ತದೆ ಎಂದು ಆ ಆರ್ಥಿಕ ವರ್ಷದ ಆರಂಭದಲ್ಲಿ ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆಯನ್ನೂ ಮೀರಿ ಹಲವು ದೇಶಗಳಲ್ಲಿ ಇ–ರಿಟೇಲ್‌ ಮಾರುಕಟ್ಟೆ ದೊಡ್ಡ ಪ್ರಮಾಣದ ಬೆಳವಣಿಗೆ ದಾಖಲಿಸಿದೆ. ವಿಶ್ವದ ಪ್ರಮುಖ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಗರಿಷ್ಠಮಟ್ಟದ ಏರಿಕೆ ದಾಖಲಾಗಿದೆ

ದೇಶ;ಇ–ರಿಟೇಲ್ ಏರಿಕೆ ಪ್ರಮಾಣ ಅಂದಾಜು;ವಾಸ್ತವದಲ್ಲಿ ಆದ ಏರಿಕೆ ಪ್ರಮಾಣ

ಅಮೆರಿಕ;28%;67%

ಚೀನಾ;‌10%;34%

ಬ್ರಿಟನ್;5%;65%

ಭಾರತ;40%;80%

ಜಪಾನ್;20%;50%

ದಕ್ಷಿಣ ಭಾರತದಲ್ಲಿ ಹೆಚ್ಚು

ಇ–ರಿಟೇಲ್‌ ಖರೀದಿಯ ಪ್ರಮಾಣ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚು. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಗೋವಾ ಮತ್ತು ಕೇರಳದಲ್ಲಿ ಖರೀದಿಗಾಗಿ ಇ–ರಿಟೇಲ್‌ ಮಾರುಕಟ್ಟೆ ಮೊರೆ ಹೋಗುವವರ ಸಂಖ್ಯೆ ಹೆಚ್ಚು. ಈಶಾನ್ಯ ಭಾರತದ ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ತ್ರಿಪುರಾದಲ್ಲೂ ಈ ಪ್ರಮಾಣ ಹೆಚ್ಚೇ ಇದೆ. ದೆಹಲಿ ಮತ್ತು ಹರಿಯಾಣದಲ್ಲಿಯೂ ಈ ಪ್ರಮಾಣ ಹೆಚ್ಚು.

ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್, ಪಂಜಾಬ್, ತಮಿಳುನಾಡು, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಇ–ರಿಟೇಲ್ ಖರೀದಿ ಸಾಧಾರಣ ಪ್ರಮಾಣದಲ್ಲಿದೆ. ಹಿಂದಿ ಭಾಷಾ ರಾಜ್ಯಗಳಲ್ಲಿ ಮತ್ತು ಜಮ್ಮು–ಕಾಶ್ಮೀರದಲ್ಲಿ ಇ–ರಿಟೇಲ್‌ ವಹಿವಾಟು ಕಡಿಮೆ ಮಟ್ಟದಲ್ಲಿದೆ.

ನಕ್ಷೆಗೆ ಇಂಡಿಕೇಟರ್‌ಗಳು

ಇ–ರಿಟೇಲ್‌ ಖರೀದಿ ಅಧಿಕ ಮಟ್ಟದಲ್ಲಿರುವ ರಾಜ್ಯಗಳು

ಇ–ರಿಟೇಲ್ ಖರೀದಿ ಸಾಧಾರಣ ಮಟ್ಟದಲ್ಲಿರುವ ರಾಜ್ಯಗಳು

ಇ–ರಿಟೇಲ್ ಖರೀದಿ ಕಡಿಮೆ ಮಟ್ಟದಲ್ಲಿರುವ ರಾಜ್ಯಗಳು

ಆನ್‌ಲೈನ್ ಖರೀದಿ ಹವ್ಯಾಸಗಳು

50 % ಉತ್ಪನ್ನದ ಎಲ್ಲಾ ಚಿತ್ರಗಳನ್ನು ವೀಕ್ಷಿಸುವವರ ಪ್ರಮಾಣ

4 % ಉತ್ಪನ್ನದ ವಿವರಣಾತ್ಮಕ ಮಾಹಿತಿಯನ್ನು ಓದುವವರ ಪ್ರಮಾಣ

10 % ಉತ್ಪನ್ನವನ್ನು ಹುಡುಕಲು ‘ವಾಯ್ಸ್‌ ಸರ್ಚ್‌’ ಬಳಸುವವರ ಪ್ರಮಾಣ

33 % ಪ್ರಾದೇಶಿಕ ಭಾಷೆಗಳಲ್ಲಿ ಇ–ರಿಟೇಲ್ ಖರೀದಿ ನಡೆಸುವವರ ಪ್ರಮಾಣ

40% ಸಾಮಾಜಿಕ ಜಾಲತಾಣಗಳ ಮೂಲಕ ಖರೀದಿ ಮಾಡುವವರ ಪ್ರಮಾಣ

***

ಆಧಾರ: ಬೈನ್‌ ಅಂಡ್ ಕಂಪನಿಯ ‘ಭಾರತದಲ್ಲಿ ಆನ್‌ಲೈನ್ ಖರೀದಿ–2021’ ವರದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು