ಕಲಬುರ್ಗಿ: ರಾಜ್ಯದ ಸಿಮೆಂಟ್ ಕಾಶಿ ಎಂದು ಕರೆಸಿಕೊಳ್ಳುವ ಕಲಬುರ್ಗಿ ಜಿಲ್ಲೆಯಲ್ಲಿ ಉತ್ಪಾದನೆ ಕುಂಠಿತಗೊಂಡಿದೆ. ಇಲ್ಲಿನ ಕಾರ್ಖಾನೆಗಳ ಬಹುದೊಡ್ಡ ಮಾರುಕಟ್ಟೆ ಬೆಂಗಳೂರು, ಮುಂಬೈ ಹಾಗೂ ಪುಣೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ತಿಂಗಳುಗಳಿಂದ ಕಠಿಣ ಲಾಕ್‌ಡೌನ್ ಜಾರಿಯಲ್ಲಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದ್ದರೂ, ಕೊರೊನಾ ಭೀತಿಯಿಂದಾಗಿ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದರಿಂದ ನಿರೀಕ್ಷಿಸಿದಷ್ಟು ಉತ್ಪಾದನೆ ಆಗುತ್ತಿಲ್ಲ.

ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿಯಲ್ಲಿ ಎಸಿಸಿ ಸಿಮೆಂಟ್, ಚಿತ್ತಾಪುರ ಬಳಿ ಓರಿಯೆಂಟ್ ಸಿಮೆಂಟ್, ಸೇಡಂ ತಾಲ್ಲೂಕಿನಲ್ಲಿ ವಾಸವದತ್ತಾ ಸಿಮೆಂಟ್, ರಾಜಶ್ರೀ ಸಿಮೆಂಟ್, ಶ್ರೀ ಸಿಮೆಂಟ್, ಚಿಂಚೋಳಿಯಲ್ಲಿ ಚೆಟ್ಟಿನಾಡ್ ಸಿಮೆಂಟ್, ಕಲಬುರ್ಗಿ ಸಿಮೆಂಟ್ ಕಾರ್ಖಾನೆಗಳಿವೆ. ಪ್ರತಿ ಕಾರ್ಖಾನೆಯೂ ಶೇ 30ರಿಂದ 50ರಷ್ಟು ಉತ್ಪಾದನೆ ಕಡಿತಗೊಳಿಸಿದೆ. ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಜೆ.ಕೆ. ಸಿಮೆಂಟ್ ಸಹ ಉತ್ಪಾದನೆಯನ್ನು ಶೇ 60ರಿಂದ 70ರಷ್ಟು ಕಡಿತಗೊಳಿಸಿದೆ.

ಕೋವಿಡ್ ಎರಡನೇ ಅಲೆಯಿಂದಾಗಿ ನಿರ್ಮಾಣ ವಲಯವೂ ತತ್ತರಿಸಿದೆ. ಭಾರಿ ಪ್ರಮಾಣದ ವಸತಿ ಸಂಕೀರ್ಣ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಸರ್ಕಾರದ ವತಿಯಿಂದ ಅನುಷ್ಠಾನಗೊಳ್ಳಬೇಕಿದ್ದ ವಸತಿ ಯೋಜನೆಗಳು, ಸರ್ಕಾರಿ ಕಟ್ಟಡಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ ಎನ್ನುತ್ತಾರೆ ಕಲಬುರ್ಗಿಯ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಒಬ್ಬರು.

ಈ ಕುರಿತು ಪ‍್ರತಿಕ್ರಿಯೆ ನೀಡಿದ ಕ್ರೆಡಾಯ್ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ ನಜೀಬ್, ‘ಕಟ್ಟಡ ಕೆಲಸಗಳು ಬಹುತೇಕ ಸ್ಥಗಿತಗೊಂಡಿದ್ದರಿಂದ ಸಿಮೆಂಟ್ ಕಾರ್ಖಾನೆಗಳು ಉತ್ಪಾದನೆ ಕಡಿತಗೊಳಿಸಿವೆ. ಜಿಲ್ಲೆಯ ಮೂರು ಪ್ರಮುಖ ಕಾರ್ಖಾನೆಗಳು ಎರಡು ಘಟಕಗಳನ್ನು ಬಂದ್ ಮಾಡಿ ಒಂದು ಘಟಕದಲ್ಲಷ್ಟೇ ಸಿಮೆಂಟ್ ಉತ್ಪಾದಿಸುತ್ತಿವೆ’ ಎಂದರು.

ಕಾರ್ಮಿಕರು ಕೋವಿಡ್ ನೆಗೆಟಿವ್ ಪ್ರಮಾಣಪತ್ರ ತಂದರೆ ಮಾತ್ರ ಕಾರ್ಖಾನೆಯಲ್ಲಿ ಅವಕಾಶ ನೀಡಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಪ್ರಸ್ತುತ ಶೇ 30ರಷ್ಟು ಸಿಮೆಂಟ್ ಉತ್ಪಾದನೆ ಕಡಿಮೆಯಾಗಿದೆ.
-ಶಿವಾನಂದ ಪಾಟೀಲ, ಲೈಸನಿಂಗ್ ಅಧಿಕಾರಿ, ಓರಿಯೆಂಟ್ ಸಿಮೆಂಟ್, ಕಲಬುರ್ಗಿ

ಇವನ್ನೂ ಓದಿ
*ಒಳನೋಟ: ಕೈಗಾರಿಕೆಗಳಿಗೆ ಪೆಟ್ಟು ನೀಡಿದ ಕೋವಿಡ್ ಎರಡನೇ ಅಲೆ; ಉತ್ಪಾದನೆ ಸ್ಥಗಿತ
*ಒಳನೋಟ: ಲಾಕ್‌ಡೌನ್ ಪರಿಣಾಮ; ನೆಲಕಚ್ಚಿದ ಗೊಂಬೆ ಉದ್ಯಮ
*ಒಳನೋಟ: ಲಾಕ್‌ಡೌನ್ ಪರಿಣಾಮ; ಬೀಡಿ ಸುತ್ತುವ ಕೈಗಳಿಗೆ ಪೂರ್ಣ ಉದ್ಯೋಗವಿಲ್ಲ!
*ಒಳನೋಟ: ಗಾರ್ಮೆಂಟ್ಸ್ ಉದ್ಯಮಕ್ಕೆ ಕೋವಿಡ್ ಬರೆ
*ಒಳನೋಟ: ಜೀವ ಉಳಿಸಲೆಂದು ಜಾರಿಗೊಳಿಸಿದ ಲಾಕ್‌ಡೌನ್ ಉದ್ಯಮಕ್ಕೆ ಉರುಳು
*ಒಳನೋಟ: ಆಟೊಮೊಬೈಲ್ ಉದ್ಯಮಕ್ಕೆ ಲಾಕ್‌ಡೌನ್ ಪೆಟ್ಟು
*ಒಳನೋಟ: ಗಣಿ ಚಟುವಟಿಕೆ ಸದ್ಯ ನಿರಾಳ; ಭವಿಷ್ಯದ ಬಗ್ಗೆ ಕಳವಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.