ಸದಾ ಮೊಬೈಲ್ನಲ್ಲೇ ಮುಳುಗಿರುವ ಈ ತಲೆಮಾರಿನವರ ಮಾತು, ವರ್ತನೆ ಒಂದೂ ಅರ್ಥವಾಗದು. ಹೇಳಿದ್ದನ್ನು ಕೇಳುವವರಲ್ಲ, ಮಲ್ಟಿ ಟಾಸ್ಕಿಂಗ್ ಮಾಡುವವರಲ್ಲ… ಹೀಗೆ ಹೊಸ ತಲೆಮಾರಿನವರ ಕುರಿತು ಪಾಲಕರಿಂದ ಶಿಕ್ಷಕರವರೆಗೆ, ಕಾರ್ಪೊರೇಟ್ ಕಂಪನಿಗಳಿಂದ ಅಕ್ಕಪಕ್ಕದ ಹಿರಿಯರವರೆಗೂ ಎಲ್ಲೆಡೆಯಿಂದ ಕೇಳಿ ಬರುವ ಆರೋಪಗಳು.

ನಮಗೇನು ಬೇಕು ಎಂಬ ಸ್ಪಷ್ಟತೆ ನಮಗಿದೆ. ಜಗತ್ತು ಹೇಗಿದೆ ಎಂಬುದರ ಜ್ಞಾನವೂ ಇದೆ. ತಂತ್ರಜ್ಞಾನದ ಬಲವಿದೆ. ಅನಿಸಿದ್ದನ್ನು ನೇರವಾಗಿ ಹೇಳುವ ನಮ್ಮ ಈ ಸ್ವಭಾವ ಇತರರಿಗೆ ಇಷ್ಟವಾಗದು. ಹೀಗಾಗಿ ಅವರು ನಮ್ಮ ಕುರಿತು ಇಲ್ಲಸಲ್ಲದ್ದನ್ನು ಹೇಳುತ್ತಾರೆ. ಇದು ಇಂದಿನ ತಲೆಮಾರಿನವರ ವಾದ.

ಹಿಂದಿಗಿಂತಲೂ ಇಂದು ತಲೆಮಾರು ವೇಗವಾಗಿ ಬದಲಾಗುತ್ತಿದೆ. ಸದ್ಯ ಬಿಟಾ ಪೀಳಿಗೆ ಜನಿಸಿದ್ದರೂ, ಜನರೇಷನ್ ಝಡ್ (ಜೆನ್ ಝೀ) ತಲೆಮಾರಿನ ಯುವಕ, ಯುವತಿಯರೇ ಈಗ ದೇಶದ ಭವಿಷ್ಯ ನಿರ್ಧರಿಸುವ ದೊಡ್ಡ ಯುವಪಡೆಯಾಗಿದೆ.

‘ಜೆನ್ ಝೀ’ ಎಂದೇ ಕರೆಯಲಾಗುವ 1997ರಿಂದ 2012ರವರೆಗೆ ಜನಿಸಿದವರ ಮಾತು, ಮನೋಭಾವ, ಅವರ ಬೇಕು, ಬೇಡಗಳನ್ನು ಅರ್ಥೈಸಿಕೊಳ್ಳಲು ಯತ್ನಿಸುತ್ತಿರುವ ಜಗತ್ತಿನ ಹಲವು ಮನೋವಿಜ್ಞಾನಿಗಳು, ನಿರಂತರ ಲೇಖನಗಳನ್ನು ಪ್ರಕಟಿಸುತ್ತಲೇ ಇದ್ದಾರೆ.

ಭಾರತದಲ್ಲಿ ಸುಮಾರು 35 ಕೋಟಿಯಷ್ಟು, ಈ ತಲೆಮಾರಿನವರೇ ಇರುವುದರಿಂದ ಇವರ ಜೀವನಶೈಲಿಯ ಅಧ್ಯಯನ ನಡೆಯುತ್ತಲೇ ಇದೆ. ಸಮಾಜಕ್ಕಿಂತ ಹೆಚ್ಚಾಗಿ, ಸಾಮಾಜಿಕ ಜಾಲತಾಣವನ್ನೇ ನೆಚ್ಚಿಕೊಂಡಿರುವ ಈ ತಲೆಮಾರು ಹಿಂದಿನ ಪೀಳಿಗೆಗಳಿಗೆ ಇನ್ನೂ ಒಗಟಾಗಿಯೇ ಇದೆ. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹೆಚ್ಚು ಸ್ಪಷ್ಟತೆ ಇರುವಂತೆ ವರ್ತಿಸುವ ಈ ವರ್ಗವೆಂದರೆ ಮಾರುಕಟ್ಟೆಗೂ ಅಷ್ಟೇ ಪ್ರೀತಿ. ಏಕೆಂದರೆ ಸದ್ಯ ಸಾಕಷ್ಟು ಬೇಕುಗಳ ಬಯಕೆಯನ್ನೇ ಹೊಂದಿರುವ ಜೆನ್ ಝೀ ಒಟ್ಟು ಖರೀದಿಯ ಶೇ 46ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಇದರ ಅಂದಾಜು 860 ಶತಕೋಟಿ ಅಮೆರಿಕನ್ ಡಾಲರ್ ಎಂದರೆ ಈ ತಲೆಮಾರಿನ ಕುರಿತು ಏಕಿಷ್ಟು ಸಂಶೋಧನೆಗಳು ಎಂಬುದನ್ನು ಅರ್ಥೈಸಿಕೊಳ್ಳಬಹುದು.

ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೇ ಹೆಜ್ಜೆ ಹಾಕುತ್ತಿರುವ ಜೆನ್ ಝೀ ನಿಜವಾದ ಡಿಜಿಟಲ್ ಯುವಪೀಳಿಗೆ. ಹೀಗಿದ್ದರೂ ಜೆನ್ ಝೀ ಉಪನ್ಯಾಸಕರಿಗೆ ಸವಾಲು ಹಾಗೂ ಉದ್ಯೋಗದಾತರಿಗೆ ಬಿಸಿತುಪ್ಪವಾಗಿದ್ದಾರೆ ಎಂಬ ಮಾತುಗಳೂ ಕೇಳುತ್ತಿವೆ.

ಡಿಜಿಟಲ್ ಪರಿಸರದ ಪ್ರಭಾವ

ಇವರ ಕ್ರಿಯಾಶೀಲತೆಯೂ, ಕಲಾಕೌಶಲ ಎಲ್ಲವೂ ಮೊಬೈಲ್ ಮೇಲೆಯೇ ಅವಲಂಬಿತ. ಭಾರತೀಯ ಮನೋಶಾಸ್ತ್ರದ ಕುರಿತ ಅಂತರರಾಷ್ಟ್ರೀಯ ಜರ್ನಲ್ ಒಂದು ಪ್ರಕಟಿಸಿರುವ ವರದಿಯ ಪ್ರಕಾರ, ಕಿರು ಅವಧಿಯ ವಿಡಿಯೊಗಳೇ ಇವರ ಅಚ್ಚುಮೆಚ್ಚು ಎಂದಿದೆ. ಕಾಲೇಜೊಂದರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ 35ರಷ್ಟು ವಿದ್ಯಾರ್ಥಿಗಳು ಮಿತಿಯೇ ಇಲ್ಲದಂತೆ ಒಂದಾದಮೇಲೊಂದರಂತೆ ಇಂಥ ಕಿರು ವಿಡಿಯೊಗಳನ್ನು ವೀಕ್ಷಿಸುವವರೇ. ಜತೆಗೆ ಶೇ 70ರಷ್ಟು ಮಂದಿ ತಮ್ಮದೇ ವಿಡಿಯೊಗಳನ್ನು ಅಪ್ಲೋಡ್ ಮಾಡುವ ಹವ್ಯಾಸವನ್ನೂ ಹೊಂದಿದ್ದಾರೆ. ಇದರಿಂದ ಗಳಿಕೆಯ ಹಾದಿಯನ್ನು ಹುಡುಕಿಕೊಂಡವರು ಹಲವರು.

ಸದ್ಯ ಪ್ರಚಲಿತದಲ್ಲಿರುವ ಕಿರು ವಿಡಿಯೊಗಳ ಕಂಟೆಂಟ್ ಕ್ರಿಯೇಟರ್ಗಳು ಇವುಗಳನ್ನು ಹಂಚಿಕೊಳ್ಳುವುದರಲ್ಲೇ ತಮ್ಮ ಕ್ರಿಯಾಶೀಲತೆ ಮೆರೆಯುತ್ತಾರೆ. ಇದರ ಪರಿಣಾಮ ಏಕಾಗ್ರತೆಯ ಕೊರತೆ ಎದುರಿಸುತ್ತಿದ್ದಾರೆ. ಜತೆಗೆ, ಮನೆಯಲ್ಲಿ ಇತರರೊಂದಿಗೆ ಸಂವಹನ ನಡೆಸುವ ಮನುಷ್ಯ ಸಹಜ ಗುಣವನ್ನೂ ಕಳೆದುಕೊಳ್ಳುತ್ತಿರುವುದು ತಜ್ಞರ ಕಳವಳಕ್ಕೆ ಕಾರಣವಾಗಿದೆ.

ಭಾಷೆಯೂ ಬೇರೆಯೇ...!

ಜೆನ್ ಝೀ ನಂತರದಲ್ಲಿ ಜನರೇಷನ್ ಬೀಟಾ ಮತ್ತು ಜೆನ್ ಆಲ್ಫಾಗಳೂ ಈಗ ಬಂದಿವೆ. ಈ ವಯಸ್ಸಿನವರ ಮಾತು ಅರ್ಥಮಾಡಿಕೊಳ್ಳಬೇಕೆಂದರೆ ಈ ವರ್ಗದವರೊಂದಿಗೇ ಇದ್ದು ಸಂಶೋಧನೆ ಮಾಡಬೇಕು ಎನ್ನುವುದು ಹಲವು ಪೋಷಕರ ಅಳಲು.

ಸ್ಲ್ಯಾಂಗ್ (ಆಡು ಭಾಷೆ) ಎಂದು ಕರೆಯುವ ಬಹಳಷ್ಟು ಶಬ್ದಗಳ ಬಳಕೆ ಮಹಾನಗರಗಳ ಬಡಾವಣೆಗಳಲ್ಲಿರುವ ಇಂಥ ಯುವ ಸಮುದಾಯಗಳಲ್ಲಿ ಕೇಳಸಿಗಬಹುದು. ನಮ್ಮ ಅಂಕಲ್ ‘ಒಮೆಗಾ’ ಎಂದು ಈ ಮಕ್ಕಳು ಹೇಳಿದರೆ, ಬೆನ್ನು ತಟ್ಟಿಕೊಳ್ಳುವ ಅಗತ್ಯವಿಲ್ಲ. ಹಾಗೆಂದರೆ ಈ ಹಿಂದೆ ಹೇಳುತ್ತಿದ್ದಂತೆ ‘ಒಬಿರಾಯನ ಕಾಲದವರು’ ಎನ್ನುವುದಕ್ಕೆ ಇವರ ಭಾಷಾಪ್ರಯೋಗವಿದು. ಒಬ್ಬ ವ್ಯಕ್ತಿ ಸುಮಾರಾಗಿದ್ದರೆ ಅವರನ್ನು ‘ಬೇಸಿಕ್’, ಅದ್ಭುತವಾಗಿದ್ದರೆ ‘ಫೈರ್’, ಹೀಗೆ ಇವರ ಪದಗುಚ್ಛಗಳಿಗೆ ಈಗ ಸ್ಲ್ಯಾಂಗ್ ನಿಘಂಟು ಕೂಡಾ ಆನ್ಲೈನ್ನಲ್ಲಿ ಲಭ್ಯವಿದೆ. ಹೀಗೆ ಶಾಲಾ ಮಕ್ಕಳಾದಿಯಾಗಿ ಆಧುನಿಕ ತಲೆಮಾರಿನ ಯುವಸಮೂಹವು ಇಂಥ ಡಜನ್ಗಟ್ಟಲೆ ಪದಗಳನ್ನು ಸಾಮಾನ್ಯವಾಗಿ ಬಳಸುತ್ತಿದ್ದಾರೆ ಎಂದು ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಶಿಕ್ಷಕರೊಬ್ಬರು ಹೇಳುತ್ತಾರೆ. ಮಕ್ಕಳ ಈ ಭಾಷೆಗಳನ್ನು ಅರ್ಥೈಸಿಕೊಳ್ಳುವಲ್ಲಿ ತಾವೂ ಹೆಣಗಾಡುತ್ತಿರುವುದಾಗಿ ಪಾಲಕರೂ ಹೇಳುತ್ತಿದ್ದಾರೆ.

ಕಿರಿದಾದ ಕುಟುಂಬ ಗಾತ್ರ

ಸಾಮಾನ್ಯವಾಗಿ ಕಿರುಗಾತ್ರದ ಕುಟುಂಬ ಅಥವಾ ಏಕಪಾಲಕರ ಆರೈಕೆ ಇಂದು ಮಹಾನಗರಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಸಮಾಜದಲ್ಲಿನ ಇಂಥ ಪರಿವರ್ತನೆಗಳು ಭವಿಷ್ಯದ ಪೀಳಿಗೆಯಲ್ಲಿ ಪ್ರತಿಫಲಿಸುತ್ತಿದೆ. ಹಲವು ಸಂಸ್ಕೃತಿಗಳೊಂದಿಗೆ ಬದುಕು, ಹೊಸತನ್ನು ಬೇಗನೆ ಅಳವಡಿಸಿಕೊಳ್ಳುವುದು ಮತ್ತು ಭಿನ್ನ ರೀತಿಯ ಕುಟುಂಬ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವ ಅನಿವಾರ್ಯತೆಯೂ ಇದರಲ್ಲಿದೆ.

‘ಹಿಂದೆ ಮಕ್ಕಳಿಗೂ ಮನೆಯಲ್ಲಿ ಒಂದಷ್ಟು ಕೆಲಸ ಮತ್ತು ಜವಾಬ್ದಾರಿಗಳನ್ನು ನೀಡಲಾಗುತ್ತಿತ್ತು. ಅಂಗಡಿಗೆ ಹೋಗುವುದು, ವಿದ್ಯುತ್ ಅಥವಾ ಇನ್ಯಾವುದೇ ಬಿಲ್ಗಳನ್ನು ಕಟ್ಟಿ, ಸರಿಯಾದ ಚಿಲ್ಲರೆ ತರುವುದು ಇತ್ಯಾದಿ. ಮನೆ ಶುಚಿಯಾಗಿಡುವಲ್ಲೂ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದುದರಿಂದ ಜವಾಬ್ದಾರಿ ಸಹಜವಾಗಿ ಅವರಲ್ಲಿ ರೂಢಿಗತವಾಗುತ್ತಿತ್ತು. ಆದರೆ ಇಂದು, ಮಕ್ಕಳಿಗೆ ಮನೆ ಕಲಸ ಕೊಡಬಾರದು ಎಂಬ ಪಾಲಕರ ಬದಲಾದ ಮನಸ್ಥಿತಿ ಒಂದೆಡೆಯಾದರೆ, ಪಟ್ಟಣಗಳಲ್ಲಿ ಮನೆಗೆಲಸದವರನ್ನು ನೇಮಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ. ಮನೆಯಲ್ಲಿರುವವರೆಲ್ಲರೂ ಒಂದು ಕುಟುಂಬ, ಅದಕ್ಕಾಗಿ ದುಡಿಯುವುದು ಅಗತ್ಯ ಎಂಬ ಪರಿಕಲ್ಪನೆಯನ್ನು ರೂಢಿಸಿಕೊಳ್ಳದಿದ್ದರೆ ಜವಾಬ್ದಾರಿ ಮೂಡುವುದು ಕಷ್ಟ’ ಎಂದು ಜೆನ್ ಝೀ ಕುರಿತು ಅಧ್ಯಯನ ನಡೆಸಿರುವ ಮೈಸೂರಿನ ಡಾರ್ವಿನ್ ಸೈಕಾಲಜಿ ಸೆಂಟರ್ನ ಮುಖ್ಯಸ್ಥ ಶ್ರೀಧರ್ ಮಂಡ್ಯಮ್ ಅವರ ಅಭಿಮತ.

‘ಇಂಥ ಪರಿಸ್ಥಿತಿ ನಗರ ಪ್ರದೇಶದಲ್ಲಿ ಹೆಚ್ಚಾಗಿದೆ. ಹಿಂದಿನ ತಲೆಮಾರಿಗೆ ಹೋಲಿಸಿದರೆ ಸಾಕಷ್ಟು ಸುಭಿಕ್ಷ ಕಾಲದಲ್ಲಿ ಜನರೇಷನ್ ಝೀ ಇದೆ. ಹಿಂದಿನ ತಲೆಮಾರಿಗೆ ಇರದ ಟಿ.ವಿ. ಕಾರು, ಮೊಬೈಲ್, ಮನೆ ಸೇರಿದಂತೆ ಎಲ್ಲಾ ಸೌಕರ್ಯಗಳನ್ನೂ ತಮ್ಮ ಪಾಲಕರ ಮೂಲಕ ಇವರು ಪಡೆದಿದ್ದಾರೆ. ಹೀಗೆ ಎಲ್ಲಾ ಸವಲತ್ತುಗಳಿರುವ ಕಾಲದಲ್ಲಿ ತಾನೇಕೆ ದುಡಿಯಬೇಕು ಎಂಬುದನ್ನು ಪಾಲಕರು ಮನದಟ್ಟು ಮಾಡಬೇಕು. ಒಂದೊಮ್ಮೆ ಅಂಥ ಜ್ಞಾನ ಅವರಿಗೆ ಸಿಕ್ಕಿದ್ದೇ ಆದಲ್ಲಿ ಅವರು ಮಹತ್ತರವಾದದ್ದನ್ನು ಸಾಧಿಸುತ್ತಾರೆ’ ಎಂಬ ವಿಶ್ವಾಸ ಅವರದ್ದು.

‘ಹಿಂದಿನ ತಲೆಮಾರಿಗೆ ಆಯ್ಕೆಗಳು ಕಡಿಮೆ ಇದ್ದವು. ಈಗ ಓದಲು ನೂರಾರು ಕೋರ್ಸ್ಗಳಿಗೆ. ದುಡಿಯಲು ಹಲವು ದಾರಿಗಳಿವೆ. ಅವರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಅದನ್ನು ಪಾಲಕರು ಮಾಡಬೇಕು. ಕುಟುಂಬದಲ್ಲಿ ಸದಸ್ಯರ ಸಂಖ್ಯೆಯೂ ಕಡಿಮೆಯಾಗಿರುವುದರಿಂದ ಮತ್ತು ಸ್ನೇಹಕ್ಕೆ ಸಹಜವಾಗಿ ಹಾತೊರೆಯುವ ಯುವ ಮನಸ್ಸುಗಳಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಿಗುವ ಸ್ನೇಹ ಬಯಸುವುದರಲ್ಲಿ ತಪ್ಪೇನು. ಆದರೆ ಸಾಮಾಜಿಕ ಮಾಧ್ಯಮವನ್ನು ಏತಕ್ಕೆ ಮತ್ತು ಎಷ್ಟು ಬಳಸಬೇಕು ಎಂಬುದನ್ನು ತಿಳಿಸಬೇಕಾದ್ದು ಹಿರಿಯರ ಕರ್ತವ್ಯ’ ಎನ್ನುತ್ತಾರೆ ಶ್ರೀಧರ್.

ಶಿಕ್ಷಣ ತಜ್ಞರ ಭರವಸೆ

ಜೆನ್ ಝೀ ಅವರ ನಿರ್ವಹಣೆಯಲ್ಲಿ ಸವಾಲುಗಳು ಇದ್ದರೂ, ಅವರ ಭವಿಷ್ಯದ ಕುರಿತು ಶಿಕ್ಷಣ ತಜ್ಞರು ಸಾಕಷ್ಟು ಭರವಸೆ ವ್ಯಕ್ತಪಡಿಸಿದ್ದಾರೆ.

‘ಜೆನ್ ಝೀ ವಿದ್ಯಾರ್ಥಿಗಳ ಮೇಲೆ ಡಿಜಿಟಲ್ ಪರಿಸರ ತೀವ್ರವಾಗಿ ಪ್ರಭಾವ ಬೀರಿದೆ. ಇದರಿಂದ ಅವರು ಹೆಚ್ಚಿನ ಫಲಿತಾಂಶ ತರಬಲ್ಲರು ಎಂಬ ನಂಬಿಕೆ ಸೃಷ್ಟಿಯಾಗಿದೆ. ಅಸಲಿಗೆ ಒಂದೇ ವಿಷಯದ ಮೇಲೆ ಹೆಚ್ಚು ಹೊತ್ತು ಗಮನ ಹರಿಸಲು ಸಾಧ್ಯವಿಲ್ಲದ ಈ ತಲೆಮಾರಿನವರು ಕಿರು ಅವಧಿಯ ಶಿಕ್ಷಣವನ್ನು ಬಯಸುತ್ತಿದ್ದಾರೆ. ಜತೆಗೆ ಒಂದೇ ವಿಷಯದ ಕುರಿತು ಹಲವು ಮೂಲಗಳಿಂದ ಮಾಹಿತಿ ಕಲೆಹಾಕುವ ಸಾಮರ್ಥ್ಯ ಇವರಿಗಿದೆ. ಹೀಗಾಗಿ ಈ ಹಿಂದಿನ ತಲೆಮಾರಿನವರಿಗಿಂತ ಇವರು ಉತ್ತಮರು’ ಎಂಬುದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಜವಾಹರ್ ದೊರೆಸ್ವಾಮಿ ಅವರ ವಿಶ್ಲೇಷಣೆ.

‘ಜೆನ್ ಝೀ ಪೀಳಿಗೆಯು ತಂತ್ರಜ್ಞಾನ ಶ್ರೀಮಂತರಾಗಿದ್ದು, ತ್ವರಿತ ಮಾಹಿತಿ ಜಾಗತಿಕ ಸಂಪರ್ಕದಿಂದ ಸಂಪದ್ಭರಿತರಾಗಿದ್ದಾರೆ. ಹೀಗಾಗಿ ಚರ್ಚೆ, ವೈಯಕ್ತಿಕ ಸಂವಾದ ಮತ್ತು ಪ್ರಾಯೋಗಿಕ ಕಲಿಕೆ ಮೂಲಕ ಇವರಿಗೆ ಶಿಕ್ಷಣ ನೀಡುವ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಬದಲಾಗುತ್ತಿರುವ ಪೀಳಿಗೆಯ ಅಗತ್ಯಗಳು ಶಿಕ್ಷಣ ಸಂಸ್ಥೆಗಳಿಗೂ ಹೊಸತನವನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿವೆ’ ಎನ್ನುತ್ತಾರೆ ಕ್ರೈಸ್ಟ್ ವಿಶ್ವವಿದ್ಯಾಲಯದ ಕುಲಪತಿ ಡಾ. ಫಾದರ್ ಜೋಸ್ ಸಿ.ಸಿ.

'20 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ 2017ರಿಂದ ಮಕ್ಕಳ ವರ್ತನೆಯಲ್ಲಿ ಆಗುತ್ತಿರುವ ಬದಲಾವಣೆ ಗಮನಿಸುತ್ತಾ ಬಂದಿದ್ದೇನೆ. ಏಕಾಗ್ರತೆಯ ಕೊರತೆ ಬಹುವಾಗಿ ಇವರನ್ನು ಕಾಡುತ್ತಿದೆ. ಅದರಲ್ಲೂ ಕೃತಕ ಬುದ್ಧಿಮತ್ತೆಯ ಚಾಟ್ಬಾಟ್ಗಳು ಬಂದ ನಂತರವಂತೂ, ಕ್ರಿಯಾಶೀಲತೆಯೂ ಮರೆಯಾಗಿದೆ. ಪ್ರಬಂಧವಾಗಲೀ, ಕಂಪ್ಯೂಟರ್ ಕೋಡಿಂಗ್ಗಳಾಗಲಿ ಎಲ್ಲವೂ ಕಾಪಿ ಮತ್ತು ಪೇಸ್ಟ್ ಅಷ್ಟೇ’ ಎನ್ನುವುದು ಪ್ರಾಧ್ಯಾಪಕಿ ಸಂಗೀತಾ ಬಿ.ಕೆ. ಅವರ ಅನುಭವದ ಮಾತು.

ಜೆನ್ ಝೀ ಚಿತ್ತಚಾಂಚಲ್ಯಕ್ಕೆ ಕಂಪನಿಗಳೂ ಹೈರಾಣ

‘ವೃತ್ತಿ ಬದುಕಿನಲ್ಲಿ ಇವರ ವರ್ತನೆ ಕುರಿತೂ ಸಮೀಕ್ಷೆಗಳು ನಡೆದಿವೆ. ಜೆನ್ ಝೀ ಉದ್ಯೋಗಿಗಳು ವೃತ್ತಿಗಿಂತ ಹೆಚ್ಚಾಗಿ, ಇತರ ಕೆಲಸಗಳಲ್ಲಿ ಆಸಕ್ತರು. ಹಲವು ಬಾರಿ ಗುರಿ ತಲುಪಲು ಸಾಕಷ್ಟು ಪ್ರಯಾಸಪಡುವುದೂ ಉಂಟು. ಹಿಡಿದ ಕೆಲಸವನ್ನು ಮುಗಿಸುವುದೊರಳಗೆ, ಬೇರೊಂದು, ಮತ್ತೊಂದು, ಮಗದೊಂದು ಕೆಲಸ ಹಿಡಿಯುವ ಪ್ರವೃತ್ತಿಯ ಈ ಪೀಳಿಗೆಯ ಚಿತ್ತಚಾಂಚಲ್ಯಕ್ಕೆ ಕಂಪನಿಗಳೂ ಹೈರಾಣಾಗಿವೆ. ಹೀಗಾಗಿ ಕಂಪನಿಗಳೂ ಈಗ ತಮ್ಮ ತಂತ್ರಗಳನ್ನು ಬದಲಿಸಿವೆ. ಈ ತಲೆಮಾರಿನವರಿಗೆ ನಿರ್ದಿಷ್ಟ ಕೆಲಸವನ್ನು ನೀಡಿ, ಅದನ್ನು ಪೂರ್ಣಗೊಳಿಸಲು ನಿಗದಿತ ಸಮಯ ನೀಡುವುದನ್ನು ರೂಢಿಸಿಕೊಂಡಿವೆ’ ಎಂದು ಟೆಕ್ಮೆರಿಡಿಯನ್ ಕಂಪನಿಯ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಶಿವಕುಮಾರ್ ಎಸ್. ಅಕ್ಕಿ ಹೇಳಿದ್ದಾರೆ.

‘ಶುಗರ್ ಬ್ರೇಕ್’ ಇದು ಜೆನ್ ಝೀ ನೌಕರರಲ್ಲಿ ಸಾಮಾನ್ಯ ಪದ. ಕೆಲಸದ ನಡುವೆ ಆಗಾಗ್ಗೆ ಬ್ರೇಕ್ಗಳನ್ನು ತೆಗೆದುಕೊಳ್ಳುವುದು ಇವರಿಗೆ ಸಾಮಾನ್ಯ ಸಂಗತಿ. ಪದೇ ಪದೇ ಬಿಡುವು ತೆಗೆದುಕೊಳ್ಳುವುದರಿಂದ ಕೆಲಸ ಸರಾಗವಾಗಿ ಸಾಗದು. ಆದರೆ ಜೆನ್ ಝೀ ದೃಷ್ಟಿಕೋನದಿಂದ ನೋಡುವುದಾದರೆ, ಅವರು ವೃತ್ತಿ ಸ್ಥಳದಲ್ಲೂ ಮಾನಸಿಕ ಸ್ವಾಸ್ಥ್ಯ ಮತ್ತು ಆರಾಮವನ್ನು ಬಯಸುತ್ತಿರುವುದು ಸ್ಪಷ್ಟ ಎಂದು ಮಾನಸಿಕ ತಜ್ಞರು ಹೇಳಿರುವುದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಇವರ ಪ್ರೇಮ ಭಾಷೆಯೂ ಭಿನ್ನ

‘ನೀ ನಡೆವ ಹಾದಿಯಲ್ಲಿ ನಗೆಹೂವು ಬಾಡದಿರಲಿ...’, ‘ಏಳೇಳು ಜನ್ಮಕ್ಕೂ ನೀನೇ ನನ್ನ ಸಂಗಾತಿ...’ ಇಂಥ ಪದಗಳನ್ನೆಲ್ಲಾ ಹೇಳಿದರೆ ಜೆನ್ ಝೀ ನಕ್ಕುಬಿಡಬಹುದು. ಪ್ರೇಮ, ಪ್ರಯಣ ವಿಷಯದಲ್ಲೂ ಇವರ ನಿಲುವೇ ಬೇರೆ. ಯಾರೊಂದಿಗೆ ಎಷ್ಟು ದಿನ ಇರಬೇಕು, ಹೇಗಿರಬೇಕು, ಹೊಂದಿಕೊಳ್ಳದಿದ್ದರೆ ಹೇಗೆ ಪ್ರತ್ಯೇಕಗೊಳ್ಳಬೇಕು ಎಂಬುದಕ್ಕೆ ಇವರ ತಂತ್ರಗಳೇ ಬೇರೆ. ಹೀಗಾಗಿ ಈ ಪೀಳಿಗೆ ಪ್ರತಿಯೊಂದಕ್ಕೂ ಒಂದೊಂದು ಹೆಸರನ್ನಿಟ್ಟುಕೊಂಡಿದೆ. ಕೆಲವೇ ದಿನಗಳ ಸಂಬಂಧವಾದರೆ ನ್ಯಾನೊಶಿಪ್, ಕೆಲ ವಾರಗಳದ್ದಾದರೆ ಮೈಕ್ರೊಶಿಪ್, ಗಟ್ಟಿ ಸಂಬಂಧವಿಲ್ಲ ಆದರೂ ಪ್ರೇಮ, ಪ್ರಣಯಕ್ಕೇನೂ ಕೊರತೆ ಇಲ್ಲದಿದ್ದರೆ ಅದನ್ನು ಸಿಚ್ಯುಯೇಷನ್ಶಿಪ್, ಕುಟುಂಬಕ್ಕೆ ಬೆಲೆ ನೀಡುವ, ತನ್ನ ಬದುಕಿನ ಬಗ್ಗೆ ಸ್ಪಷ್ಟ ಗುರಿ ಹೊಂದಿರುವ ಮತ್ತು ಭಾವನಾತ್ಮಕವಾಗಿ ಪ್ರಬುದ್ಧತೆ ಹೊಂದಿದವರಿಗೆ ಹಸಿರು ಫ್ಲಾಗ್ ನೀಡಿ ಒಪ್ಪಿಕೊಳ್ಳುತ್ತಾರೆ. ಸ್ವಾಮ್ಯಸೂಚಕ, ಗುರಿ ಇಲ್ಲದ ಅಥವಾ ಹೆಚ್ಚು ಕಿರಿಕಿರಿ ಮಾಡುವವರಿಗೆ ಕೆಂಪು ಬಾವುಟ ತೋರಿಸಿ ಟಾಟಾ ಮಾಡಲೂ ಈ ಪೀಳಿಗೆ ಹೆಚ್ಚು ಯೋಚಿಸದು.

ಯಾವುದೇ ಕಾರಣ ನೀಡದೆ ದೂರ ಸರಿದರೆ ಘೋಷ್ಟಿಂಗ್, ಸಾಮಾಜಿಕ ಜಾಲತಾಣದಲ್ಲಷ್ಟೇ ತಮ್ಮ ಸಂಗಾತಿಯನ್ನು ಪರಿಚಯಿಸಿದರೆ ಅದು ಸಾಫ್ಟ್ ಲಾಂಚ್, ಇಬ್ಬರ ಚಿತ್ರದೊಂದಿಗೆ ಸಂಬಂಧ ಬಹಿರಂಗಗೊಳಿಸಿದರೆ ಅದು ಹಾರ್ಡ್ ಲಾಂಚ್ ಹೀಗೆ ಇದು ಸಾಗುತ್ತಲೇ ಇರುತ್ತದೆ.

ನಮ್ಮ ಸ್ಪಷ್ಟತೆಯೇ ಎಲ್ಲರ ಗೊಂದಲಕ್ಕೆ ಕಾರಣ

‘ನಮಗೇನು ಬೇಕು ಎಂಬುದರ ಸ್ಪಷ್ಟತೆ ನಮಗಿದೆ. ಆದರೆ ಹಲವು ವಿಷಯಗಳಲ್ಲಿ ನಮ್ಮ ತಲೆಮಾರಿನವರಲ್ಲೂ ಭಿನ್ನಾಭಿಪ್ರಾಯಗಳಿವೆ. ಕೆಲವರ ಅಭಿಪ್ರಾಯವನ್ನು ಎಲ್ಲರಿಗೂ ಹೋಲಿಕೆ ಮಾಡುವುದು ಸರಿಯಲ್ಲ. ಮಲ್ಟಿ ಟಾಸ್ಕರ್ಸ್ ಅಲ್ಲ ಎಂಬ ಆರೋಪವಿದೆ. ಒಪ್ಪಿಕೊಳ್ಳುತ್ತೇವೆ. ಆದರೆ ಒಂದೇ ವಿಷಯದಲ್ಲಿ ಹೆಚ್ಚು ಆಳವಾಗಿಳಿಯುವುದು ನಮ್ಮ ಸ್ವಭಾವ. ಇದರಿಂದ ಎಲ್ಲಾ ವಿಷಯಗಳನ್ನೂ ಒಂದಿಷ್ಟು ನೋಡುವ ಬದಲು, ಒಂದು ವಿಷಯದಲ್ಲಿ ಹೆಚ್ಚು ಸ್ಪಷ್ಟತೆ ಹೊಂದುವುದು ನಮ್ಮ ಅಭ್ಯಾಸ’ ಎಂದೆನ್ನುತ್ತಾರೆ ಕಲೆ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿನ್ಯಾಸ್.

‘ಶಿಕ್ಷಕರಿಗೆ ಗೌರವ ಕೊಡುವುದಿಲ್ಲ ಎಂಬುದು ಸುಳ್ಳು. ಆದರೆ ಅವರಿಗಿಂತ ಚೆನ್ನಾಗಿ ಮಾಹಿತಿ ನೀಡಬಲ್ಲ ಚಾಟ್ಬಾಟ್ಗಳಿದ್ದು, ಅವುಗಳನ್ನು ನಾವು ಹೆಚ್ಚು ಅವಲಂಬಿಸಿದ್ದೇವೆ ಎನ್ನುವುದು ಸತ್ಯ. ಕೃತಕ ಬುದ್ಧಿಮತ್ತೆಯಿಂದ ಒಂದಷ್ಟು ಕ್ರಿಯಾಶೀಲತೆ ನಮ್ಮಲ್ಲಿ ಕಡಿಮೆಯಾಗಿರಬಹುದು. ಆದರೆ ಆ ಉಳಿದ ಸಮಯವನ್ನು ಇನ್ನಷ್ಟು ಕೆಲಸಕ್ಕೆ ಬಳಸುತ್ತೇವೆ ಎಂಬುದು ಸತ್ಯ‘ ಎನ್ನುವುದು ಇವರ ಖಡಕ್ ಮಾತು.

‘ರಾಜಕೀಯ ನಮಗೆ ಅರ್ಥವೇ ಆಗಲ್ಲ. ಅದರ ಗೋಜು ಬೇಡ ಎನ್ನುವವರು ನಾವು. ಜತೆಗೆ ನಮ್ಮಲ್ಲೂ ಹಲವರು ಭಾರೀ ಮನರಂಜನೆ ಬಯಸುವವರೂ ಇದ್ದಾರೆ. ಇನ್ನಷ್ಟು ಜನ ಸಿಕ್ಕಾಪಟ್ಟೆ ಕೆಲಸ ಮಾಡಿ ಕೋಟಿ ಕೋಟಿ ಸಂಪಾದಿಸುವ ಕನಸು ಹೊತ್ತವರೂ ಇದ್ದಾರೆ. ಹೀಗಾಗಿ ನಮ್ಮ ಬದುಕಿನ ಉದ್ದೇಶಗಳ ಕುರಿತು ಸ್ಪಷ್ಟತೆ ಹೊಂದಿರುವವರ ಸಂಖ್ಯೆಯೇ ದೊಡ್ಡದಿದೆ‘ ಎನ್ನುತ್ತಾರೆ ವಿನ್ಯಾಸ್.

‘ನಾವೇನು ಆಯ್ಕೆ ಮಾಡಿದ್ದೇವೆಯೋ ಅದಕ್ಕೆ ಪಾಲಕರ ಬೆಂಬಲವಿದೆ. ಹೀಗಾಗಿ ನಾವು ಬಯಸಿದ್ದನ್ನು ಯಾರ ಅಂಜಿಕೆಯೂ ಇಲ್ಲದೆ ಕೈಗೊಳ್ಳುತ್ತಿದ್ದೇವೆ. ಈ ನಮ್ಮ ವರ್ತನೆ ಹಲವರಿಗೆ ಇರಿಸುಮುರುಸಾಗಬಹುದು. ಡೋಂಟ್ಕೇರ್’ ಎನ್ನುವುದು ಮಾಡೆಲಿಂಗ್ ವಿದ್ಯಾರ್ಥಿನಿ ಶಿಪ್ರಾ ಅಭಿಪ್ರಾಯ.

ಕೃತಕ ಬುದ್ಧಿಮತ್ತೆ (ಎಐ) ಎಲ್ಲಾ ಕ್ಷೇತ್ರದಲ್ಲಿ ಕಾಲಿರಿಸಿರುವ ಸಂದರ್ಭದಲ್ಲಿ ಜೆನ್ ಝೀಗಳು ಶಿಕ್ಷಣ ಮುಗಿಸಿ ಉದ್ಯೋಗದತ್ತ ಮುಖಮಾಡುತ್ತಿದ್ದಾರೆ. ಇಂತಹ ಕಾಲದಲ್ಲಿ ಎಐ ಮೇಲೆ ನಿಯಂತ್ರಣ ಸಾಧಿಸುವಂತಹ ಇಲ್ಲವೇ ಎಐನಿಂದ ಅವಕಾಶಗಳನ್ನೇ ಕಳೆದುಕೊಳ್ಳಬಹುದಾದ ಕಾಲಘಟ್ಟದಲ್ಲಿ ಈ ಪೀಳಿಗೆಯಿದೆ. ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಜೆನ್ ಝೀ ಉದ್ಯಮಗಳಿಗೆ ಉಪಯುಕ್ತವಾಗುತ್ತಾರೆ.

ಯಾರು ಏನೆನ್ನುತ್ತಾರೆ ಜೆನ್ ಝೀ ಬಗ್ಗೆ?

ಕಳೆದ ಮೂವತ್ತು ವರ್ಷಗಳಿಂದ ಮಾಡೆಲಿಂಗ್ ಮತ್ತು ನಟನೆ ಸಂಸ್ಥೆಯನ್ನು ನಡೆಸುತ್ತಿದ್ದೇನೆ. ಹೀಗಾಗಿ ಹಲವು ತಲೆಮಾರುಗಳ ಯುವಪಡೆಯನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಜೆನ್ ಝೀ ಬಹಳಾ ಬಿನ್ನ ಮತ್ತು ಸ್ಪಷ್ಟತೆ ಹೆಚ್ಚು.

- ರವಿ ಹಾಸನ್ ಐಎಫ್ಎಂ ನಟನೆ ಮತ್ತು ಮಾಡೆಲಿಂಗ್ ತರಬೇತಿ ಸಂಸ್ಥೆ ಬೆಂಗಳೂರು

ಈ ತಲೆಮಾರಿನವರ ನಿರ್ವಹಣೆಯು ಸವಾಲು ಮತ್ತು ಅವಕಾಶ ಎರಡನ್ನೂ ಸೃಷ್ಟಿಸಿವೆ. ಔದ್ಯಮಿಕ ಮನೋಭಾವ ಮತ್ತು ತಂತ್ರಜ್ಞಾನದ ನಿರರ್ಗಳತೆ ಹೊಸ ಅವಕಾಶವನ್ನು ತೆರೆದಿದೆ. ಹೀಗಾಗಿ ಶಿಕ್ಷಣದೊಂದಿಗೆ ಭಾವನಾತ್ಮಕ ಬುದ್ಧಿಮತ್ತೆ ನೈತಿಕ ನಿರ್ಧಾರ ಮತ್ತು ನಾಯಕತ್ವ ಕುರಿತ ವೇದಿಕೆಗಳನ್ನು ಇವರಿಗೆ ಕಲ್ಪಿಸಲಾಗುತ್ತಿದೆ. ಆ ಮೂಲಕ ಜಾಗತಿಕ ನಾಗರಿಕರನ್ನಾಗಿ ಮಾಡಲಾಗುತ್ತಿದೆ.

– ಡಾ. ಫಾದರ್ ಜೋಸ್ ಸಿ.ಸಿ. ಕುಲಪತಿ ಕ್ರೈಸ್ಟ್ ವಿಶ್ವವಿದ್ಯಾಲಯ

ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಗ್ರಹಿಕೆಯ ಸಾಮರ್ಥ್ಯ ಹೆಚ್ಚಳವಾಗುತ್ತಿರುವುದರಿಂದ ತಂತ್ರಜ್ಞಾನದ ಎಲ್ಲಾ ಆಯಾಮಗಳಿಂದ ಅವರ ನಿರೀಕ್ಷೆಯನ್ನು ತಲುಪುವುದು ಸವಾಲಿನ ಕೆಲಸವೇ ಆಗಿದೆ. ಡಿಜಿಟಲ್ ತರಗತಿಗಳು ಮುದ್ರಿತ ಪಾಠಗಳು ಕೃತಕ ಬುದ್ಧಿಮತ್ತೆ ಆಧಾರಿತ ಮೌಲ್ಯಮಾಪನ ಮೂಲಕ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ಪ್ರಯತ್ನ ಮಾಡಲಾಗುತ್ತಿದೆ.–

–ಪ್ರೊ. ಜವಾಹರ್ ದೊರೆಸ್ವಾಮಿ ಕುಲಾಧಿಪತಿ ಪಿಇಎಸ್ ವಿಶ್ವವಿದ್ಯಾಲಯ

ಜನರೇಷನ್ ಝೀ ಸ್ವತಂತ್ರ ಸತ್ಯಾನ್ವೇಷಣೆ ಸ್ವಾಯತ್ತತೆ ಬಯಸುವವರು. ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಇವರಿಗೆ ಕರಗತವಾಗಿರುವುದರಿಂದ ಭವಿಷ್ಯದಲ್ಲಿ ಹೊಸ ಅನ್ವೇಷಣೆಗಳು ಈ ತಲೆಮಾರಿನವರಿಂದ ಸಾಧ್ಯ.

- ಡಾ. ಬಿ.ಸಿ. ಭಗವಾನ್, ಕುಲಪತಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ

ಜನರೇಷನ್ ಝೀನಲ್ಲಿ ಅತ್ಯಂತ ಹಿರಿಯರ ವಯಸ್ಸು ಈಗ 25 ವರ್ಷ. ಮುಂದಿನ 15 ವರ್ಷಗಳ ಕಾಲ ಇವರು ಉದ್ಯಮದ ಮುಂಚೂಣಿಯಲ್ಲಿರುತ್ತಾರೆ. ಜ್ಞಾನವನ್ನು ಹೆಚ್ಚಿಸುವ ಹೊಣೆಗಾರಿಕೆಯನ್ನು ಇವರು ಬಯಸುವುದರಿಂದ ಉದ್ಯಮವೂ ಬೆಳವಣಿಗೆ ಕಾಣಲಿದೆ.

– ಶಿವಕುಮಾರ ಎಸ್. ಅಕ್ಕಿ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಟೆಕ್ಮೆರಿಡಿಯನ್

ಒಳನೋಟ ಪರಿಕಲ್ಪನೆ: ಯತೀಶ್ಕುಮಾರ್ ಜಿ.ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.