ಕರ್ನಾಟಕದಲ್ಲಿ ‘ಆಹಾರ ಪಾರ್ಕ್’ಗಳ ಪರ್ವ ಆರಂಭವಾಗಿ ಸುಮಾರು ಎರಡು ದಶಕಗಳು ಕಳೆದಿವೆ. ಸರ್ಕಾರ ಕಡಿಮೆ ದರದಲ್ಲಿ ಭೂಮಿ ಕೊಟ್ಟು, ಅಭಿವೃದ್ಧಿಗಾಗಿ ಪ್ರೋತ್ಸಾಹ ಧನವನ್ನು ನೀಡಿದರೂ ನಿರೀಕ್ಷಿತಮಟ್ಟದಲ್ಲಿ ಆಹಾರ ಪಾರ್ಕ್‌ಗಳು ಯಶಸ್ವಿಯಾಗಿಲ್ಲ. ಉದ್ಯಮಗಳೂ ಇಲ್ಲ, ಉದ್ಯೋಗಗಳೂ ಸೃಷ್ಟಿಯಾಗಿಲ್ಲ. ಇದೊಂದು ವ್ಯರ್ಥ ಪ್ರಯತ್ನವಾಗಿದೆ..
ಬಾಗಲಕೋಟೆ ಫುಡ್ ಪಾರ್ಕ್ ಜಾಗದಲ್ಲಿ ಕುರಿಗಳು ಮೇಯುತ್ತಿರುವುದು
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಅಕ್ಷಯಫುಡ್ ಪಾರ್ಕ್‌ನಲ್ಲಿರುವ ಗೋದಾಮು
ರಾಗಿಗೆ ಸಂಬಂಧಿಸಿದ ಉತ್ಪನ್ನ ತಯಾರಿಕಾ ಘಟಕ ಆರಂಭಿಸಲು ನಿವೇಶನ ಪಡೆದುಕೊಂಡೆ. ಕೆಎಸ್‌ಎಫ್‌ಸಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದೆ. ಸಾಲ ಮಂಜೂರಾಯಿತು. ಆದರೆ, ಹಣ ಖಾತೆಗೆ ಬಂದಿರಲಿಲ್ಲ. ಮುಂದೆ ಹಣ ಬರಬಹುದೆಂದು ತಿಳಿದು, ಸುಮಾರು ₹6 ಲಕ್ಷ ಸ್ವಂತ ಹಣ ಹಾಕಿ ಕಟ್ಟಡ ನಿರ್ಮಾಣ ಆರಂಭಿಸಿದೆ. ಈ ನಡುವೆ ಕೆಎಸ್‌ಎಫ್‌ಸಿಯವರು, ಫುಡ್‌ಪಾರ್ಕ್ ಕಡೆಯಿಂದ ‘ಅಂಡರ್ ಟೇಕನ್’ ಪತ್ರ ತರುವಂತೆ ಕೇಳಿದರು. ಫುಡ್‌ಪಾರ್ಕ್ ನವರು ‘ಅದನ್ನು ನಾವು ಕೊಡುವುದಕ್ಕೆ ಬರುವುದಿಲ್ಲ’ ಎಂದರು. ಹೀಗಾಗಿ ಮಂಜೂರಾದ ಹಣ ಸಿಗಲಿಲ್ಲ, ಉದ್ದಿಮೆ ಆರಂಭವಾಗಲಿಲ್ಲ. ಈಗ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟುತ್ತಿದ್ದೇನೆ ನನ್ನ ಹಾಗೆ ‘ಅತಂತ್ರ’ ಸ್ಥಿತಿಯಲ್ಲಿರುವವರು ಹಲವರಿದ್ದಾರೆ.ರಾಘವೇಂದ್ರ, ಶಿವಮೊಗ್ಗ(ಅಕ್ಷಯ ಫುಡ್‌ಪಾರ್ಕ್‌ನಲ್ಲಿ ನಿವೇಶನ ಪಡೆದವರು)
ಉಪಗುತ್ತಿಗೆ ದಾಖಲೆ ಇಟ್ಟುಕೊಂಡು ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತವೆ. ಆ ದಾಖಲೆಗಳ ಜೊತೆಗೆ ಹೆಚ್ಚುವರಿಯಾಗಿ ನಮ್ಮ ಆಸ್ತಿಯ ಅಡಮಾನ ಮಾಡಿದರೆ ಸಾಲ ಕೊಡುತ್ತಾರೆ. ಸಾಲ ಸಿಗದೆ ಉದ್ದಿಮೆ ಆರಂಭಿಸಲು ಸಾಧ್ಯವಾಗುತ್ತಿಲ್ಲಶರಣು ರಾಂಪೂರ, ಜೇವರ್ಗಿ(ಜೇವರ್ಗಿ ಫುಡ್‌ಪಾರ್ಕ್‌ನಲ್ಲಿ ನಿವೇಶನ ಪಡೆದವರು)
ಜೇವರ್ಗಿ ಫುಡ್‌ಪಾರ್ಕ್‌ಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು. ನಿವೇಶನ ಸಿಕ್ಕವರಿಗೆ ಬ್ಯಾಂಕ್ ಸಾಲ ಸಿಗಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ.ಮಂಜುಳಾ ಭಜಂತ್ರಿ, ಜಿಲ್ಲಾ ಅಧ್ಯಕ್ಷೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಕಲಬುರಗಿ
ಹೊಸ ತಂತ್ರಜ್ಞಾನ, ಅತ್ಯಾಧುನಿಕ ಸೌಲಭ್ಯಗಳು ನಮ್ಮ ಫುಡ್‌ಪಾರ್ಕ್‌ನಲ್ಲಿವೆ. ಆ ಸೌಲಭ್ಯಗಳನ್ನು ರೈತರು ಬಳಸಿಕೊಳ್ಳಬೇಕಿದೆ. ಇಲ್ಲದಿದ್ದರೆ ನಮಗೂ ನಷ್ಟ, ರೈತರಿಗೂ ನಷ್ಟ’ಕೆ.ಎನ್.ರವಿ, ವ್ಯವಸ್ಥಾಪಕ ನಿರ್ದೇಶಕ, ಇನೋವಾ ಅಗ್ರಿ ಬಯೋಪಾರ್ಕ್, ಮಾಲೂರು
ಈಗ ಫುಡ್‌ಪಾರ್ಕ್‌ಗಳು ಒಂದು ಹಂತಕ್ಕೆ ತಲುಪಿವೆ. ಈ ಸಮಯದಲ್ಲಿ ಅಭಿವೃದ್ಧಿಗಾಗಿ ಆರ್ಥಿಕ ನೆರವು ನೀಡುವುದು ಸೂಕ್ತ. ಫುಡ್‌ಪಾರ್ಕ್‌ಗಳಿರುವ ಕ್ಷೇತ್ರಗಳ ಸಚಿವರು, ಶಾಸಕರು ಕೂಡ ಫುಡ್‌ಪಾರ್ಕ್ ಅಭಿವೃದ್ಧಿಗೆ ನೆರವಾಗುವಂತೆ ಕೇಳಿದ್ದಾರೆ. ಇವೆಲ್ಲವನ್ನೂ ಗಮನಿಸಿ, ಹೆಚ್ಚುವರಿ ನೆರವಿನ ಕುರಿತು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುತ್ತೇನೆ.ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ
ಫುಡ್‌ಪಾರ್ಕ್‌ಗಳು ಪ್ರಗತಿಯಲ್ಲಿ ಹಿಂದುಳಿಯಲು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳೇ ನೇರ ಕಾರಣ. ಫುಡ್‌ಪಾರ್ಕ್ ವಿಷಯದಲ್ಲಿ ಸರ್ಕಾರ ತನ್ನ ಕೆಲಸ ಮಾಡುತ್ತಿದೆ. ನಿವೇಶನದಾರರು ಉದ್ಯಮ ಆರಂಭಿಸಲು ಈಗಿರುವ ಕಟು ನೀತಿ ನಿಯಮಗಳನ್ನು ಸಡಿಲಗೊಳಿಸಿ, ನವೋದ್ಯಮಿಗಳ ಬೆಂಬಲಕ್ಕೆ ನಿಲ್ಲಬೇಕು.ಪ್ರಕಾಶ್ ಕಮ್ಮರಡಿಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ
ನಿವೇಶನ ಪಡೆದು, ನಿಯಾಮನುಸಾರ ಉದ್ಯಮ ಆರಂಭಿಸದವರಿಂದ ನಿವೇಶನ ಹಿಂಪಡೆದಿಲ್ಲ. ಈ ಕುರಿತು ಕ್ರಮ ಜರುಗಿಸುವಂತೆ ಕೆಐಎಡಿಬಿಗೆ ಪತ್ರ ಬರೆದಿದ್ದೇವೆ. ಅಕ್ಷಯಫುಡ್‌ಪಾರ್ಕ್‌ನಿಂದ ಉದ್ದಿಮೆದಾರರಿಗೆ ಬ್ಯಾಂಕ್ ಸಾಲ ಪಡೆಯಲು ಶ್ಯೂರಿಟಿ ಕೊಡುವ ಪ್ರಸ್ತಾವನೆ ಇಲ್ಲ. ಕೆಲವು ಬ್ಯಾಂಕ್‌ಗಳು ಸಬ್‌ಲೀಸ್ ಆಧಾರದಲ್ಲಿ ಸಾಲ ಕೊಡುತ್ತಿಲ್ಲ. ಹೆಚ್ಚುವರಿ ಶೂರಿಟಿ ಕೇಳುತ್ತಿದ್ದಾರೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ.ಎಂ.ನಾರಾಯಣಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಅಕ್ಷಯ ಫುಡ್ ಪಾರ್ಕ್, ಹಿರಿಯೂರು
ಗುತ್ತಿಗೆ – ಉಪಗುತ್ತಿಗೆಯ ‘ಫುಡ್‌ಪಾರ್ಕ್’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.