ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಏನಿದು 'ಪಿಎಂ ಸ್ವನಿಧಿ' ಯೋಜನೆ? ಸಾಲ ಪಡೆಯುವುದು ಹೇಗೆ?

Last Updated 9 ಸೆಪ್ಟೆಂಬರ್ 2020, 13:33 IST
ಅಕ್ಷರ ಗಾತ್ರ
ADVERTISEMENT
""

ಕೋವಿಡ್-19 ವ್ಯಾಪಕವಾಗಿ ಹರಡುವುದನ್ನು ತಡೆಯಲೆಂದು ಜಾರಿಗೊಳಿಸಿದಲಾಕ್‌ಡೌನ್‌ ಹಲವರ ಆರ್ಥಿಕ ಪರಿಸ್ಥಿತಿಯನ್ನು ಏರುಪೇರು ಮಾಡಿತು. ಇದೀಗ ಪರಿಸ್ಥಿತಿ ಸಹಜತೆಯತ್ತ ಮರಳುತ್ತಿದೆಯಾದರೂ, ಹಲವರು ಇನ್ನೂ ಲಾಕ್‌ಡೌನ್ ಹೊಡೆತದಿಂದ ಚೇತರಿಸಿಕೊಂಡಿಲ್ಲ.ಲಾಕ್‌ಡೌನ್ ಘೋಷಣೆಯಿಂದಾಗಿ ಬೀದಿ ವ್ಯಾಪಾರವನ್ನೇ ನಂಬಿದ್ದ ಸಾವಿರಾರು ಜನರು ಬೀದಿಗೆ ಬಿದ್ದರು. ಇವರಿಗೆ ಆರ್ಥಿಕವಾಗಿ ಬಂಡವಾಳದ ರೂಪದಲ್ಲಿ ಸಾಲ ನೀಡಲು ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆಯಡಿ ಪಿಎಂ ಸ್ವನಿಧಿ ಯೋಜನೆಯನ್ನು ಪರಿಚಯಿಸಿದೆ.ಜೂನ್ 1ರಿಂದಲೇ ಈ ಯೋಜನೆ ಜಾರಿಯಾಗಿದೆ.

ಏನಿದು ಸ್ವನಿಧಿ ಯೋಜನೆ?

ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿಗಳನ್ನು ಮೀಟರ್‌ ಬಡ್ಡಿ ಮಾಫಿಯಾದಿಂದ ಕಾಪಾಡುವ ಉದ್ದೇಶದಿಂದ ರಾಜ್ಯದಲ್ಲಿ ಈ ಹಿಂದೆ ಜಾರಿಗೆ ತಂದಿದ್ದ ಶೂನ್ಯ ಬಡ್ಡಿದರದ ಸಾಲ ಯೋಜನೆ 'ಬಡವರ ಬಂಧು' ಯೋಜನೆಯ ಮಾದರಿಯಲ್ಲೇ ಕೇಂದ್ರವು ಕೂಡ ಪಿಎಂ ಸ್ವನಿಧಿ ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆಯಡಿ ಬೀದಿಬದಿಯ ವ್ಯಾಪಾರಿಗಳಿಗೆ ₹ 10 ಸಾವಿರ ಸಾಲ ಸಿಗಲಿದ್ದು, ಇದನ್ನು ಒಂದು ವರ್ಷದಮಾಸಿಕ ಕಂತುಗಳಲ್ಲಿ ತೀರಿಸಬೇಕಾಗುತ್ತದೆ.

* ಬಂಡವಾಳಸಾಲದ ಅವಧಿ 1 ವರ್ಷ

* ಅವಧಿಯೊಳಗೆ ಮರುಪಾವತಿ ಮಾಡುವವರಿಗೆ ಬಡ್ಡಿಯಲ್ಲಿ ಶೇ 7ರಷ್ಟು ಸಬ್ಸಿಡಿ

* ತ್ರೈಮಾಸಿಕ ಪಾವತಿಗೂ ಅವಕಾಶ

* ಡಿಜಿಟಲ್ ವಹಿವಾಟಿನ ಮೇಲೆ ಮಾಸಿಕ ಪ್ರೋತ್ಸಾಹ ಕ್ಯಾಶ್ ಬ್ಯಾಕ್

* ಅವಧಿಯೊಳಗೆಸಾಲಮರುಪಾವತಿ ಮಾಡಿದವರಸಾಲದ ಅರ್ಹತೆ ಏರಿಕೆ

* ದೇಶದಾದ್ಯಂತ ನಗರಸ್ಥಳೀಯ ಸಂಸ್ಥೆಗಳನ್ನು ಈ ಯೋಜನೆ ಒಳಗೊಳ್ಳುತ್ತದೆ

pmsvanidhi.mohua.gov.in ವೆಬ್‌ಸೈಟ್

ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ಸ್ವನಿಧಿ ಅರ್ಜಿಯನ್ನು ಪಿಎಂ- ಸ್ವನಿಧಿ ವೆಬ್‌ಸೈಟ್‌pmsvanidhi.mohua.gov.inಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.ಈ ಯೋಜನೆಯಡಿ ವಾಣಿಜ್ಯ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು, ಸ್ವಸಹಾಯ ಬ್ಯಾಂಕುಗಳು ಸಹಾಯ ಒದಗಿಸುತ್ತವೆ. ಇದಕ್ಕಾಗಿ ನೀವು ಯಾವುದೇ ಮೈಕ್ರೋ ಫೈನಾನ್ಸ್ ಸಂಸ್ಥೆಯ ಯಾವುದೇ ಬ್ಯಾಂಕಿಂಗ್ ಪ್ರತಿನಿಧಿ ಅಥವಾ ಏಜೆಂಟರನ್ನು ಸಂಪರ್ಕಿಸಬಹುದು. ಯೋಜನೆ ಕುರಿತ ಮತ್ತಷ್ಟು ಮಾಹಿತಿpmsvanidhi.mohua.gov.inವೆಬ್‌ಸೈಟ್ ಮೂಲಕ ಪಡೆಯಬಹುದು.

ಸಾಲ ಪಡೆಯಲು ಹೀಗೆ ಮಾಡಿ

# pmsvanidhi.mohua.gov.inವೆಬ್‌ಸೈಟ್‌ಗೆ ಭೇಟಿ ನೀಡಿ

# ಅಲ್ಲಿ'Apply for Loan' ಆಯ್ಕೆಯನ್ನು ಕ್ಲಿಕ್ ಮಾಡಿ

# ನಿಮ್ಮ ಮೊಬೈಲ್ ನಂಬರ್‌ ನಮೂದಿಸಿ, ಒಟಿಪಿ ವಿವರ ಗಮನಿಸಿ

#ಬಳಿಕ ತೆರೆದುಕೊಳ್ಳುವ ಅರ್ಜಿಯಲ್ಲಿ ಅಗತ್ಯವಿರುವ ಎಲ್ಲ ಮಾಹಿತಿಯನ್ನು ತುಂಬಿ

ಯಾರು ಅರ್ಹರು?

ಮಾರ್ಚ್ 24, 2020 ಅಥವಾ ಅದಕ್ಕೂ ಮೊದಲಿನಿಂದ ಕಾರ್ಯನಿರ್ವಹಿಸುತ್ತಿರುವವ್ಯಾಪಾರಿಗಳು, ಬೀದಿಬದಿಯ ವ್ಯಾಪಾರಿಗಳು ಅರ್ಹರು. ಈ ಪೈಕಿ ತರಕಾರಿಗಳು, ಹಣ್ಣುಗಳು, ಚಹಾ- ಸ್ನಾಕ್ಸ್, ಬ್ರೆಡ್, ಮೊಟ್ಟೆ, ಬಟ್ಟೆ, ಪುಸ್ತಕಗಳು, ಲೇಖನ ಸಾಮಗ್ರಿಗಳನ್ನು ಮಾರಾಟ ಮಾಡುವವರು ಅರ್ಜಿ ಸಲ್ಲಿಸಬಹುದು.

ಈ ಮೊದಲು ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರವನ್ನು ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ಸಾಲ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಈ ಯೋಜನೆಯಡಿ, ಇತ್ತೀಚೆಗೆ ಸರ್ಕಾರ ಸ್ಥಳೀಯ ಸಂಸ್ಥೆಯೊಂದಿಗೆ ಶಿಫಾರಸು ಪತ್ರ (ಎಲ್‌ಒಆರ್) ವ್ಯವಸ್ಥೆಯನ್ನು ಪರಿಚಯಿಸಿದೆ. ಆದ್ದರಿಂದ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣಪತ್ರವನ್ನು ಹೊಂದಿರದ ಬೀದಿ ಬದಿ ವ್ಯಾಪಾರಿಗಳಿಗೆ ಸಾಲವನ್ನು ಪಡೆಯಬಹುದು. ಸಾಲ ಪಡೆದುಕೊಳ್ಳಲು ಇಚ್ಛಿಸುವವರು ಕೆಲವು ಪೂರಕ ಮಾಹಿತಿ ಹಾಗೂ ಅವರು ಬೀದಿ ವ್ಯಾಪಾರ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷ್ಯ ನೀಡಬೇಕಾಗುತ್ತದೆ.

ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನಗಳು

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯು 2022ರ ಮಾರ್ಚ್‌ವರೆಗೆ ಅನ್ವಯವಾಗಲಿದೆ. ಈ ಯೋಜನೆಯಡಿ 50 ಲಕ್ಷಕ್ಕೂ ಹೆಚ್ಚಿನ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ. ಈ ಯೋಜನೆಯಡಿ ಕೆಲಸ ಪ್ರಾರಂಭಿಸಲು ಕಡಿಮೆ ಬಡ್ಡಿದರದಲ್ಲಿ ₹ 10,000 ವರೆಗೆ ಸಾಲ ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ನೀವು ಸಾಲವನ್ನು ಪಾವತಿಸಿದರೆ, ನಂತರ ಬಡ್ಡಿಯನ್ನು ಶೇ 7ರ ದರದಲ್ಲಿ ಸಬ್ಸಿಡಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಈ ಷರತ್ತುಗಳು ಅನ್ವಯ

ಆರ್ಥಿಕ ನೆರವನ್ನು ನೀಡುವ ವಿಶೇಷ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಜಿಯಲ್ಲಿ 20ಕ್ಕೂ ಹೆಚ್ಚು ಕಾಲಂಗಳನ್ನು ಭರ್ತಿ ಮಾಡಬೇಕು. ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಕೆವೈಸಿ ದಾಖಲೆ, ಆಧಾರ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ವಿವರ ಹಾಗೂ ಸ್ಥಳೀಯ ಸಾಕ್ಷಿದಾರರ ಸಹಿ ಸಹಕೂಡ ಅರ್ಜಿ ಸಲ್ಲಿಸುವಾಗ ಅಗತ್ಯವಿದೆ.

ದೇಶದಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆ? ಎಷ್ಟು ಜನರಿಗೆ ಸಾಲ (ಸೌಲಭ್ಯ) ಮಂಜೂರಾಗಿದೆ?

ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಈವರೆಗೂ ದೇಶದಲ್ಲಿ 10,42,224 ಜನ ಬೀದಿಬದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 3,56,538 ಜನರಿಗೆ ಸಾಲ (ಸೌಲಭ್ಯ) ಮಂಜೂರಾಗಿದೆ. 93,956 ಜನರಿಗೆ ಈವರೆಗೂ ಸಾಲವನ್ನು ವಿತರಿಸಲಾಗಿದೆ.

ರಾಜ್ಯದಲ್ಲಿ ಈವರೆಗೂ 31,588 ಜನ ಬೀದಿಬದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 4,857 ಜನರಿಗೆ ಸಾಲ ಮಂಜೂರಾಗಿದ್ದು, 563 ಜನರಿಗೆ ಈಗಾಗಲೇ ಸಾಲವನ್ನು ವಿತರಿಸಲಾಗಿದೆ. ರಾಜ್ಯದಲ್ಲಿ ಒಟ್ಟಾರೆ 11,002 ಜನರು ಬೀದಿಬದಿ ವ್ಯಾಪಾರಿಗಳಿದ್ದು, ₹ 4.81 ಲಕ್ಷ ಹಣವನ್ನು ಮಂಜೂರು ಮಾಡಲಾಗಿದೆ. ಈ ಪೈಕಿ ₹ 0.4 ಕೋಟಿ ಹಣವನ್ನಷ್ಟೇ ವಿತರಿಸಲಾಗಿದೆ.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು, ಬರಹ: ರಮ್ಯಶ್ರೀ ಜಿ.ಎನ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT