ಸೋಮವಾರ, ಡಿಸೆಂಬರ್ 5, 2022
22 °C

fact check: ಬುರ್ಖಾಧಾರಿ ಮಹಿಳೆಯಿಂದ ಬಾಲಕನ ಅಪಹರಣ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬುರ್ಖಾಧಾರಿ ಮಹಿಳೆಯೊಬ್ಬರು ರಸ್ತೆಬದಿಯಲ್ಲಿ ಭಿಕ್ಷೆ ಬೇಡುವ ಸೋಗಿನಲ್ಲಿ ಬಾಲಕನನ್ನು ಅಪಹರಿಸುವ ವಿಡಿಯೊ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಿಕ್ಷೆ ಬೇಡಿದ ಮಹಿಳೆ, ಆ ಬಾಲಕನಿಗೆ ಮತ್ತು ಬರಿಸುವ ಔಷಧವೊಂದನ್ನು ಸಿಂಪಡಿಸಿದಂತೆ ತೋರುತ್ತದೆ. ಆ ಬಾಲಕ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ತಕ್ಷಣ ಅಲ್ಲಿಗೆ ಬರುವ ಆಟೊದಲ್ಲಿ ಬಾಲಕನನ್ನು ಕರೆದೊಯ್ಯಲಾಗುತ್ತದೆ. ಇವಿಷ್ಟು ದೃಶ್ಯಗಳು ಈ ವಿಡಿಯೊದಲ್ಲಿವೆ. 

ಈ ವಿಡಿಯೊ ಭಾರತಕ್ಕೆ ಸಂಬಂಧಿಸಿದ್ದಲ್ಲ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಈ ಹಿಂದೆ ಹಲವು ಬಾರಿ ಈ ವಿಡಿಯೊ ಬಗ್ಗೆ ಚರ್ಚೆಯಾಗಿತ್ತು. ಇದು ಈಜಿಪ್ಟ್‌ನಲ್ಲಿ ನಡೆದ ಘಟನೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರು ನೋಡಬೇಕು ಎಂಬ ಅಪೇಕ್ಷೆಯಿಂದ ಯುವಕರ ಗುಂಪೊಂದು ಕೃತಕವಾಗಿ ಈ ಸನ್ನಿವೇಶ ಸೃಷ್ಟಿಸಿ ಚಿತ್ರೀಕರಿಸಿದೆ. ಈಜಿಪ್ಟ್‌ನ ಮಾಧ್ಯಮಗಳು ಇದನ್ನು ವರದಿ ಮಾಡಿದ್ದು, ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿತ್ತು. ಆದರೆ, ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸಲು ಈ ವಿಡಿಯೊವನ್ನು ಬಳಸಿಕೊಳ್ಳಲಾಗುತ್ತದೆ ಎಂದು ವೆಬ್‌ಸೈಟ್ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು