ಗುರುವಾರ , ಡಿಸೆಂಬರ್ 1, 2022
24 °C

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತ್ ಜೋಡೊ ಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದಾರೆ ಎನ್ನಲಾದ ಭಾಷಣದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ. ‘ನನಗೆ ಅಧಿಕಾರ ಬೇಕು. ಸತ್ಯದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಕುರ್ಚಿ ಮಾತ್ರ ಮುಖ್ಯ’ ಎಂದು ಅವರು ಹೇಳುತ್ತಿದ್ದಾರೆ ಎನ್ನಲಾದ ದೃಶ್ಯವು ಈ  ವಿಡಿಯೊದಲ್ಲಿದೆ. ಹಲವು ಜನರು ಈ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದು, ರಾಹುಲ್ ಮಾತುಗಳನ್ನು ಕೇಳಿ ಎಂದು ಉಲ್ಲೇಖಿಸಿದ್ದಾರೆ. 

ರಾಹುಲ್ ಅವರು 2021ರ ಡಿಸೆಂಬರ್ 13ರಂದು ಜೈಪುರದಲ್ಲಿ ನಡೆದ ಸಮಾವೇಶದಲ್ಲಿ ಮಾಡಿದ್ದ ಭಾಷಣದ ವಿಡಿಯೊ ಇದಾಗಿದ್ದು, ಅವರು ಬಿಜೆಪಿಯನ್ನು ಉದ್ದೇಶಿಸಿ ಹೇಳಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ‘ಇಂಡಿಯಾಟುಡೇ‘ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ‘ಹಿಂದುತ್ವವಾದಿಗಳಿಗೆ ಏನೇ ಆಗಲಿ ಅಧಿಕಾರವೊಂದೇ ಬೇಕು. ಮಹಾತ್ಮಾ ಗಾಂಧಿ ಅವರು ‘ನನಗೆ ಸತ್ಯ ಬೇಕು. ನಾನು ಅದನ್ನು ಬಯಸುತ್ತೇನೆ. ನನಗೆ ಅಧಿಕಾರ ಬೇಕಿಲ್ಲ’ ಎಂದು ಹೇಳಿದ್ದರು. ಆದರೆ ಬಿಜೆಪಿಯವರು ಗಾಂಧೀಜಿ ಮಾತಿಗೆ ತದ್ವಿರುದ್ಧವಾಗಿ ಮಾತನಾಡುತ್ತಿದ್ದು, ‘ನನಗೆ ಅಧಿಕಾರ ಬೇಕು, ಸತ್ಯದ ಗೊಡವೆ ಬೇಕಿಲ್ಲ’ ಎಂದು ಹೇಳುತ್ತಿದ್ದಾರೆ’ ಎಂಬುದಾಗಿ ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದ್ದರು. ಬಿಜೆಪಿಯನ್ನು ಉಲ್ಲೇಖಿಸಿ ಹೇಳಿದ್ದ ಮಾತುಗಳನ್ನು ರಾಹುಲ್ ತಮ್ಮ ಬಗ್ಗೆಯೇ ಆಡಿರುವ ಮಾತು ಎಂಬುದಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು