ಶುಕ್ರವಾರ, ಮೇ 27, 2022
30 °C

ದೆಹಲಿಯಲ್ಲಿ ಕಾರುಗಳು ಹೊತ್ತಿ ಉರಿದಿದ್ದವೇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವದ ದಿನ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿತ್ತು. ಆ ಸಂದರ್ಭದಲ್ಲಿ ಕಾರುಗಳಿಗೆ ಬೆಂಕಿ ಹತ್ತಿ ಉರಿಯುತ್ತಿದ್ದವು ಎಂಬ ಒಕ್ಕಣೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಲವರು ಇವುಗಳನ್ನು ಶೇರ್ ಮಾಡಿದ್ದಾರೆ.

ಗಲಭೆಯ ದಿನ ಕಾರುಗಳು ಹೊತ್ತಿ ಉರಿದಿದ್ದವೇ ಎಂಬುದನ್ನು ಪರಿಶೀಲಿಸಲು ಲಾಜಿಕಲ್ ಇಂಡಿಯನ್ಸ್ ವೆಬ್‌ಸೈಟ್ ರಿವರ್ಸ್ ಇಮೇಜ್ ಮೊರೆ ಹೋಗಿದೆ. ವೈರಲ್ ಆಗಿರುವ ಮೂರು ಚಿತ್ರಗಳೂ ಸಹ ದೆಹಲಿ ಗಲಭೆಗೆ ಸಂಬಂಧಪಟ್ಟವಲ್ಲ ಎಂಬುದು ಇದರಿಂದ ದೃಢಪಟ್ಟಿದೆ. ಈ ಚಿತ್ರಗಳು 2019ರಲ್ಲಿ ಪುಲ್ವಾಮ ದಾಳಿಯಲ್ಲಿ ಸಿಆರ್‌ಪಿಎಫ್ ಯೋಧರು ಬಲಿಯಾದ ಘಟನೆಯನ್ನು ಖಂಡಿಸಿ ಜಮ್ಮು ಕಾಶ್ಮೀರ ಹಾಗೂ ಇತರೆಡೆ ನಡೆದ ಪ್ರತಿಭಟನೆಗೆ ಸಂಬಂಧಿಸಿವೆ ಎಂದು ವೆಬ್‌ಸೈಟ್ ಸ್ಪಷ್ಟಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು