ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ವೀಳ್ಯದೆಲೆ ಸೇವನೆಯಿಂದ ಕೊರೊನಾ ಕಡಿಮೆಯಾಗುತ್ತದೆಂಬ ಸಾಕ್ಷ್ಯಗಳಿಲ್ಲ

Last Updated 9 ಮೇ 2021, 20:03 IST
ಅಕ್ಷರ ಗಾತ್ರ

ಕೊರೊನಾ ತಡೆಗೆ ಅದನ್ನು ತಿನ್ನಿ, ಇದನ್ನು ತಿನ್ನಿ, ಹಾಗೆ ಮಾಡಿ, ಹೀಗೆ ಮಾಡಿ ಎಂಬ ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ದಿನನಿತ್ಯ ಬರುತ್ತಲೇ ಇವೆ. ‘ಹೆಚ್ಚು ಹೆಚ್ಚು ಚಹಾ ಸೇವಿಸುವವರಿಗೆ ಕೊರೊನಾ ಬರುವುದಿಲ್ಲ’ ಎಂದು ಉತ್ತರ ಭಾರತದ ಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿದೆ. ಇನ್ನೊಂದು ಪತ್ರಿಕೆಯು ‘ವೀಳ್ಯದೆಲೆಗಳ ಸೇವನೆಯಿಂದ ಕೊರೊನಾ ತಡೆಯಬಹುದು’ ಎಂಬ ಲೇಖನವನ್ನು ಪ್ರಕಟಿಸಿದೆ. ಈ ಲೇಖನದ ಪ್ರತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆದರೆ, ಇದು ಯಾವುದೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಚಹಾ ಅಥವಾ ವೀಳ್ಯದೆಲೆ ಸೇವನೆಯಿಂದ ಕೊರೊನಾ ಕಡಿಮೆಯಾಗುತ್ತದೆ ಅಥವಾ ರೋಗ ಬರುವುದನ್ನು ತಡೆಯಬಹುದು ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪಿಐಬಿ ಫ್ಯಾಕ್ಟ್‌ಚೆಕ್‌ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT