ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್ ಚೆಕ್: 1947ಕ್ಕೂ ಮೊದಲು ಕಾಶ್ಮೀರದಲ್ಲಿ ಚಿತ್ರಮಂದಿರ ಇರಲಿಲ್ಲವೇ?

Last Updated 3 ಅಕ್ಟೋಬರ್ 2022, 0:00 IST
ಅಕ್ಷರ ಗಾತ್ರ

ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶ್ರೀನಗರದಲ್ಲಿ ಚಿತ್ರಮಂದಿರವೊಂದನ್ನುಸೆ.20ರಂದು ಉದ್ಘಾಟಿಸಿದರು.‘ಸ್ವಾತಂತ್ರ್ಯಾನಂತರ ಜಮ್ಮು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಚಿತ್ರಮಂದಿರಗಳು ಕಾರ್ಯಾರಂಭ ಮಾಡಿವೆ. ಆರ್‌ಆರ್‌ಆರ್ ಚಿತ್ರವು ಕಾಶ್ಮೀರದಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರ’ ಎಂಬ ಮಾಹಿತಿ ಇರುವ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪೋಸ್ಟರ್‌ನಲ್ಲಿರುವ ಮಾಹಿತಿ ತಪ್ಪಾಗಿದ್ದು, 1932ರಿಂದಲೂ ಕಾಶ್ಮೀರದಲ್ಲಿ ಚಿತ್ರಮಂದಿರಗಳು ಇದ್ದವು ಎಂದು ಲಾಜಿಕಲ್ ಇಂಡಿಯನ್ ವೆಬ್‌ಸೈಟ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. 1980ರ ದಶಕದಲ್ಲಿ ಶ್ರೀನಗರದಲ್ಲಿ ರೀಗಲ್, ನೀಲಂ ಮೊದಲಾದ 9 ಚಿತ್ರಮಂದಿರಗಳಿದ್ದವು. ಕಾಶ್ಮೀರದಲ್ಲಿ ಒಟ್ಟು 15 ಸಿನಿಮಾ ಮಂದಿರಗಳಿದ್ದವು. ಆದರೆ, 90ರ ದಶಕದಲ್ಲಿ ಕಣಿವೆಯಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಿತ್ತು. ಚಿತ್ರಮಂದಿರಗಳ ಮೇಲೆ ಗ್ರೆನೇಡ್ ದಾಳಿ ನಡೆದಿದ್ದರಿಂದ ಅವು ಬಂದ್ ಆಗಿದ್ದವು. ಫಸ್ಟ್‌ಪೋಸ್ಟ್, ಹಿಂದೂಸ್ತಾನ್ ಟೈಮ್ಸ್ ಸೇರಿ ವಿವಿಧ ಪತ್ರಿಕೆಗಳಲ್ಲಿ ಇದನ್ನು ಪುಷ್ಟೀಕರಿಸುವ ಲೇಖನಗಳು ಪ್ರಕಟವಾಗಿವೆ. ಈಗ ಚಿತ್ರಮಂದಿರಗಳಿಗೆ ಮರು ಚಾಲನೆ ಸಿಕ್ಕಿದೆ ಎಂದು ವೆಬ್‌ಸೈಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT