ಭಾರತದಲ್ಲಿ ಈಗ ಕೋವಿಡ್‌ನ ಮೂರನೇ ಅಲೆ ತೀವ್ರವಾಗುತ್ತಿದೆ. ಕೋವಿಡ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ತುರ್ತು ಕ್ರಮ ಘೋಷಿಸಿದೆ. ಎಲ್ಲಾ ರಾಜ್ಯಗಳು ಶಾಲಾ-ಕಾಲೇಜುಗಳನ್ನು ತಕ್ಷಣವೇ ಬಂದ್ ಮಾಡಬೇಕು. ಆನ್‌ಲೈನ್ ತರಗತಿಗಳನ್ನು ಮಾತ್ರ ನಡೆಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಡಿಎನ್‌ಎಸ್ ನ್ಯೂಸ್ ಹೆಸರಿನ ಯುಟ್ಯೂಬ್ ವಾಹಿನಿಯಲ್ಲಿ ವರದಿ ಪ್ರಸಾರ ಮಾಡಲಾಗಿದೆ. ಈ ವರದಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಕ್ಕೂ ಹೆಚ್ಚು ಬಾರಿ ಹಂಚಿಕೆಯಾಗಿದ್ದು, ವೈರಲ್ ಆಗಿದೆ. ಈ ವರದಿಯನ್ನು ಆಧರಿಸಿ ಹಲವರು ಸಂದೇಶ ಕಳುಹಿಸಿದ್ದಾರೆ.

ಇದು ಸುಳ್ಳು ಸುದ್ದಿ. ಭಾರತದಲ್ಲಿ ಕೋವಿಡ್ ಮೂರನೇ ಅಲೆ ಬಂದಿಲ್ಲ, ಅದು ತೀವ್ರತೆಯನ್ನೂ ಪಡೆದಿಲ್ಲ. ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ, ಆನ್‌ಲೈನ್ ತರಗತಿ ಮೊರೆ ಹೋಗಿ ಎಂದು ಕೇಂದ್ರ ಸರ್ಕಾರವು ಯಾವುದೇ ತುರ್ತು ಆದೇಶ ಹೊರಡಿಸಿಲ್ಲ. ಸರ್ಕಾರದ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಈ ಸುಳ್ಳು ಸುದ್ದಿ ಸೃಷ್ಟಿಸಿದ್ದಾರೆ. ಈ ಸುದ್ದಿಯನ್ನು ಯಾರೂ ನಂಬಬೇಡಿ. ಶಾಲಾ-ಕಾಲೇಜುಗಳಿಗೆ ಹೋಗಿ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.