ಬುಧವಾರ, ಸೆಪ್ಟೆಂಬರ್ 28, 2022
21 °C

Fact Check: ತಾತ ನೆಹರೂ ಕುರಿತು ಪ್ರಿಯಾಂಕಾ ಮಾಡಿದ್ದ ಮೂಲ ಟ್ವೀಟ್‌ನಲ್ಲಿ ಏನಿದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಡಿತ್ ಜವಾಹರಲಾಲ್‌ ನೆಹರೂ ಅವರ ಕುರಿತಾಗಿ ಮೊಮ್ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರಿನಲ್ಲಿ ಮಾಡಲಾಗಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್ ವೈರಲ್ ಆಗಿದೆ.

‘ನನ್ನ ತಾತನ ಬಗ್ಗೆ ಒಂದು ಮೆಚ್ಚಿನ ಸಂಗತಿಯಿದೆ. ಪ್ರಧಾನಿಯಾಗಿದ್ದಾಗ ಒಮ್ಮೆ ಅವರು ಕೆಲಸ ಮುಗಿಸಿ ಮಧ್ಯರಾತ್ರಿ 3 ಗಂಟೆಗೆ ಮನೆಗೆ ಬಂದರು. ಆಗ ಅವರ ಕಾವಲುಗಾರ ಸುಸ್ತಾಗಿ ನಿದ್ರೆಗೆ ಜಾರಿದ್ದ. ಅವನ ಮೇಲೆ ಹೊದಿಕೆ ಹೊದಿಸಿದರು ಮತ್ತು ಅವನ ಹೆಂಡತಿ ಇದ್ದ ಕೋಣೆಗೆ ಹೋದರು’ ಎಂಬ ವಿವರ ವೈರಲ್‌ ಆಗಿರುವ ಸ್ಕ್ರೀನ್‌ಶಾಟ್‌ನಲ್ಲಿದೆ.

ಇದು ಟ್ವೀಟ್‌ನ ತಿರುಚಲಾದ ಸ್ಕ್ರೀನ್‌ಶಾಟ್ ಎಂದು ಇಂಡಿಯಾ ಟುಡೇ ಮತ್ತು ದಿ ಕ್ವಿಂಟ್ ವೆಬ್‌ಸೈಟ್‌ಗಳು ವರದಿ ಮಾಡಿವೆ. 2021ರ ನವೆಂಬರ್‌ 14ರಂದು ಪ್ರಿಯಾಂಕಾ ಅವರು ನೆಹರೂ ಕುರಿತು ಟ್ವೀಟ್ ಮಾಡಿದ್ದರು. ಮೂಲ ಟ್ವೀಟ್‌ನಲ್ಲಿ, ‘ಪ್ರಧಾನಿಯಾಗಿದ್ದಾಗ ಒಮ್ಮೆ ಅವರು ಕೆಲಸ ಮುಗಿಸಿ ಮಧ್ಯರಾತ್ರಿ 3 ಗಂಟೆಗೆ ಮನೆಗೆ ಬಂದರು. ಆಗ ಅವರ ಕಾವಲುಗಾರ ಸುಸ್ತಾಗಿ ನಿದ್ರೆಗೆ ಜಾರಿದ್ದ. ಅವನ ಮೇಲೆ ಹೊದಿಕೆ ಹೊದಿಸಿದರು. ಅವನ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಒರಗಿಕೊಂಡರು’ ಎಂದಷ್ಟೇ ಇದೆ. ಕೊನೆಯ ಸಾಲನ್ನು ‘ಅವನ ಹೆಂಡತಿ ಇದ್ದ ಕೋಣೆಗೆ ಹೋದರು’ ಎಂಬುದಾಗಿ ತಿರುಚಿ, ಟ್ವೀಟ್‌ನ ಸ್ಕ್ರೀನ್‌ಶಾಟ್ ಸೃಷ್ಟಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು