ಗುರುವಾರ , ಜೂನ್ 4, 2020
27 °C

ಫ್ಯಾಕ್ಟ್‌ಚೆಕ್ | ಅಸ್ಸಾಂನಲ್ಲಿ ಕೋವಿಡ್–19 ಪ್ರಕರಣಗಳು ವರದಿಯಾಗದಿರುವುದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಅಸ್ಸಾಂ ಜನರ ರೋಗನಿರೋಧಕ ಶಕ್ತಿಯಿಂದಾಗಿ ಅಲ್ಲಿ ಒಂದೂ ಕೋವಿಡ್ ಪ್ರಕರಣ ದಾಖಲಾಗಿಲ್ಲ. ಇಡೀ ಭಾರತದಲ್ಲಿ ಯಾವೊಬ್ಬ ಅಸ್ಸಾಮಿ ಜನಾಂಗದ ವ್ಯಕ್ತಿಗೂ ಸೋಂಕು ತಗುಲಿಲ್ಲ. ಭಾರತದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಯೊಬ್ಬರು ಈ ವಿಶೇಷತೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ಅಸ್ಸಾಮಿಗರ ರೋಗನಿರೋಧಕ ಗುಣದ ಬಗ್ಗೆ ಐಸಿಎಂಆರ್ ಅಧ್ಯಯನ ಕೈಗೊಳ್ಳಲಿದೆ’ ಎಂದು ವ್ಯಕ್ತಿಯೊಬ್ಬರು ಮಾಡಿದ್ದ ಟ್ವೀಟ್ ವೈರಲ್ ಆಗಿತ್ತು.

ಆದರೆ ಜನಾಂಗೀಯ ಗುಣದ ಕುರಿತಂತೆ ಸದ್ಯಕ್ಕೆ ಯಾವದೇ ಅಧ್ಯಯನ ಕೈಗೊಂಡಿಲ್ಲ ಎಂದು ಐಸಿಎಂಆರ್ ಡಿಜಿ ಪ್ರೊ. ಬಲರಾಮ್ ಭಾರ್ಗವ ಸ್ಪಷ್ಟಪಡಿಸಿದ್ದಾರೆ. ‘ಯಾವುದೇ ಜನಾಂಗ, ಜಾತಿ, ಧರ್ಮ, ಭಾಷೆ, ಗಡಿಗಳೆನ್ನದೆ ಎಲ್ಲರ ಮೇಲೂ ಸೋಂಕು ದಾಳಿ ಮಾಡಬಲ್ಲದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಎಚ್ಚರಿಸಿದ್ದರು. ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಪಿಐಬಿ ಪ್ರಕಟಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು