ಶನಿವಾರ, ಡಿಸೆಂಬರ್ 4, 2021
24 °C

ಫ್ಯಾಕ್ಟ್‌ ಚೆಕ್‌ : ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ತೆಗೆಯಲಾಗಿರುವ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ತೆಗೆಯಲಾಗಿರುವ ಚಿತ್ರವೊಂದು ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಶೇರ್‌ ಆಗಿತ್ತು. ಪೆಂಡಾಲ್‌ನ ಒಂದು ಬದಿಯಲ್ಲಿ ಹಾಕಿರುವ ಫಲಕದಲ್ಲಿ ನಮಾಜಿನ ವೇಳಾಪಟ್ಟಿಯನ್ನು ನಮೂದಿಸಲಾಗಿದೆ. ‘ಇದು ಪಶ್ಚಿಮ ಬಂಗಾಳದ ದುರ್ಗಾದೇವಿ ಪೆಂಡಾಲ್‌ ಒಂದರ ಚಿತ್ರ. ನಮಾಜ್‌ ನಡೆಯುವ ಸಮಯದಲ್ಲಿ ಹಿಂದೂಗಳು ದುರ್ಗಾದೇವಿಗೆ ಪ್ರಾರ್ಥನೆ ಸಲ್ಲಿಸಬಾರದು ಎಂದು ಆದೇಶಿಸಲಾಗಿದೆ’ ಎಂದು ಈ ಚಿತ್ರಕ್ಕೆ ಅಡಿಬರಹ ನೀಡಲಾಗಿದೆ.

ಇದು ಪಶ್ಚಿಮ ಬಂಗಾಳದಲ್ಲಿ ತೆಗೆಯಲಾಗಿರುವ ಫೋಟೊ ಅಲ್ಲ ಎಂದು ಆಲ್ಟ್‌ ನ್ಯೂಸ್‌ ತಿಳಿಸಿದೆ. ಈ ಫಲಕದ ಕೆಳಗೆ ‘ಉತ್ತರ ಸರ್ಬೋಜೋನಿಕ್‌ ಪೂಜಾ ಕಮಿಟಿ’ ಎಂದು ಬರೆಯಲಾಗಿದೆ. ಈ ಸಮಿತಿ ಇರುವುದು ಬಾಂಗ್ಲಾದೇಶದ ಢಾಕಾದಲ್ಲಿ. ನಮಾಜ್‌ ನಡೆಯುವ ಸಮಯದಲ್ಲಿ ದುರ್ಗಾದೇವಿ ಪೆಂಡಾಲ್‌ನಲ್ಲಿ ಸಂಗೀತ ಮೊಳಗಿಸಬಾರದು ಎಂಬ ಕಾರಣಕ್ಕೆ ನಮಾಜಿನ ವೇಳಾಪಟ್ಟಿಯನ್ನು ಪೆಂಡಾಲ್‌ನಲ್ಲಿ ಹಾಕಲಾಗಿತ್ತು ಎಂದು ವರದಿ ಆಗಿರುವುದು ತಿಳಿದುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು