ಮಂಗಳವಾರ, ಸೆಪ್ಟೆಂಬರ್ 28, 2021
22 °C

ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪುಹಣ ಹೊಂದಿರುವವರ ಹೆಸರು ವಿಕಿಲೀಕ್ಸ್ ಪ್ರಕಟಿಸಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Viral message

ನವದೆಹಲಿ: ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಹೊಂದಿರುವ  ಭಾರತದ 24 ರಾಜಕಾರಣಿ ಮತ್ತು ಉದ್ಯಮಿಗಳ ಹೆಸರನ್ನು ವಿಕಿಲೀಕ್ಸ್ ಪ್ರಕಟಿಸಿದೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.


ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ಸಂದೇಶ (ಕೃಪೆ: ಬೂಮ್‌ಲೈವ್)

ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರ ಮೊದಲ ಪಟ್ಟಿಯನ್ನು ವಿಕಿಲೀಕ್ಸ್ ಪ್ರಕಟಿಸಿದೆ. ಮೊದಲ 24 ನಾಲ್ಕು ಹೆಸರುಗಳು ಹೀಗಿವೆ ಎಂದಿರುವ ಸಂದೇಶದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ  ಮೋಹನ್ ಭಾಗವತ್,  ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ,  ಖ್ಯಾತ ಉದ್ಯಮಿಗಳಾದ ಮುಕೇಶ್ ಅಂಬಾನಿ,  ಅಮಿತ್ ಶಾ, ಸ್ಮೃತಿ ಇರಾನಿ, ಲಾಲ್ ಕೃಷ್ಣ ಅಡ್ವಾಣಿ,  ಅರುಣ್ ಜೇಟ್ಲಿ ಮೊದಲಾದವರ ಹೆಸರಿದೆ.

ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದ ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಹೊಂದಿದವರ ಪಟ್ಟಿಯಲ್ಲಿ ಕರ್ನಾಟಕದ ಕಾಂಗ್ರೆಸ್ ನೇತಾರ ಕೆ.ಜೆ . ಜಾರ್ಜ್, ಅಸಾವುದ್ದೀನ್ ಒವೈಸಿ,  ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿಯವರ ಹೆಸರು ಅಗ್ರ ಸ್ಥಾನದಲ್ಲಿದೆ.  30 ಜನರ ಹೆಸರಿರುವ ಈ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ಪ್ರಣವ್ ಮುಖರ್ಜಿ, ಚಿದಂಬರಂ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಅಹ್ಮದ್ ಪಟೇಲ್ , ಮನಮೋಹನ್ ಸಿಂಗ್,  ಮಾಯಾವತಿ ಮತ್ತು ರಾಹುಲ್ ಗಾಂಧಿ ಹೆಸರು ಇದೆ.

ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಶೇರ್ ಆದ ಹೊಸ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಶೋಕ್ ಚೌಹಾಣ್, ದಿಗ್ವಿಜಯ್ ಸಿಂಗ್ ಮೊದಲಾದವರ ಹೆಸರು ಇದೆ.
 
2011ರಿಂದಲೇ ಈ ಪಟ್ಟಿ ವೈರಲ್ 
ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಹೊಂದಿದವರ ಪಟ್ಟಿ 2011ರಿಂದಲೇ ವೈರಲ್ ಆಗಿದ್ದು, ಇದು ಬೇರೆ ಬೇರೆ ಹೆಸರುಗಳೊಂದಿಗೆ ಕಾಣಿಸಿಕೊಳ್ಳುತ್ತಲೇ ಇದೆ.

 
2014ರಲ್ಲಿ ಹರಿದಾಡಿದ ಸಂದೇಶದಲ್ಲಿ 24 ಮಂದಿಯ ಹೆಸರಿತ್ತು. ಈ ಪಟ್ಟಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಹೆಸರು ಸೇರಿಸಲಾಗಿತ್ತು.
 2016 ಮತ್ತು 2017ರಲ್ಲಿ ವೈರಲ್ ಆದ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಇದೆ.

ಫ್ಯಾಕ್ಟ್‌ಚೆಕ್ 
 ವಿಕಿಲೀಕ್ಸ್  ಕಪ್ಪು ಹಣ ಹೊಂದಿದವರ ಪಟ್ಟಿ ಬಿಡುಗಡೆ ಮಾಡಿದೆ ಎಂದು ಹೇಳುವ ಈ ಸಂದೇಶದ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್‌ಚೆಕ್ ಮಾಡಿದೆ. ವಿಕಿಲೀಕ್ಸ್ ಈ ರೀತಿ ಪಟ್ಟಿ ಬಿಡುಗಡೆ ಮಾಡಿರುವ ಬಗ್ಗೆ ಎಲ್ಲಿಯೂ ವರದಿ ಆಗಿಲ್ಲ. ವಿಕಿಲೀಕ್ಸ್‌ನ  ಅಧಿಕೃತ ಟ್ವಿಟರ್ ಖಾತೆಯಲ್ಲಿ ಆಗಲೀ ವೆಬ್‌ಸೈಟ್‌ನಲ್ಲಾಗಲೀ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. 

2011ರಲ್ಲಿ ವೈರಲ್ ಆಗಿದ್ದ ಪಟ್ಟಿ ಫೇಕ್ ಎಂದು ವಿಕಿಲೀಕ್ಸ್ ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು