‘ಕಾಶ್ಮೀರದ ಶ್ರೀನಗರದಲ್ಲಿ ಬರೋಬ್ಬರಿ 32 ವರ್ಷಗಳ ನಂತರ ಕೃಷ್ಣಜನ್ಮಾಷ್ಟಮಿ ನಡೆಯುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಮಾತ್ರ ಸಾಧ್ಯವಾಯಿತು’ ಎಂಬ ವಿವರ ಇರುವ ಟ್ವೀಟ್ ಮತ್ತು ಫೇಸ್ಬುಕ್ ಪೋಸ್ಟ್ಗಳು ವೈರಲ್ ಆಗಿವೆ. ಈ ಟ್ವೀಟ್ ಮತ್ತು ಪೋಸ್ಟ್ಗಳ ಜತೆಗೆ ಕೃಷ್ಣಜನ್ಮಾಷ್ಟಮಿಯ ವಿಡಿಯೊ ಸಹ ವೈರಲ್ ಆಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರ ಪುತ್ರ ಶೌರ್ಯ ಡೊಭಾಲ್ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. ಸುದರ್ಶನ ಟಿವಿಯ ಸುರೇಶ್ ಚೌಹಾಣ್ಕೆ ಮತ್ತು ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ ಸಹ ಇದನ್ನು ಪ್ರತಿಪಾದಿಸಿವೆ.

ಆದರೆ ಇದು ಸುಳ್ಳು ಸುದ್ದಿ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ‘32 ವರ್ಷಗಳಲ್ಲಿ ಕೃಷ್ಣ ಜನ್ಮಾಷ್ಟಮಿ ನಡೆದದ್ದು ಇದೇ ಮೊದಲು ಎಂಬ ಪ್ರತಿಪಾದನೆಯಲ್ಲಿ ಹುರುಳಿಲ್ಲ. ಬಿಜೆಪಿಯ ಹಲವು ನಾಯಕರು ಈ ಹಿಂದೆಯೂ ಇಂತಹ ವಿಚಾರಗಳನ್ನೇ ಪ್ರತಿಪಾದಿಸಿದ್ದರು. ಆದರೆ, ಕಾಶ್ಮೀರದಲ್ಲಿ, 32 ವರ್ಷಗಳಿಂದಲೂ ಕೃಷ್ಣ ಜನ್ಮಾಷ್ಟಮಿ ನಡೆಯುತ್ತಲೇ ಇದೆ ಎಂಬುದಕ್ಕೆ ಸುದ್ದಿ ಸಂಸ್ಥೆಗಳ ಫೋಟೊ ಲೈಬ್ರರಿಯಲ್ಲಿ ಹಲವು ಚಿತ್ರಗಳು ಲಭ್ಯವಿವೆ. ಗೆಟ್ಟಿ ಇಮೇಜ್, ರಾಯಿಟರ್ಸ್, ಪಿಟಿಐ ಮತ್ತು ಅಲಾಮಿ ಸ್ಟಾಕ್ ಫೋಟೋಸ್ನಲ್ಲಿ ಹಲವು ಚಿತ್ರಗಳು ಲಭ್ಯವಿವೆ. ಹೀಗಾಗಿ ಈ ಪ್ರತಿಪಾದನೆ ಒಂದು ಸುಳ್ಳು ಸುದ್ದಿ’ ಎಂದು ಆಲ್ಟ್ನ್ಯೂಸ್ ಫ್ಯಾಕ್ಟ್ಚೆಕ್ನಲ್ಲಿ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.