ಸೋಮವಾರ, ಜೂನ್ 21, 2021
29 °C

ಫ್ಯಾಕ್ಟ್‌ಚೆಕ್‌ | ಪ್ರಧಾನಿ ಮೋದಿ 2022ರ ಚುನಾವಣೆ ಬಗ್ಗೆ ಯೋಗಿಗೆ ಶುಭ ಹಾರೈಸಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ನೀವು ಹಾಗೂ ನಿಮ್ಮ ತಂಡ ನೀಡಿದ ಕೊಡುಗೆಯನ್ನು ಶ್ಲಾಘಿಸುತ್ತೇನೆ. ರಾಮಮಂದಿರ ನಿರ್ಮಾಣದ ಮೂಲಕ ಹಿಂದೂ ರಾಷ್ಟ್ರದ ಕನಸು ಈಡೇರುತ್ತಿದೆ. ಮುಂದಿನ 2022ರ ಚುನಾವಣೆಯಲ್ಲಿ ಜಯ ಸಿಗಲಿ ಎಂದು ಹಾರೈಸುತ್ತೇನೆ’ ಎಂಬ ಅರ್ಥದ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಬರೆದಿದ್ದಾರೆ ಎನ್ನಲಾಗಿದೆ. ಈ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಶೇರ್ ಆಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಅವರಿಗೆ ಪತ್ರ ಬರೆದಿರುವುದು ನಿಜ. ಆದರೆ ಪತ್ರದಲ್ಲಿ ಇರುವ ವಿಷಯವೇ ಬೇರೆ. ಯೋಗಿ ಆದಿತ್ಯನಾಥ ಅವರ ತಂದೆಯವರಿಗೆ ಶ್ರದ್ಧಾಂಜಲಿ ಸೂಚಿಸಿ ಪ್ರಧಾನಿ ಪತ್ರ ಬರೆದಿದ್ದರು. ಈ ಪತ್ರವನ್ನೇ ಹಿಂದೂ ರಾಷ್ಟ್ರ ನಿರ್ಮಾಣ ಕುರಿತ ಪತ್ರ ಎಂದು ತಪ್ಪಾಗಿ ಅರ್ಥೈಸಿ ಹಂಚಿಕೊಳ್ಳಲಾಗುತ್ತಿದೆ ಎಂದು ಲಾಜಿಕಲ್ ಇಂಡಿಯನ್ಸ್ ಫ್ಯಾಕ್ಚ್ ಚೆಕ್ ವೇದಿಕೆ ಸ್ಪಷ್ಟಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು