ಶುಕ್ರವಾರ, ಆಗಸ್ಟ್ 14, 2020
27 °C

ಪಿ.ಜಿ ಸೀಟು ಹಂಚಿಕೆ, ಕೌನ್ಸೆಲಿಂಗ್ ಕುರಿತು ಸುತ್ತೋಲೆ ಹೊರಡಿಸಿದೆಯೇ ಕೇಂದ್ರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೊರೊನಾ ವೈರಸ್ ದೇಶವನ್ನು ಬಾಧಿಸುತ್ತಿರುವ ಈ ಸಮಯದಲ್ಲೇ ಕೌನ್ಸೆಲಿಂಗ್‌ ನಡೆಸುವ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವೊಂದನ್ನು ಕಳುಹಿಸಿದೆ. ಆನ್‌ಲೈನ್ ಕೌನ್ಸೆಲಿಂಗ್ ಹಾಗೂ ಸ್ನಾತಕೋತ್ತರ ಪದವಿ (ಪಿ.ಜಿ) ಸೀಟು (ಎಂಎಸ್/ಎಂಡಿ/ಎಂಎಸ್‌ಡಿ/ಡಿಪ್ಲೊಮಾ) ಹಂಚಿಕೆ ಕುರಿತು ಪತ್ರದಲ್ಲಿ ಉಲ್ಲೇಖಿಸಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಇಲಾಖೆ ಪ್ರಸ್ತಾಪಿಸಿದೆ. ಕೌನ್ಸೆಲಿಂಗ್ ವೇಳೆ ಕೋವಿಡ್‌–19 ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದೆ’ ಎಂಬ ವದಂತಿ ಹರಿದಾಡುತ್ತಿದೆ.

ಆದರೆ, ಆನ್‌ಲೈನ್ ಕೌನ್ಸೆಲಿಂಗ್ ಅಥವಾ ಪಿ.ಜಿ ಸೀಟು ಹಂಚಿಕೆ ಕುರಿತು ಮಾಹಿತಿ ನೀಡುವ ಸುತ್ತೋಲೆಯೇ ನಕಲಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತಂಡ ಹೇಳಿದೆ. ಆರೋಗ್ಯ ಸಚಿವಾಲಯ ಅಂತಹ ಪತ್ರವನ್ನು ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು