ದಂಟಿನ ಸೊಪ್ಪು ಹೆಚ್ಚಾಗಿ ಭಾರತದಲ್ಲಿ ಕಂಡು ಬರುತ್ತದೆ. ಅದರಲ್ಲಿಯೂ ಮಳೆಗಾಲದಲ್ಲಿ ಈ ಸೊಪ್ಪನ್ನು ಹೆಚ್ಚು ಬೆಳೆಯಲಾಗುತ್ತದೆ. ಈ ಸೊಪ್ಪು ಪ್ರೊಟೀನ್, ಮಿನರಲ್ಸ್, ವಿಟಮಿನ್ ಎ ಮತ್ತು ಸೀ, ಐರನ್, ಪೊಟಾಷಿಯಮ್ ಹಾಗೂ ಸಲ್ಫರ್ ಹೊಂದಿರುತ್ತದೆ.

ಶತಮಾನಗಳ ಹಿಂದೆ ಗ್ರೀಸ್ ದೇಶದಲ್ಲಿ ಈ ಸೊಪ್ಪನ್ನು ಪವಿತ್ರ ಎಂದು ನಂಬಲಾಗಿತ್ತು. ದೇವರ ಮೂರ್ತಿಗಳ ಅಲಂಕಾರಕ್ಕೆಂದು ಈ ಸೊಪ್ಪನ್ನು ಬಳಸಲಾಗುತ್ತಿತ್ತು. ದಂಟಿನ ಸೊಪ್ಪಿಗೆ ವಿಶೇಷ ಗುಣಗಳಿದ್ದವು, ಗಾಯಗಳನ್ನು ವಾಸಿ ಮಾಡುವ ಗುಣಗಳು ಇದ್ದವು.

ಉಪಯೋಗಗಳು-
* ಜೀರ್ಣಶಕ್ತಿ ಹೆಚ್ಚಿಸುತ್ತದೆ.

*ಹೆಂಗಸರಿಗೆ ಒಳ್ಳೆಯದು

*ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ತಲೆಯ ಬುಡಕ್ಕೆ, ಕೂದಲಿಗೆ ಹಚ್ಚಿದರೆ ತಂಪು ಉಂಟಾಗುತ್ತದೆ. ಇದು ಒಳ್ಳೆಯ ಕಂಡೀಶನರ್ ಕೂಡ.

* ಬಾಣಂತಿಯರಿಗೆ ಹೆಚ್ಚು ಹಾಲು ಬರಲು ಇದು ಉಪಯುಕ್ತ.

* ಎಲೆಗಳ ರಸವು ರಕ್ತವನ್ನು ಶುದ್ಧೀಕರಿಸುತ್ತದೆ.

* ಹೊಟ್ಟೆ ಹಸಿವನ್ನು ಹೆಚ್ಚಿಸುತ್ತದೆ.

* ಅಮರಾಂತಸ್ ಕೌಡಾಟಸ್ ಎಂಬ ಬಗೆಯ ದಂಟಿನ ಬೀಜಗಳಲ್ಲಿ ಕ್ಯಾಲ್ಶಿಯಮ್ ಹೆಚ್ಚಾಗಿ ಇರುತ್ತದೆ. ಇದು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.