ಭಾನುವಾರ, ಮೇ 22, 2022
29 °C

ವಿಡಿಯೊ: 30 ಮೊಟ್ಟೆಗಳ ಬೃಹತ್‌ ರೋಲ್‌ ತಿಂದಿದ್ದೀರಾ?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನೋಯ್ಡಾ: ಒಂದು ಅಥವಾ ಎರಡು ಮೊಟ್ಟೆಗಳನ್ನು ಹಾಕಿದ 'ಎಗ್‌ ರೋಲ್‌' ತಿಂದಿರುತ್ತೀರಿ. ಆದರೆ 30 ಮೊಟ್ಟೆಗಳನ್ನು ಹಾಕಿದ ರೋಲ್‌ ತಿಂದಿದ್ದೀರಾ? ಹಾಗೊಂದು ಎಗ್‌ ರೋಲ್‌ ಮಾಡಲು ಸಾಧ್ಯವೇ?

ನೋಯ್ಡಾದ ಬ್ರಹ್ಮಪುತ್ರ ಮಾರುಕಟ್ಟೆಯಲ್ಲಿ ಬೀದಿ ವ್ಯಾಪಾರಿಯೊಬ್ಬ 30 ಮೊಟ್ಟೆಗಳನ್ನು ಸೇರಿಸಿ ರೋಲ್‌ ತಯಾರಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಗಮನಸೆಳೆದಿದೆ. @oye.foodieee ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಎಲೆಕೋಸು, ಈರುಳ್ಳಿ, ಕ್ಯಾರೋಟ್‌ ಮತ್ತಿತರ ಪದಾರ್ಥಗಳನ್ನು ದೊಡ್ಡ ತವಾದ ಮೇಲೆ ಹಾಕಿ ರೋಲ್‌ ಸಿದ್ಧಪಡಿಸುತ್ತಿರುವುದು ವಿಡಿಯೊದಲ್ಲಿದೆ.

ಈ ವಿಡಿಯೊವನ್ನು 54 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಸುಮಾರು 3.15 ಲಕ್ಷ ಲೈಕ್ಸ್‌ಗಳು ಬಂದಿವೆ.

ಈ ನಡುವೆ ಇಂತಹ ಬೃಹತ್‌ ಎಗ್‌ ರೋಲ್‌ಗಳು ಆರೋಗ್ಯಕ್ಕೆ ಹಾನಿಕರ ಮತ್ತು ಆಹಾರ ವ್ಯರ್ಥ ಎಂದು ಕೆಲವರು ಕಮೆಂಟ್‌‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು