ಶೇಂಗಾ ಡ್ರಿಂಕ್

ಬೇಕಾಗುವ ಸಾಮಗ್ರಿ: ಹುರಿದು, ಸಿಪ್ಪೆ ತೆಗೆದ ಶೇಂಗಾ ಬೀಜ 1 ಕಪ್, ಗೋಡಂಬಿ 6, ಬಾದಾಮಿ 6, ಕೆಂಪು ಕಲ್ಲುಸಕ್ಕರೆ ಪುಡಿ 1/4 ಕಪ್.

ಮಾಡುವ ವಿಧಾನ: ಗೋಡಂಬಿ, ಬಾದಾಮಿಗಳನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು, ಶೇಂಗಾದೊಂದಿಗೆ ತರಿತರಿಯಾಗಿ ಅರೆದು ನಂತರ ಕಲ್ಲುಸಕ್ಕರೆ ಪುಡಿ ಸೇರಿಸಿ ಒಂದೆರಡು ಸುತ್ತು ಅರೆದರೆ ಸ್ವಾದಿಷ್ಟಭರಿತ ಶೇಂಗಾ ಡ್ರಿಂಕ್ ಪೌಡರ್ ಸಿದ್ಧ. ಇದನ್ನು ಒಂದು ಲೋಟ ಹಾಲಿಗೆ ಒಂದು ಚಮಚ ಸೇರಿಸಿ, ಸೇವಿಸಬಹುದು.

ಕ್ಯೂಬ್ಸ್

ಬೇಕಾಗುವ ಸಾಮಗ್ರಿ: ಹುರಿದು ಸಿಪ್ಪೆ ಬಿಡಿಸಿದ ಶೇಂಗಾ ಬೀಜ 1 ಕಪ್ ಮೈದಾಹಿಟ್ಟು 1/2 ಕಪ್, ಸಕ್ಕರೆ ಪುಡಿ 2 ಕಪ್, ತುಪ್ಪ 2 ಕಪ್.

ಮಾಡುವ ವಿಧಾನ: ಶೇಂಗಾ ಬೀಜವನ್ನು ಪುಡಿಮಾಡಿಕೊಂಡು, ಅದರ ಜೊತೆ ಮೈದಾ, ಸಕ್ಕರೆ ಪುಡಿ ಸೇರಿಸಿ ಒಂದು ಸುತ್ತು ಅರೆಯಿರಿ. ಈ ಮಿಶ್ರಣವನ್ನು ಜರಡಿ ಹಿಡಿದುಕೊಳ್ಳಿ. ದಪ್ಪ ತಳದ ಬಾಣಲೆಯಲ್ಲಿ, ಸಣ್ಣ ಉರಿಯಲ್ಲಿ ತುಪ್ಪ ಕರಗಿಸಿ ಅರೆದ ಮಿಶ್ರಣವನ್ನು ಸೇರಿಸಿ ಕೈಯಾಡುತ್ತಿರಿ. ಆಗಾಗ ಮೇಲ್ತುಪ್ಪ ಹಾಕಿ ಗೊಟಾಯಿಸಿ. ಮಿಶ್ರಣ ಬಾಣಲೆ ಬಿಟ್ಟು ಬರುವಾಗ ಜಿಡ್ಡು ಹಾಕಿದ ತಟ್ಟೆಗೆ ಸುರಿವಿ ಕ್ಯೂಬ್ ಆಕಾರಕ್ಕೆ ಕತ್ತರಿಸಿ.

ಉಂಡೆ

ಬೇಕಾಗುವ ಸಾಮಗ್ರಿ: ಹುರಿದು ಸಿಪ್ಪೆ ಬಿಡಿಸಿದ ಶೇಂಗಾ ಬೀಜ 1 ಕಪ್ , ಕಂದುಸಕ್ಕರೆ 1/2 ಕಪ್.

ಮಾಡುವ ವಿಧಾನ: ಬಾಣಲೆಯಲ್ಲಿ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿಡಿ. ಸಕ್ಕರೆ, ಉಂಡೆ ಪಾಕದ ಹದಕ್ಕೆ ಬಂದ ಕೂಡಲೇ ಉರಿ ಆರಿಸಿ, ಶೇಂಗಾ ಬೀಜಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಅಗಲವಾದ ತಟ್ಟೆಗೆ ವರ್ಗಾಯಿಸಿ. ನಂತರ ಅಂಗೈಯಲ್ಲಿ ತುಪ್ಪ ಸವರಿಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿ.

ಸಲಾಡ್

ಬೇಕಾಗುವ ಸಾಮಗ್ರಿ: ಬೇಯಿಸಿದ ರಾಜ್ಮಾ ಕಾಳು 1/2 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ 1/2 ಕಪ್, ತಿರುಳು ತೆಗೆದು ಹೆಚ್ಚಿದ ಸೌತೆಕಾಯಿ 1/2ಕಪ್, ನಿಂಬೆರಸ 1/4 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಚಾಟ್ ಮಸಾಲಾ 1 ಚಮಚ.

ಮಿಕ್ಸಿಂಗ್ ಬೌಲ್ ಗೆ ರಾಜ್ಮಾ ಕಾಳು, ಈರುಳ್ಳಿ, ಸೌತೆಕಾಯಿ, ಉಪ್ಪು ಹಾಕಿ ಮಿಶ್ರಣ ಮಾಡಿ, ನಿಂಬೆರಸ ಸೇರಿಸಿ, ಕೊತ್ತಂಬರಿ ಸೊಪ್ಪು ಉದುರಿಸಿ.

ರಾಜ್ಮಾ ಗುಗ್ಗರಿ

ಬೇಕಾಗುವ ಸಾಮಗ್ರಿ: ರಾಜ್ಮಾ ಕಾಳು 1 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ 1/4 ಕಪ್, ನಿಂಬೆ ರಸ 1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ, ಒಣಮೆಣಸಿನಕಾಯಿ 2, ಚಿಟಿಕೆ ಇಂಗು.

ಮಾಡುವ ವಿಧಾನ: ರಾಜ್ಮಾ ಕಾಳನ್ನು 7-8 ಗಂಟೆಗಳ ಕಾಲ ನೆನೆಸಿ. 1 ಕಪ್ ನೀರು, 1 ಚಮಚ ಎಣ್ಣೆ ಸೇರಿಸಿ ಕುಕ್ಕರಿನಲ್ಲಿ, ಮೂರು ಸೀಟಿ ಕೂಗಿಸಿ. ಬೆಂದ ಕಾಳನ್ನು ಬಸಿದಿಟ್ಟುಕೊಳ್ಳಿ.

ಬಾಣಲೆಯಲ್ಲಿ ಒಗ್ಗರಣೆಗೆ ಸಾಸಿವೆ ಸಿಡಿಸಿ ಉದ್ದಿನಬೇಳೆ,ಇಂಗು,ಹುರಿದು, ಈರುಳ್ಳಿ, ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ ನಂತರ ಬೆಂದ ರಾಜ್ಮಾ ಕಾಳು, ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಉರಿ ಆರಿಸಿ, ನಿಂಬೆ ರಸ ಬೆರೆಸಿ.

ಶೇಂಗಾ ಕ್ಯಾರೆಟ್ ಚಟ್ನಿ

ಬೇಕಾಗುವ ಸಾಮಗ್ರಿ: ಕ್ಯಾರೆಟ್ ತುರಿ 1 ಕಪ್, ಶೇಂಗಾ ಬೀಜ 1/2 ಕಪ್, ಹುರಿಗಡಲೆ 1 ಚಮಚ, ಒಣಮೆಣಸಿನಕಾಯಿ 4-5,ಸ್ವಲ್ಪ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಬಾಣಲೆಯಲ್ಲಿ ಶೇಂಗಾ, ಒಣಮೆಣಸಿನಕಾಯಿ, ಹುಣಸೆಹಣ್ಣು ಎಲ್ಲವನ್ನು ಒಟ್ಟಿಗೆ ಹಾಕಿ ಹುರಿದುಕೊಳ್ಳಿ. ಈ ಮಿಶ್ರಣಕ್ಕೆ ಕ್ಯಾರೆಟ್ ತುರಿ, ಹುರಿಗಡಲೆ, ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ ನುಣ್ಣಗೆ ರುಬ್ಬಿ ಸಾಸಿವೆ ಇಂಗಿನ ಒಗ್ಗರಣೆ ಕೊಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.