ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಿಪಿ: ಚಿಕನ್‌ ಖಾದ್ಯ ವೈವಿಧ್ಯ

Last Updated 14 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ನಾನ್‌ವೆಜ್ ಪ್ರಿಯರಿಗೆ ಇಷ್ಟವಾಗುವಂತಹ, ಮನೆಯಲ್ಲೇ ಸುಲಭ, ಸರಳ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ವಿಶಿಷ್ಟ ಚಿಕನ್ ಖಾದ್ಯಗಳ ಬಗ್ಗೆ ವಿವರಿಸಿದ್ದಾರೆ ದೀಪಕ್ ಗೌಡ.

‘ಜಿಂಜರ್ ಚಿಕನ್’

ಬೇಕಾಗುವ ಸಾಮಗ್ರಿಗಳು: ಬೋನ್ ಲೆಸ್ ಚಿಕನ್ – ಅರ್ಧ ಕೆಜಿ, ಮೆಣಸಿನ ಪುಡಿ –ಒಂದು ಚಮಚ, ಶುಂಠಿ -ಬೆಳ್ಳುಳ್ಳಿ ಪೇಸ್ಟ್, ಕಾರ್ನ್‌ಫ್ಲವರ್ –ಒಂದು ಚಮಚ, ಮೈದಾ ಹಿಟ್ಟು –ಎರಡು ಚಮಚ, ಈರುಳ್ಳಿ-2, ಹಸಿ ಮೆಣಸಿನಕಾಯಿ-4, ಬೆಳ್ಳುಳ್ಳಿ, ಶುಂಠಿ, ಒಂದು ಮೊಟ್ಟೆ, ಸೋಯಾ ಸಾಸ್ –ಒಂದು ಕಪ್, ವೆನಿಗರ್ –ಒಂದು ಕಪ್, ಟೊಮೊಟೊ ಸಾಸ್ –ಒಂದು ಕಪ್, ಸಿಜ್ವನ್ ಸಾಸ್ -ಒಂದು ಕಪ್, ಖಾರದಪುಡಿ –ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಒಂದು ಪಾತ್ರೆಗೆ ಅರ್ಧ ಕೆ.ಜಿ ಚಿಕನ್, ಮೆಣಸಿನ ಪುಡಿ, ಶುಂಠಿ -ಬೆಳ್ಳುಳ್ಳಿ ಪೇಸ್ಟ್, ಒಂದು ಚಮಚ ಕಾರ್ನ್‌ಫ್ಲವರ್, ಮೈದಾ ಹಿಟ್ಟು -ಎರಡು ಚಮಚ, ಒಂದು ಮೊಟ್ಟೆಯನ್ನು ಬೆರೆಸಿ 15 ನಿಮಿಷಗಳ ಕಾಲ ನೆನೆಸಿಡಬೇಕು. ಬಳಿಕ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ನೆನೆಸಿಟ್ಟಿದ್ದ ಚಿಕನ್ ಅನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು. ನಂತರ ಒಂದು ಅಗಲವಾದ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ. ಈರುಳ್ಳಿ ಬೆಂದು ಕೆಂಪಾದ ಮೇಲೆ ಸೋಯಾ ಸಾಸ್, ವೆನಿಗರ್, ಟೊಮೊಟೊ ಸಾಸ್, ಸಿಜ್ವನ್ ಸಾಸ್, ಖಾರದಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅರಿಸಿನ -ಕಾಲು ಚಮಚ, 2 ಚಮಚದಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಫ್ರೈ ಮಾಡಿಕೊಂಡಿರುವ ಚಿಕನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 10ರಿಂದ 15 ನಿಮಿಷ ಬೇಯಲು ಬಿಡಿ. ಕೊನೆಯಲ್ಲಿ ಹೆಚ್ಚಿದ ಶುಂಠಿ, ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಈಗ ನೋಡು ನೋಡುತ್ತಿದ್ದಂತೆ ಬಿಸಿ ಬಿಸಿಯಾದ ಜಿಂಜರ್ ಚಿಕನ್ ರೆಡಿಯಾಗಿದೆ.

ಚಿಕನ್ ದೋ ಪೈಜಾ
ಚಿಕನ್ ದೋ ಪೈಜಾ

ಚಿಕನ್ ದೋ ಪೈಜಾ
ಬೇಕಾಗುವ ಸಾಮಗ್ರಿಗಳು:
ಚಿಕನ್- 1 ಕೆ.ಜಿ, ಈರುಳ್ಳಿ- 7, ಟೊಮೆಟೊ- 2, ಹಸಿ ಮೆಣಸಿನಕಾಯಿ -2, ರುಚಿಗೆ ತಕ್ಕಷ್ಟು ಉಪ್ಪು, ಒಂದು ಕಪ್ ಅಡುಗೆ ಎಣ್ಣೆ, ಸಾಸಿವೆ –ಒಂದು ಚಮಚ, ಅರಿಶಿನ ಪುಡಿ –ಒಂದು ಚಮಚ, ಖಾರದಪುಡಿ –ಒಂದು ಚಮಚ, ದನಿಯಾ ಪುಡಿ –ಒಂದು ಚಮಚ, ಗರಂ ಮಸಾಲ –ಒಂದು ಚಮಚ, ಕಸ್ತೂರಿ ಮೇಥಿ –ಒಂದು ಚಮಚ, ಮೊಸರು –ಅರ್ಧ ಕಪ್, ತುಪ್ಪ –ಎರಡು ಚಮಚ, ಗೋಡಂಬಿ –8, ಎಲಕ್ಕಿ –4, ಪಲಾವ್ ಎಲೆ –4, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ: ಒಂದು ಅಗಲವಾದ ಪಾತ್ರೆಗೆ 1 ಕೆ.ಜಿ ಚಿಕನ್, 3 ಕಪ್‌ ನೀರು ಅದಕ್ಕೆ ಸ್ವಲ್ಪ ಉಪ್ಪು ಮತ್ತು ಅರಿಸಿನ ಪುಡಿ ಹಾಕಿ ಬೇಯಿಸಿ ಇಟ್ಟುಕೊಳ್ಳಿ. ಪಕ್ಕದಲ್ಲಿ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ ಹಾಕಿ, ಟೊಮೊಟೊ, ಗೋಡಂಬಿ ಸೇರಿಸಿ ಬಣ್ಣ ಬದಲಾಗುವವರೆಗೂ ಹುರಿದು ನಂತರ ರುಬ್ಬಿಕೊಳ್ಳಬೇಕು. ಚಿಕನ್‌ ಅನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಹೋಳುಗಳಿಗೆ ಮಸಾಲೆ ಹಿಡಿಯುವವರೆಗೆ ಕೈಯಾಡಿಸಿ. ನಂತರ ಒಂದು ಕಪ್ ನೀರು ಹಾಕಿ ಮತ್ತೆ ಎಲ್ಲವನ್ನೂ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಚಿಕನ್ ಬೇಯುವವರೆಗೆ ಬೇಯಿಸಿ. ಚೆನ್ನಾಗಿ ಕುದ್ದು, ಮಾಂಸ ಬೆಂದು ಮಂದ ಆಗುವವರೆಗೂ ಕುದಿಸಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಈಗ ಚಿಕನ್ ದೋ ಪೇಜಾ ಸವಿಯಲು ರೆಡಿ.

ಕ್ಯಾಪ್ಸಿಕಂ ಚಿಕನ್ ಫ್ರೈ
ಕ್ಯಾಪ್ಸಿಕಂ ಚಿಕನ್ ಫ್ರೈ

ಕ್ಯಾಪ್ಸಿಕಂ ಚಿಕನ್ ಫ್ರೈ
ಬೇಕಾಗುವ ಸಾಮಗ್ರಿಗಳು:
ಚಿಕನ್ -ಅರ್ಧ ಕೆಜಿ, ಕ್ಯಾಪ್ಸಿಕಂ -2, ಈರುಳ್ಳಿ -2 ಟೊಮೆಟೊ -2, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ -ಒಂದು ಚಮಚ, ಖಾರದಪುಡಿ– ಒಂದು ಚಮಚ, ಕರಿ ಮೆಣಸಿನ ಪುಡಿ –ಒಂದು ಚಮಚ, ಗರಂ ಮಸಾಲ –ಒಂದು ಚಮಚ, ನಿಂಬೆ ಹಣ್ಣಿನ ರಸ -ಒಂದು ಚಮಚ, ಪುದೀನ -ಒಂದು ಕಪ್, ಕೊತ್ತಂಬರಿ ಸೊಪ್ಪು -ಒಂದು ಕಪ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಒಂದು ಪಾತ್ರೆಗೆ ಚಿಕನ್ ಹಾಕಿಕೊಂಡು ನೀರು, ಅರಿಸಿನ ಪುಡಿ, ಸ್ವಲ್ಪ ಉಪ್ಪನ್ನು ಬೆರೆಸಿ ಮುಕ್ಕಾಲು ಭಾಗ ಬೇಯಿಸಿಕೊಳ್ಳಿ. ಪಕ್ಕದಲ್ಲಿ ಮತ್ತೊಂದು ಪಾತ್ರೆಗೆ ಐದು ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಟೊಮೊಟೊ, ಶುಂಠಿ– ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಇದಕ್ಕೆ ಬೇಯಿಸಿ ಇಟ್ಟುಕೊಂಡಿದ್ದ ಚಿಕನ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಜತೆಗೆ ಕರಿ ಮೆಣಸಿನ ಪುಡಿ, ಗರಂ ಮಸಾಲ ಹೆಚ್ಚಿದ ಪುದಿನ, ನಿಂಬೆ ಹಣ್ಣಿನ ರಸವನ್ನು ಹಾಕಿ ಬೆರೆಸಿಕೊಡಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ.

ಡ್ರೈ ಫ್ರೈ ಆಗಿರುವ ಕ್ಯಾಪ್ಸಿಕಂ ಚಿಕನ್ ಅನ್ನು ಚಿಕನ್ ಸಾಂಬಾರ್, ಬೆಳೆ ಸಾಂಬಾರ್, ರಸಂ, ಚಪಾತಿ ಜತೆಗೂ ತಿನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT