ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೆಸಿಪಿ | ಕೆಸುವಿನ ಎಲೆಯ ರುಚಿ ರುಚಿಯಾದ ಖಾದ್ಯಗಳು: ಇಲ್ಲಿದೆ ಮಾಹಿತಿ

ಪ್ರಭಾ ಶಾಸ್ತ್ರಿ
Published : 17 ಆಗಸ್ಟ್ 2024, 0:40 IST
Last Updated : 17 ಆಗಸ್ಟ್ 2024, 0:40 IST
ಫಾಲೋ ಮಾಡಿ
Comments
ಮಳೆಗಾಲ ಬಂತೆಂದರೆ ಕೆಸುವು ಎಲ್ಲೆಂದರಲ್ಲಿ ಹುಟ್ಟಿ ಬೆಳೆಯುತ್ತದೆ, ಕೆಸುವಿನಲ್ಲಿ ಅನೇಕ ವಿಧಗಳಿವೆ ಕರಿಕೆಸು, ಸಲಾಡ್ ಕೆಸು, ಮರೆಗೆಸು, ಮಕ್ಕಳಕೆಸು, ಹಾಲು ಕೆಸು ಇವು ಬಾಯಿ ತುರಿಸದ ಕೆಸುಗಳು, ಕೆಸುವಿನ ಎಲೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಬಿ, ಫೋಲೆಟ್, ಮ್ಯಾಂಗನಿಸ್, ತಾಮ್ರ, ಪೊಟ್ಯಾಷಿಯಂ, ಕಬ್ಬಿಣದಂಶ ಇರುತ್ತದೆ. ಸಾಕಷ್ಟು ನಾರಿನಂಶ ಕೂಡ ಇದೆ. ಕೆಸುವಿನ ಎಲೆಯಲ್ಲಿ ವಿಟಮಿನ್ ಹಾಗೂ ಆ್ಯಂಟಿ ಆಕ್ಸಿಡೆಂಟ್ ಅಂಶವಿರುವುದ್ದರಿಂದ ಕೆಸುವಿನ ಎಲೆ ಅಡುಗೆ ಸೇವಿಸುವುದ್ದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಇಲ್ಲಿದೆ ಕೆಸುವಿನ ಎಲೆಯ ರುಚಿಕರ ತಿನಿಸುಗಳು ಮಾಡಿ ಸವಿದು ನೋಡಿ.
 ಕೆಸುವಿನ ಸೊಪ್ಪಿನ ಅಂಬೋಡೆ.
ಕೆಸುವಿನ ಸೊಪ್ಪಿನ ಆಂಬೊಡೆ
ಕೆಸುವಿನ ಸೊಪ್ಪಿನ ಆಂಬೊಡೆ

ಬೇಕಾಗುವ ಸಾಮಗ್ರಿಗಳು: ಕಡ್ಲೆಬೇಳೆ – 1 ಬಟ್ಟಲು, ಕೆಸುವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು – 1 ಬಟ್ಟಲು, ಹಸಿ ಮೆಣಸು – 4, ಕರಿಯಲು ಎಣ್ಣೆ, ಉಪ್ಪು.
ಮಾಡುವ ವಿಧಾನ:  ಕಡ್ಲೆಬೇಳೆಯನ್ನು ನಾಲ್ಕು ಗಂಟೆ ನೆನಸಿಕೊಂಡು, ನೀರು ಬಸಿದು ತರಿತರಿಯಾಗಿ ರುಬ್ಬಿಕೊಳ್ಳಿ, ಅದಕ್ಕೆ ಹೆಚ್ಚಿದ ಕೆಸುವಿನ ಸೊಪ್ಪು, ಹೆಚ್ಚಿದ ಹಸಿಮೆಣಸು, ಉಪ್ಪು ಹಾಕಿ ಕಲೆಸಿ, ಎಣ್ಣೆ ಕಾಯಿಸಲು ಇಟ್ಟು ಕಲೆಸಿದ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಕೈಯಲ್ಲಿ ತಟ್ಟಿ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ ಗರಿಗರಿಯಾದ ಅಂಬೋಡೆ ರೆಡಿ.

ಕೆಸುವಿನ ಸೊಪ್ಪಿನ ಚಟ್ಟಿ
ಕೆಸುವಿನ ಸೊಪ್ಪಿನ ಚಟ್ನಿ
ಕೆಸುವಿನ ಸೊಪ್ಪಿನ ಚಟ್ನಿ

ಬೇಕಾಗುವ ಸಾಮಾಗ್ರಿಗಳು: ಕೆಸುವಿನ ಎಲೆ – 10 ಈರೂಳಿ - 1 ಅಕ್ಕಿ – 1 ಕಪ್ ಕಾಯಿತುರಿ – ಕಾಲು ಕಪ್ಪು ಕಡ್ಲೆಬೇಳೆ – 5 ಚಮಚ ಉದ್ದಿನ ಬೇಳೆ – 1 ಚಮಚ ಧನಿಯಾ – 3 ಚಮಚ ಮೆಂತ್ಯ – 2 ಚಮಚ ಜೀರಿಗೆ – 1 ಚಮಚ ಕೆಂಪು ಮೆಣಸು – 6 ಹುಣಸೆಹಣ್ಣು ಅಡಿಕೆ ಗಾತ್ರದ್ದು ಕರಿ ಬೇವು – 1 ಕಡ್ಡಿ ಉಪ್ಪು ಬೆಲ್ಲ – 1 ಚಮಚ ಎಣ್ಣೆ ಅರ್ಧ ಕಪ್.

ಮಾಡುವ ವಿಧಾನ: ಅಕ್ಕಯನ್ನು ಎರಡು ಗಂಟೆ ಕಾಲ ನೆನಸಿಕೊಳ್ಳಬೇಕು ಕೆಂಪು ಮೆಣಸಿನ ಕಾಯಿ ಮೆಂತ್ಯ ಧನಿಯಾ ಜೀರಿಗೆ ಉದ್ದಿನ ಬೇಳೆ ಕಡ್ಲೆ ಬೇಳೆ ಕರಿ ಬೇವು ಎಲ್ಲಾವನ್ನು ಹಾಕಿ ಎರಡು ಚಮಚ ಎಣ್ಣೆ ಹಾಕಿ ಹುರಿದುಕೊಂಡು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಹುಣಸೆ ಹಣ್ಣು ತೆಂಗಿನ ತುರಿ ಹಾಕಿ ರುಬ್ಬಿ ನೆನಸಿದ ಅಕ್ಕಿಯನ್ನು ನೀರು ಬಸಿದು ಹಾಕಿ ಗಟ್ಟಿಯಾಗಿ ರುಬ್ಬಿ ತೆಗೆಯಿರಿ. ಅದಕ್ಕೆ ಉಪ್ಪು ಬೆಲ್ಲ ಸಣ್ಣಗೆ ಹೆಚ್ಚಿದ ಈರುಳ್ಳಿ ಸಣ್ಣಗೆ ಹೆಚ್ಚಿದ ಕೆಸುವಿನ ಸೊಪ್ಪು ಹಾಕಿ ಕಲೆಸಿ ತವಾ ಒಲೆಯ ಮೇಲೆ ಇಟ್ಟು ಕಾದ ಮೇಲೆ ಕಲೆಸಿದ ಹಿಟ್ಟನ್ನು ಹರಡಿ ಎಣ್ಣೆ ಹಾಕಿ ಎರಡು ಕಡೆ ಬೇಯಿಸಿ ತೆಗೆಯಿರಿ.                               

ಕೆಸುವಿನ ಸೊಪ್ಪಿನ ಬೊಂಡಾ
ಕೆಸುವಿನ ಸೊಪ್ಪಿನ ಬೋಂಡ
ಕೆಸುವಿನ ಸೊಪ್ಪಿನ ಬೋಂಡ

ಬೇಕಾಗುವ ಸಾಮಗ್ರಿಗಳು: ಕೆಸುವಿನ ಎಲೆ – 4 ಕಡ್ಲೆಹಿಟ್ಟು – 1 ಕಪ್ಪು ಕೆಂಪು ಮೆಣಸಿನ ಪುಡಿ – 2 ಚಮಚ ಉಪ್ಪು ಟೂತ್ ಪಿಕ್ ಕರಿಯಲು ಎಣ್ಣೆ.

ಮಾಡುವ ವಿಧಾನ: ಕಡ್ಲೆ ಹಿಟ್ಟು ಕೆಂಪು ಮೆಣಸಿನ ಪುಡಿ ಉಪ್ಪು ಹಾಕಿ ಮಿಕ್ಸ್ ಮಾಡಿ ನೀರು ಹಾಕಿ ಬೊಂಡಾ ಹಿಟ್ಟಿನ ಹದಕ್ಕೆ ಕಲೆಸಿ ಎಣ್ಣೆ ಕಾಯಲು ಇಟ್ಟು ಕೆಸುವಿನ ಎಲೆಯನ್ನು ಕಟ್ ಮಾಡಿಕೊಂಡು ಜಿಗ್‌ಜಾಗ್ ಆಗಿ ಮಡಚಿ ಟೂತ್ ಪಿಕ್ ಚುಚ್ಚಿ ಕಲೆಸಿಟ್ಟ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ.

 ಕೆಸುವಿನ ಸೊಪ್ಪಿನ ಪಕೋಡ

ಬೇಕಾಗುವ ಸಾಮಗ್ರಿಗಳು:  ಕೆಸುವಿನ ಎಲೆ ಹೆಚ್ಚಿದ್ದು- 1 ಬಟ್ಟಲು ಕಡ್ಲೆಹಿಟ್ಟು- 1 ಬಟ್ಟಲು ಕೆಂಪು ಮೆಣಸಿನ ಪುಡಿ – 1 ಚಮಚ ಹಸಿ ಮೆಣಸು – 2 ಉಪ್ಪು ಕರೆಯಲು ಎಣ್ಣೆ.

ಮಾಡುವ ವಿಧಾನ: ಹೆಚ್ಚಿದ ಕೆಸುವಿನ ಎಲೆ ಕಡ್ಲೆಹಿಟ್ಟು ಕೆಂಪು ಮೆಣಸಿನ ಪುಡಿ ಹೆಚ್ಚಿದ ಹಸಿಮಣಸು ಹಾಕಿ ಉಪ್ಪು ಹಾಕಿ ಕಲೆಸಿ ನೀರು ಹಾಕಿ ಗಟ್ಟಿಯಾಗಿ ಪಕೋಡ ಹಿಟ್ಟಿನಂತೆ ಕಲೆಸಿ ಒಲೆಯ ಮೇಲೆ ಎಣ್ಣೆ ಕಾಯಿಸಲು ಇಟ್ಟು ಕಾದ ಎಣ್ಣೆಗೆ ಕಲೆಸಿದ ಹಿಟ್ಟನ್ನು ಪಕೋಡ ಹಾಕಿದ ಹಾಗೆ ಸ್ವಲ್ಪ ಸ್ವಲ್ಪವೇ ಹಾಕಿ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗು ಕರಿದು ತೆಗೆಯಿರಿ ಗರಿಗರಿಯಾದ ಪಕೋಡ ರೆಡಿ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT