ಮಧ್ಯಾಹ್ನ ಹೊಟ್ಟೆ ತುಂಬ ಊಟ ಮಾಡಿದ್ದರೂ ಸಂಜೆಯಾಗುತ್ತಿದ್ದಂತೆಯೇ ಯಾವುದಾದರೂ ಸ್ನ್ಯಾಕ್ಸ್ನತ್ತ ಮನಸ್ಸು ಸೆಳೆಯುವುದು ಸಹಜ. ಪ್ರತಿಬಾರಿಯೂ ಹೊರಗೆ ಹೋಗಿಯೇ ಅವುಗಳನ್ನು ತಿನ್ನುವುದು ಸಮಯದ ಅಭಾವದಿಂದ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಸ್ವಲ್ಪ ಸಮಯದಲ್ಲಿ ಮನೆಯಲ್ಲೇ ಅವುಗಳನ್ನು ಮಾಡಿ ಸವಿದರೆ, ಹೊರಗೆ ತಿಂದು ಬಂದ ನಂತರ ‘ಏನೇನು ಹಾಕಿದ್ದರೋ’ ಎಂದು ಆತಂಕದಿಂದ ಹಲುಬುವುದೂ ತಪ್ಪುತ್ತದೆ, ಜೇಬಿಗೆ ಹೆಚ್ಚು ಹೊರೆ ಬೀಳುವುದೂ ತಪ್ಪುತ್ತದೆ. ಬನ್ನಿ, ಅಂತಹ ಕೆಲವು ಸ್ನ್ಯಾಕ್ಸ್ ರೆಸಿಪಿಗಳನ್ನು ಮಾಡಿ ನೋಡೋಣ...

ಮಂಡಕ್ಕಿ ಚೂಡಾ...

ಬೇಕಾಗುವ ಸಾಮಾಗ್ರಿ: ಮಂಡಕ್ಕಿ 250 ಗ್ರಾಂ ಒಣಕೊಬ್ಬರಿ ಚಿಕ್ಕದಾಗಿ ಕತ್ತರಿಸಿದ್ದು 3/4 ಕಪ್ ಹುರಿಗಡಲೆ 1 ಕಪ್ ಜಜ್ಜಿದ ಬೆಳ್ಳುಳ್ಳಿ 50 ಎಸಳು ಕರಿಬೇವು ಒಂದು ಹಿಡಿ ಶೇಂಗಾ 3/4 ಕಪ್ ಅರಸಿನ 1 ಟೇಬಲ್ ಚಮಚ ಜೀರಿಗೆ ಪುಡಿ 1 ಟೇಬಲ್ ಚಮಚ ನಿಂಬೆಹಣ್ಣು 1/2 ಅಚ್ಚಖಾರದ ಪುಡಿ 1/2 ಟೇಬಲ್ ಚಮಚ ರುಚಿಗೆ ತಕ್ಕಷ್ಟು ಉಪ್ಪು ಎಳ್ಳು 1 ಟೇಬಲ್ ಚಮಚ ಎಣ್ಣೆ 3/4 ಕಪ್ ಸಕ್ಕರೆ ಪುಡಿ 1 ಟೇಬಲ್ ಚಮಚ ಸಾಸಿವೆ 1/2 ಟೇಬಲ್ ಚಮಚ.

ತಯಾರಿಸುವ ವಿಧಾನ: ಬಾಣಲೆ ಬಿಸಿ ಮಾಡಿ ಎಣ್ಣೆಯನ್ನು ಹಾಕಿಕೊಳ್ಳಿ. ಬಿಸಿಯಾದ ನಂತರ ಶೇಂಗಾ ಹುರಿಗಡಲೆ ಒಣಕೊಬ್ಬರಿಯನ್ನು ಒಂದೊಂದಾಗಿ ಹುರಿದು ಮಂಡಕ್ಕಿಗೆ ಸೇರಿಸಿ. ನಂತರ ಕರಿಬೇವು ಬೆಳ್ಳುಳ್ಳಿ ಸಾಸಿವೆ ಎಳ್ಳನ್ನು ಅದೇ ಎಣ್ಣೆಯಲ್ಲಿ ಹಾಕಿ ಹುರಿದುಕೊಳ್ಳಿ. ನಂತರ ಒಲೆಯನ್ನು ಆರಿಸಿ ಅಚ್ಚಖಾರದ ಪುಡಿ ಜೀರಿಗೆ ಪುಡಿ ಅರಸಿನದ ಪುಡಿಯನ್ನು ಅವುಗಳೊಂದಿಗೆ ಸೇರಿಸಿ. ಸಕ್ಕರೆ ಪುಡಿ ಉಪ್ಪು ಮತ್ತು ನಿಂಬೆರಸವನ್ನು ಮಂಡಕ್ಕಿಗೆ ಸೇರಿಸಿ ನಿಧಾನವಾಗಿ ಮಿಶ್ರ ಮಾಡಿ. ರುಚಿಕರವಾದ ಮಂಡಕ್ಕಿ ಚೂಡಾ ತಯಾರಾಗುತ್ತದೆ. ಒಮ್ಮೆ ತಯಾರಿಸಿ ಇಟ್ಟರೆ ತಿಂಗಳಾದರೂ ಹಾಳಾಗುವುದಿಲ್ಲ.

ಜಾಲ್ ಮುರೈ/ ಜಾಲ್ ಮುರಿ...

ಬೇಕಾಗುವ ಸಾಮಗ್ರಿ: ಚುರುಮುರಿ ಮಂಡಕ್ಕಿ 4 ಕಪ್ ಸೇವ್ 1/4 ಕಪ್ ಶೇಂಗಾ 1/4 ಕಪ್ ಆಲೂಗಡ್ಡೆ 1/2 ಕಪ್ ಸೌತೆಕಾಯಿ 1/2 ಕಪ್ ಹಸಿಮೆಣಸಿನಕಾಯಿ 2 ಟೀ ಚಮಚ ಕೊತ್ತಂಬರಿ ಸೊಪ್ಪು ಸ್ವಲ್ಪ ಟೊಮೆಟೊ 1/2 ಕಪ್ ಕ್ಯಾರೆಟ್ ತುರಿ 1/2 ಕಪ್ ಹುಣಸೆರಸ 1/4 ಕಪ್ ಸಾಸಿವೆ ಎಣ್ಣೆ 3 ಟೀ ಚಮಚ ಜೀರಿಗೆ ಪುಡಿ 3 ಟೀ ಚಮಚ ಉಪ್ಪು 1 ಟೀ ಚಮಚ ಬ್ಲ್ಯಾಕ್ ಸಾಲ್ಟ್ 1 ಟೀ ಚಮಚ ಅಮ್ಚೂರ್ ಪೌಡರ್ 1 ಟೀ ಚಮಚ ಅಚ್ಚಖಾರದ ಪುಡಿ 1 ಟೀ ಚಮಚ ಗರಂ ಮಸಾಲೆ 1 ಟೀ ಚಮಚ ಚಿಕ್ಕದಾಗಿ ಹೆಚ್ಚಿದ ಶುಂಠಿ 1 ಟೀ ಚಮಚ.

ತಯಾರಿಸುವ ವಿಧಾನ: ಆಲೂಗಡ್ಡೆಯನ್ನು ಬೇಯಿಸಿ ಕತ್ತರಿಸಿಟ್ಟುಕೊಳ್ಳಿ. ಕ್ಯಾರೆಟ್ ತುರಿದು ಕೊಳ್ಳಿ. ಟೊಮೆಟೊ ಈರುಳ್ಳಿ ಹಸಿಮೆಣಸಿನಕಾಯಿಯನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಹುಣಸೆರಸವನ್ನು ತಯಾರಿಸಿ ಮಸಾಲೆ ಪದಾರ್ಥಗಳನ್ನು ಅದರಲ್ಲಿ ಹಾಕಿ. ಅವುಗ ಹುಣಸೆರಸದಲ್ಲಿ ಚೆನ್ನಾಗಿ ಸೇರಿಕೊಳ್ಳುತ್ತವೆ. ಬಾಣಲೆಗೆ ಮಂಡಕ್ಕಿ ಹಾಕಿ ಎರಡರಿಂದ ಮೂರು ನಿಮಿಷ ಹುರಿಯಿರಿ. ಹಾಗೇ ಶೇಂಗಾ ಬೀಜವನ್ನೂ ಹುರಿದುಕೊಳ್ಳಿ. ದೊಡ್ಡದಾದ ಪಾತ್ರೆಯಲ್ಲಿ ಹುರಿದ ಪದಾರ್ಥಗಳು ಮತ್ತು ಮಸಾಲೆ ಪದಾರ್ಥಗಳನ್ನು ಸೇರಿಸಿ. ಸಾಸಿವೆ ಎಣ್ಣೆಯನ್ನು ಸೇರಿಸಿ ನಿಧಾನವಾಗಿ ಮಿಶ್ರ ಮಾಡಿ. ನಂತರ ಸೇವ್ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ರುಚಿಯಾದ ಜಾಲ್ ಮುರೈ ಅನ್ನು ಹೀಗೆ ಸುಲಭವಾಗಿ ತಯಾರಿಸಿ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.