ಶನಿವಾರ, ಜನವರಿ 22, 2022
16 °C

ಆರೋಗ್ಯಕರ ಸೂಪ್‌ಗಳು

ನಿಕಿತಾ Updated:

ಅಕ್ಷರ ಗಾತ್ರ : | |

Prajavani

ಸಬ್ಬಸಿಗೆ ಸೊಪ್ಪಿನ ಸೂಪ್

ಬೇಕಾಗುವ ಸಾಮಗ್ರಿಗಳು: ಸಬ್ಬಸ್ಸಿಗೆ ಸೊಪ್ಪು -1 ಕಟ್, ಈರುಳ್ಳಿ 1/2, ಕ್ಯಾರೆಟ್ -1/2, ಬೆಳ್ಳುಳ್ಳಿ - 6 ಎಸಳು, ಉಪ್ಪು- ರುಚಿಗೆ ತಕ್ಕಷ್ಟು, ಅಚ್ಚ ಕಾರದಪುಡಿ -1/2 ಟೇಬಲ್ ಚಮಚ, ಕಾಳುಮೆಣಸಿನ ಪುಡಿ -1/2ಟೀ ಚಮಚ

ತಯಾರಿಸುವ ವಿಧಾನ: ಮೊದಲು ಕುಕ್ಕರ್‌ಗೆ ಸಬ್ಬಸ್ಸಿಗೆ ಸೊಪ್ಪು, ಈರುಳ್ಳಿ, ಕ್ಯಾರೆಟ್, ಬೆಳ್ಳುಳ್ಳಿ ಮತ್ತು ಒಂದು ಕಪ್ ನೀರು ಹಾಕಿ ಒಂದು ಸೀಟಿ ಕೂಗಿಸಿಕೊಳ್ಳಬೇಕು. ಕುಕ್ಕರ್ ತಣ್ಣಗಾದ ನಂತರ ಸೊಪ್ಪು ಮತ್ತು ತರಕಾರಿಯನ್ನು ಶೋಧಿಸಿಕೊಳ್ಳಬೇಕು. ಸೊಪ್ಪು ಮತ್ತು ತರಕಾರಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಒಂದು ಬಾಣಲೆಗೆ ಹಾಕಿ ಅದರ ಜೊತೆಗೆ ಶೋಧಿಸಿದ ನೀರನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಖಾರದ ಪುಡಿಯನ್ನು ಹಾಕಿ 2 ನಿಮಿಷ ಕುದಿಸಬೇಕು. ಕುದಿಸಿದ ನಂತರ ಕಾಳುಮೆಣಸಿನ ಪುಡಿ ಮತ್ತು ನಿಂಬೆ ರಸವನ್ನು ಹಾಕಿ ಕೈಯಾಡಿಸಿದರೆ ಬಿಸಿಬಿಸಿಯಾದ ಸಬ್ಬಸ್ಸಿಗೆ ಸೊಪ್ಪಿನ ಸೂಪ್ ಸವಿಯಲು ಸಿದ್ಧ.

***

ನುಗ್ಗೆಕಾಯಿ ಸೂಪ್

ಬೇಕಾಗುವ ಸಾಮಗ್ರಿಗಳು: ನುಗ್ಗೆಕಾಯಿ -3, ಈರುಳ್ಳಿ -1, ಟೊಮೆಟೊ -1, ಶುಂಠಿ -1/2 ಇಂಚು, ಬೆಳ್ಳುಳ್ಳಿ - 6 ಎಸಳು, ಉಪ್ಪು- ರುಚಿಗೆ ತಕ್ಕಷ್ಟು, ಅರಿಶಿನ ಪುಡಿ -1/2 ಟೇಬಲ್ ಚಮಚ, ಜೀರಿಗೆ ಪುಡಿ -1 ಟೇಬಲ್‌ ಚಮಚ, ಕಾಳುಮೆಣಸು -1 ಟೇಬಲ್‌ ಚಮಚ, ಕೊತ್ತಂಬರಿ ಸೊಪ್ಪು - ಸ್ವಲ್ಪ

ತಯಾರಿಸುವ ವಿಧಾನ: ಮೊದಲು ಕುಕ್ಕರ್‌ಗೆ ಹೆಚ್ಚಿದ ನುಗ್ಗೆಕಾಯಿ, ಈರುಳ್ಳಿ ಟೊಮೆಟೊ, ಶುಂಠಿ, ಬೆಳ್ಳುಳ್ಳಿ , ಉಪ್ಪು, ಅರಿಶಿನ ಪುಡಿ ಜೀರಿಗೆ ಪುಡಿ ಮತ್ತು 2 ಕಪ್ ನೀರನ್ನು ಹಾಕಿ 3 ಸೀಟಿ ಕೂಗಿಸಿಕೊಳ್ಳಬೇಕು. ಕುಕ್ಕರ್ ತಣ್ಣಗಾದ ಆದನಂತರ ಬೇಯಿಸಿದ ತರಕಾರಿಗಳನ್ನು ನೀರಿನಿಂದ ಬೇರ್ಪಡಿಸಿ ನುಗ್ಗೆಕಾಯಿ ತಿರುಳನ್ನು ಸಿಪ್ಪೆಯಿಂದ ಬೇರೆ ಪಡಿಸಿ ಉಳಿದ ತರಕಾರಿಯ ಜೊತೆಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಬೇಯಿಸಿದ ನೀರಿನ ಜೊತೆ ಒಂದು ಬಾಣಲಿಗೆ ಹಾಕಿ ಅದಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ 8 ನಿಮಿಷ ಕುದಿಸಬೇಕು. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸೂಪ್ ಸಿದ್ಧ.

***

ವಾಲ್ನಟ್ ಬ್ರೊಕೊಲಿ ಸೂಪ್

ಬೇಕಾಗುವ ಸಾಮಗ್ರಿಗಳು: ಪಾಲಕ್ ಎಲೆ -6, ಬ್ರೊಕೊಲಿ -1, ಬೆಣ್ಣೆ -2 ಟೇಬಲ್ ಸ್ಪೂನ್, ಈರುಳ್ಳಿ- 1, ಬೆಳ್ಳುಳ್ಳಿ- 4, ಉಪ್ಪು- ರುಚಿಗೆ ತಕ್ಕಷ್ಟು, ವಾಲ್ನಟ್- 15, ಹಾಲು 1 ಕಪ್, ಕಾಳುಮೆಣಸಿನ ಪುಡಿ -1/2 ಟೇಬಲ್ ಚಮಚ, ಹಾಲಿನ ಕೆನೆ -1 ಟೇಬಲ್ ಚಮಚ

ತಯಾರಿಸುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಪಾಲಕ್ ಎಲೆ ಮತ್ತು ಹೆಚ್ಚಿದ ಬ್ರೊಕೊಲಿಯನ್ನು ಎರಡು ನಿಮಿಷ ನೀರಿನಲ್ಲಿ ಕುದಿಸಿಕೊಳ್ಳಬೇಕು. ನಂತರ ಒಂದು ಬಾಣಲಿಗೆ ಬೆಣ್ಣೆ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಉಪ್ಪು ಹಾಕಿ. ಈರುಳ್ಳಿ ಬೆಂದ ನಂತರ ವಾಲ್ನಟ್ ಅನ್ನು ಹಾಕಿ 2 ನಿಮಿಷ ಕೈಯಾಡಿಸಬೇಕು ನಂತರ ಬೇಯಿಸಿದ ಬ್ರೊಕೊಲಿ ಮತ್ತು ಪಾಲಕ್, 2 ಕಪ್ ನೀರು ಹಾಕಿ 10 ನಿಮಿಷ ಬೇಯಿಸಬೇಕು. ಇದು ತಣ್ಣಗಾದ ನಂತರ ಚೆನ್ನಾಗಿ ರುಬ್ಬಿಕೊಳ್ಳಬೇಕು. ಕೊನೆಗೆ ಒಂದು ಬಾಣಲೆಗೆ ಒಂದು ಟೇಬಲ್ ಚಮಚ ಬೆಣ್ಣೆ , ಹಾಲು ಮತ್ತು ರುಬ್ಬಿದ ಮಿಶ್ರಣವನ್ನು ಹಾಕಿ ನಾಲ್ಕು ನಿಮಿಷ ಬೇಯಿಸಬೇಕು ನಂತರ ಕಾಳುಮೆಣಸಿನ ಪುಡಿ ಹಾಗೂ ಹಾಲಿನ ಕೆನೆಯನ್ನು ಹಾಕಿ ಕೈಯಾಡಿಸಿ. ಮನೆಮಂದಿ ಎಲ್ಲಾ ಕೂತು ಸೂಪ್‌ ಸವಿಯಿರಿ.

–ಇನ್‌ಸ್ಟಾಗ್ರಾಮ್: niki_recipe

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು